लाइव कैलेंडर

October 2026
M T W T F S S
 1234
567891011
12131415161718
19202122232425
262728293031  
22/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ ಕಳಸದ ವಿದುಷ ಜೈನ್ ಬೆಳ್ಳಿ ಪದಕ ಗೆದ್ದು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ .

1 min read

ಪಾಂಡಿಚೇರಿಯಲ್ಲಿ ನಡೆಯುತ್ತಿರುವ 37 ನೇ ದಕ್ಷಿಣ ಭಾರತ ರಾಜ್ಯಗಳ ಕ್ರೀಡಾಕೂಟದಲ್ಲಿ 18 ರ ವಯೋಮಿತಿ ನಡಿಗೆ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ವಿದುಷ ಜೈನ್ ಬೆಳ್ಳಿ ಪದಕ ಗೆದ್ದು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಸ್ಫರ್ಧೆಯಲ್ಲಿ ವಿದುಷಾ 3000 ಮೀಟರ್ ನಡಿಗೆ ಸ್ಫರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. 18ರ ವಯೋಮಾನದವರ ಈ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಪರ್ಧಿಯಾಗಿ 16 ವಯೋಮಾನದ ವಿದುಷ 18 ರ ವಯೋಮಾನದಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಅವರ ಕ್ರೀಡಾ ಭವಿಷ್ಯಕ್ಕೆ ಇನ್ನಷ್ಟು ಅವಕಾಶಗಳು ಇವೆ
ವಿದುಷ ಜೆಇಎಂ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಪೂರ್ಣ ಪ್ರಜ್ಞಾ ಸಂಗಮೇಶ್ವರ ಪೇಟೆ ಇಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ
ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಅರ್ಹತೆ ಇದ್ದರೂ ಸರಿಯಾದ ಕ್ರೀಡಾ ಮೈದಾನವಿಲ್ಲದೇ ಅಭ್ಯಾಸದ ಹಲವು ಕಷ್ಟಗಳನ್ನು ಎದುರಿಸಿದರು ರಾಷ್ಟ್ರ ಮಟ್ಟದಲ್ಲಿ ನಮ್ಮ ಮಕ್ಕಳು ಗಮನಾರ್ಹ ಸಾಧನೆ ಮಾಡುತ್ತಿರುವುದು ಸಂತೋಷ ತಂದಿದೆ ಎನ್ನುತ್ತಾರೆ ಅವರ ಕೋಚ್ ರಮೇಶ್ ಕೆಳಗೂರು

About Author

Leave a Reply

Your email address will not be published. Required fields are marked *

You may have missed