ನನ್ನ ವಿಚಾರಕ್ಕೆ ಸ್ಪಂದಿಸಿದ ಸಚಿವರು ತಕ್ಷಣ KSRTC DC ಅವರನ್ನು ಕರೆದು ಸಾರ್ವಜನಿಕ ರ ಸಮ್ಮುಖದಲ್ಲಿ ತಕ್ಷಣ ನನ್ನ ಬೇಡಿಕೆ ಯಂತೆ 4 ಬಸ್ ಗಳನ್ನು ಕೊಡುವಂತೆ ಆದೇಶಿ ಸಿದ್ದಾರೆ….
1 min read
ನೆನ್ನೆ ಸಕಲೇಶಪುರ ದಲ್ಲಿ ರಾಜ್ಯ ಅಬಕಾರಿ ಸಚಿವ ಹಾಗೂ ಹಾಸನ ಉಸ್ತುವಾರಿ ಸಚಿವ ಶಿವಲಿಂಗೆ ಗೌಡರ ನೇತೃತ್ವದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ದ ಸಭೆಯಲ್ಲಿ ಸಕಲೇಶಪುರ ಮೂಡಿಗೆರೆ ಮದ್ಯೆ ಹಾನುಬಾಳು ಮಾರ್ಗವಾಗಿ ಬಸ್ ಗಳ ಸಂಚಾರ ಸಮಸ್ಯೆ ಇದ್ದು. ಈಗ ಇರುವ ಬಸ್ ಗಳು ಎಕ್ಸ್ಪ್ರೆಸ್ ದರ ವಸೂಲು ಮಾಡುತ್ತಿದ್ದು. ಈ ಭಾಗಕ್ಕೆ ಪ್ರತಿ 40 ನಿಮಿಷಕ್ಕೆ ಸಕಲೇಶಪುರ ಮೂಡಿಗೆರೆ ಮದ್ಯೆ ಎರಡು ಕಡೆ ಇಂದ ಬಸ್ ಗಳು ಓಡಾಟ ಮಾಡಬೇಕು. ಈ ಭಾಗಕ್ಕೆ ಪ್ರತ್ಯೇಕ 4 ಬಸ್ ಗಳು ಬೇಕು. ಅವನ್ನ ಗ್ರಾಮೀಣ ಸಾರಿಗೆ ಆಗಿ ಬಸ್ ಸಂಚಾರ ಮಾಡಬೇಕು ಕೈ ಅಡ್ಡ ಹಾಕಿದ ಕಡೆ ನಿಲ್ಲಿಸುವ ಹಾಗೆ ಬಸ್ ವ್ಯವಸ್ಥೆ ಇರಬೇಕು ಮತ್ತು ಸೆಟ್ಲ್ ದರದಲ್ಲಿ ಬಸ್ ಓಡಿಸಬೇಕು ಎಂದು ಸಚಿವರಿಗೆ ಪತ್ರ ಕೊಟ್ಟು ಬಹಿರಂಗ ಸಂವಾದ ದಲ್ಲಿ ಈ ವಿಚಾರ ವನ್ನು ತಿಳಿಸಿದ್ದೇನೆ
ನನ್ನ ವಿಚಾರಕ್ಕೆ ಸ್ಪಂದಿಸಿದ ಸಚಿವರು ತಕ್ಷಣ KSRTC DC ಅವರನ್ನು ಕರೆದು ಸಾರ್ವಜನಿಕ ರ ಸಮ್ಮುಖದಲ್ಲಿ ತಕ್ಷಣ ನನ್ನ ಬೇಡಿಕೆ ಯಂತೆ 4 ಬಸ್ ಗಳನ್ನು ಕೊಡುವಂತೆ ಆದೇಶಿ ಸಿದ್ದಾರೆ
ನೋಡಬೇಕು ಮುಂದಿನ ದಿನಗಳಲ್ಲಿ ಹೇಗೆ ಜಾರಿ ಆಗುತ್ತದೆ ಅಂತ
ಪ್ರಯತ್ನ ಪಟ್ಟಿದ್ದೇನೆ ಇನ್ನು ನೋಡಬೇಕು
ಹಾಗೆ ಸಕಲೇಶಪುರ ನಗರದಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಹಾಗೂ ಕೆಲವು ಕಡೆ ಇಲ್ಲದಿರುವ ಬಗ್ಗೆ ಸಹ ಗಮನ ಸೆಳೆದಿದ್ದೇನೆ. ಅದನ್ನು ಸ್ಥಳೀಯ ಶಾಸಕರು ಮಾಡಬೇಕು ಅಂತ ಹೇಳಿದ್ದಾರೆ, 3 ವರ್ಷದಿಂದ ಇರುವರೆಗೂ ಇದರ ಬಗ್ಗೆ ಗಮನ ಸೆಳೆದಿದ್ದೇನೆ ಹಾಗೂ ಶಾಸಕರಿಗೂ ಸಮಸ್ಯೆ ಬಗ್ಗೆ ಅರಿವಿದೆ. ದಿನ ನಿತ್ಯ ಹಲವು ವರ್ಷಗಳಿಂದ ನೋಡಿರುವ ಸಮಸ್ಯೆ. ಇನ್ನಾದರೂ ಈ ಸಮಸ್ಯೆ ಬಗೆ ಹರಿಯ ಬಹುದಾ
✍️ ಅವರೇಕಾಡು ಪೃಥ್ವಿ

