लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೊಡ್ಡಮಾಗರ ವಳ್ಳಿ ಸಹಿಪ್ರಾ ಶಾಲೆ ಪ್ರಾಯೋಜಿತ ಕ್ಲಸ್ಟರ್ ಕ್ರೀಡಾಕೂಟ…

1 min read

ದೊಡ್ಡಮಾಗರ ವಳ್ಳಿ ಸಹಿಪ್ರಾ ಶಾಲೆ ಪ್ರಾಯೋಜಿತ ಕ್ಲಸ್ಟರ್ ಕ್ರೀಡಾಕೂಟ

 

ಆಲ್ದೂರು: ಸಮೀಪದ ದೊಡ್ಡ ಮಾಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲಾ ಆಟದ ಮೈದಾನದಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಶನಿವಾರ ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿಬಿ ನಿಂಗಯ್ಯ,ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪುಗೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಬಹು ಮುಖ್ಯ ಆಟದೊಂದಿಗೆ ಪಾಠವು ಪರಿಪೂರ್ಣತೆ ಯೆಡೆಗೆ ಸಾಗಲು ಪೂರಕ ಎಂದು ತಿಳಿಸಿದರು.

ಮಾಜಿ ಪಂಚಾಯಿತಿ ಉಪಾಧ್ಯಕ್ಷರಾದ ಅಶೋಕ್ ಡಿ ಬಿ,ಮಕ್ಕಳಿಗೆ ಬೌದ್ಧಿಕ ಬೆಳವಣಿಗೆ ಜೊತೆಗೆ ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಟಿ ಆರ್, ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಶಾಲೆ ನೀಡಿ ಸೋಲು ಗೆಲುವು ಜೀವನದ ಅವಿಭಾಜ್ಯ ಅಂಗ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸಬೇಕೆಂದು ಶುಭ ಹಾರೈಸಿದರು.

ಒಟ್ಟು 21 ಶಾಲೆಗಳು ಭಾಗವಹಿಸಿದ್ದು
‎ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದಿದೆ

ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಎಯು ಇಬ್ರಾಹಿಂ, ಪೂರ್ಣಪ್ರಜ್ಞಾ ಶಾಲೆಯ ಪ್ರಾಂಶುಪಾಲ ವೆಂಕಟೇಶ್, ಸಿ ಆರ್ ಪಿ ಕಮಲ, ವಿವಿಧ ಶಾಲೆಗಳಿಂದ ದೈಹಿಕ ಶಿಕ್ಷಕರುಗಳು ಸಹ ಶಿಕ್ಷಕರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *