ಬ್ರಹ್ಮ ಶ್ರೀ ನಾರಾಯಣ ಗುರು ಮಲೆಯಾಳಿ ಸಂಘ ( ರಿ) ಬಣಕಲ್ ಹಿರೆಬೈಲ್ ಇವರ ವತಿಯಿಂದ….
1 min read
ಬ್ರಹ್ಮ ಶ್ರೀ ನಾರಾಯಣ ಗುರು ಮಲೆಯಾಳಿ ಸಂಘ
( ರಿ) ಬಣಕಲ್ ಹಿರೆಬೈಲ್ ಇವರ ವತಿಯಿಂದ ಪರಿ

ವರ್ತನೆ ಚಳುವಳಿ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮತ್ತು ತಿರು ಓಣಂ ಕಾರ್ಯಕ್ರಮ ಬಣಕಲ್ ಜೇಸಿಐ ಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂತೋಷ್ ಅತ್ತಿಗೆರೆ ಉದ್ಘಾಟಿಸಿ ನಾರಾಯಣ ಗುರುಗಳು ಭಾರತದ ಮಹಾನ್ ಸಮಾಜ ಸುಧಾರಕರು ಆಧ್ಯಾತ್ಮಿಕ ಗುರುಗಳು. ತತ್ವಜ್ಞಾನಿಗಳು ಹಾಗೂ ಮಾನವತಾವಾದಿ ಗಳಲ್ಲಿ ಒಬ್ಬರು.ಜಾತಿಭೇಧ. ಅಸ್ಪೃಶ್ಯತೆ. ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದವರು ಅವರ ಜೀವನ ಯುವ ಜನಾಂಗಕ್ಕೆ ಮಾದರಿ ಆಗಬೇಕು ಎಂದು ನುಡಿದರು ಬಣಕಲ್ ಪೋಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ದೀಲಿಪ್ ಕುಮಾರ್ ಅವರು ಮಾತನಾಡಿ ನಾರಾಯಣ ಗುರುಗಳು ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿ ನೋಡಬಾರದು ಒಂದು ಜಾತಿ.ಒಂದು ಮತ . ಒಂದು ದೇವರು. ಮನುಷ್ಯನಿಗೆ ಎಂಬ ಸಂದೇಶವನ್ನು ಸಾರಿದರು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ ಮಾತನಾಡಿ ನಾರಾಯಣ ಗುರುಗಳು ಜನರಿಗೆ ಶಿಕ್ಷಣ ಪಡೆಯಿರಿ. ಸಂಘಟಿತರಾಗಿ . ಸ್ವಾಭಿಮಾನದಿಂದ ಬದುಕಿರಿ. ಮೂಢನಂಬಿಕೆಗಳನ್ನು ತೊರೆಯಿರಿ ಪರಸ್ಪರ ಪ್ರೀತಿ ಮತ್ತು ಸಹೋದರತ್ವ ದಿಂದ ಬದುಕಿ ಎಂದು ಬೋಧಿಸಿದರು ಅವರ ಪ್ರಮುಖ ಕೃತಿಗಳು* ಆತ್ಮೋಪದೇಶ ಶೀತಕ್ಕೆ.*ದೈವದಶಕಂ* ಜಾತಿ ನಿರ್ಣಯಂ.* ಅದ್ವೈತ ದೀಪಿಕಾ.* ದಶರ್ನ ಮಾಲಾ ಅವರ ಕೃತಿಗಳನ್ನು ಯುವ ಪೀಳಿಗೆ ಓದಬೇಕು ಎಂದು ತಿಳಿಸಿದರು.ಸಂಘದ ಕಾನೂನು ಸಲಹೆಗಾರರಾದ ಪರೀಕ್ಷಿತ್ ಜಾವಳಿ ವಕೀಲರು ಕಾನೂನು ಸಲಹೆ ನೀಡಿದರು. ಭಕ್ತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಮಹತ್ವದ ಬಗ್ಗೆ ತಿಳಿಸಿ ಕೂಟ್ಟರು. ಜೇಸಿಐ ವಿಸ್ಮಯ ಅಧ್ಯಕ್ಷರಾದ ರಂಜೀತ್ ಕನ್ನಗೆರೆ ಸಾಧಕರನ್ನು ಸನ್ಮಾನಿಸಿ . ಈ ಸಂಘ ಇಂತಹ ಕಾರ್ಯಕ್ರಮವನ್ನು ಆಯೋಜಿಸಬೇಕು ನಾರಾಯಣ ಗುರುಗಳ ಆದರ್ಶಗಳನ್ನು. ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಚಂದ್ರ ವಹಿಸಿದರು.ಗೌರವ ಅಧ್ಯಕ್ಷರಾದ ವೇಲಾಯದನ್ . ಸಕಲೇಶಪುರದ ಅಧ್ಯಕ್ಷರಾದ ಲಕ್ಷ್ಮಣ್ ಸುಧಾಕರ್ ಕುನ್ನಳ್ಳಿ ರಾಜು. ಬಾಲಕೃಷ್ಣ. ಪ್ರಭಾಕರ್ ರವಿ ಬಾಳೂರು. ದಾಮೋದರ್.ನಳರಾಜ್.ಬಾಬು. ದೀಕ್ಷಿತ್.ಈಶ್ವರ ರಾಘವನ್.ಮಂಜು. ಶರತ್ ಬಿಂದು.ಸಂಜು. ಅನ್ನಮ್ಮ. ರವಿಶಿಲ್ಪ ಮುಂತಾದವರು ಇದ್ದರು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ
ಸನ್ಮಾನಿಸಲಾಯಿತು ಮಕ್ಕಳಿಗೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಸಂಘದ ಗೌರವ ಕಾರ್ಯದರ್ಶಿಯಾದ ಕೆ.ಎಂ.ರವಿ ನಿರೂಪಿಸಿ. ಸ್ವಾಗತಿಸಿ. ವಂದಿಸಿದರು

