ಮೂಡಿಗೆರೆ ತಾಲ್ಲೂಕಿನ ಹೊಯ್ಸಳ ಕ್ರೀಡಾಂಗಣ ಮೂಡಿಗೆರೆ ಇಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ ಮಾಡಲಾಯಿತು…..
1 min read
ಮೂಡಿಗೆರೆ ತಾಲ್ಲೂಕಿನ ಹೊಯ್ಸಳ ಕ್ರೀಡಾಂಗಣ ಮೂಡಿಗೆರೆ ಇಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ ಮಾಡಲಾಯಿತು

ಈ ಕ್ರೀಡಾಕೂಟವು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕ್ರಿಯೆಟಿವ್ ಮೈಂಡ್ಸ್, ಯೂತ್ ಅಸೋಶಿಯೇಶನ್ ಸಹಯೋಗದಲ್ಲಿ ನಡೆಸಲಾಯಿತು.
ಈ ಒಂದು ಕ್ರೀಡಾಕೂಟದ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ್ರೀಡಾಧಿಕಾರಿ ವಿನುತಾ ರವರು, ಈ ಒಂದು ಕ್ರೀಡೆಯನ್ನು ಯಾವುದೇ ವಯಸ್ಸಿನ ಮಾನದಂಡವನ್ನು ಬಳಸಿಲ್ಲ ಬದಲಾಗಿ ಪುರುಷರು ಮಹಿಳೆಯರು ಎಂದು ವಿಂಗಡಿಸಿ ನಡೆಸಲಾಗುತ್ತಿದೆ ಎಲ್ಲರು ಮುಕ್ತವಾಗಿ ಭಾಗವಹಿಸುವ ಮೂಲಕ ಈ ಕ್ರೀಡೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದರು .
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುನ್ನಳ್ಳಿ ರವಿ ಯವರು, ಕ್ರೀಡೆ ಮನುಷ್ಯನ ಬದುಕಿಗೆ ಹಾಗೂ ಅವನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಉತ್ತಮವಾದ ಅಸ್ತ್ರವಾಗಿದೆ ಹಾಗಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಗಳಲ್ಲಿ ಇರಬೇಕಾಗುತ್ತದೆ ಅಲ್ಲದೆ ಈ ದಿನದ ಕ್ರೀಡಾ ಕೂಟದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ತಾಲೂಕಿಗೆ ಹಾಗೂ ಜಿಲ್ಲೆಗೆ ಹೆಚ್ಚಿನ ಹೆಸರು ತಂದುಕೊಡಬೇಕು ಎಂದರು .
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಡಿ ಕೆ ಲಕ್ಷ್ಮಣ್ ಗೌಡ, ಕೆಸವಳಲು ರಾಘವೇಂದ್ರ, ತಾಲೂಕು ಕ್ರೀಡಾಧಿಕಾರಿ ಲೇವಿನ, ಫೈರೋಜ್, ಸುಧಾಕರ್ , ಹಂಜ , ಇಮ್ರಾನ್, ದೈಹಿಕ ಶಿಕ್ಷಣ ಶಿಕ್ಷಕರಾದ, ಬಿಳುಗುಳ ಸುರೇಶ್, ಜೈಪಾಲ್, ಪ್ರೇಮ ಕುಮಾರ್ ಮುಂತಾದವರು ಭಾಗವಹಿಸಿದ್ದರು .

