लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
27/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುಂಕಸಾಲೆ : ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ….

1 min read

ಸುಂಕಸಾಲೆ : ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ


‎ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು

‎ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ

‎ಬದಲಾವಣೆ ಸಚಿವಾಲಯ ಪರಿಸರ ಸೂಕ್ಷ್ಮ (ಕಸ್ತೂರಿರಂಗನ ವರದಿ) ಪ್ರದೇಶವೆಂದು ಘೋಷಿಸಿರುವುದನ್ನು ವಿರೋಧಿಸಿ ಪ್ರತಿಭಟನೆ

‎ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಸುಂಕಸಾಲೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಂಕಸಾಲೆಯಲ್ಲಿ ಬೃಹತ್ ಪ್ರತಿಭಟನೆ…
ರಾಣಿಝರಿ ಕಾಫಿ ಶಾಪ್ ಮುಂಭಾಗದಿಂದ ಸುಂಕಸಾಲೆ ಗ್ರಾ.ಪಂ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸ್ಥಳೀಯ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗ್ರಾ.ಪಂ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು. ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು….
‎ಕೃಷಿಕರಾದ ಮಹೇಶ್ ದುರ್ಗದಹಳ್ಳಿ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಾದರೆ ಸ್ಥಳೀಯ ರೈತರು, ಗ್ರಾಮಸ್ಥರು ಮತ್ತು ಜನಸಾಮಾನ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವರದಿಯಲ್ಲಿರುವ ಕಠಿಣ ನಿಯಮಗಳು ಜಾರಿಯಾದರೆ ಮಲೆನಾಡಿನ ಜನರ ಮೂಲಭೂತ ಹಕ್ಕುಗಳು ಹಾಗೂ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದರು.
‎ಕೃಷಿಕರಾದ ಪ್ರವೀಣ್‌ ಸುಂಕಸಾಲೆ ಮಾತನಾಡಿ, ಈ ವರದಿಯ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಲೆನಾಡಿಗರ ಆತಂಕ, ಭೀತಿಯನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನ್ಯಾಯ ಒದಗಿಸುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.

‎ಅಧ್ಯಕ್ಷೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಪಿ.ಅಶೋಕ್ ಮಾತನಾಡಿ, ಕಸ್ತೂರಿ ರಂಗನ್‌ ವರದಿ ಜಾರಿಯಾದರೇ ಈ ವ್ಯಾಪ್ತಿಯ ಕೃಷಿ ಚಟುವಟಿಕೆ ಮಾತ್ರವಲ್ಲ. ದೈನಂದಿನ ಜೀವನಕ್ಕೂ ತೊಂದರೆ ಉಂಟಾಗಲಿದೆ. ಆನರ ಬದುಕು ಅತಂತ್ರವಾಗುತ್ತದೆ ಎಂದರು.
‎ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ್, ಬಿ.ಎಸ್.ಜಯರಾಂ, ದೀಪಕ್ ದೊಡ್ಡಯ್ಯ, ರವಿ ಬಲಿಗೆ, ಲಕ್ಷ್ಮಣ್ ಹುಣಸೆಮಕ್ಕಿ, ಈಶ್ವರೆಗೌಡ, ನೇತ್ರಾ ರತ್ನಾಕರ್, ಕೃಷ್ಣಗೌಡ ಅರಮನೆ ತಲಗೂರು ಮುಂತಾದವರು ಇದ್ದರು.
‎ಎಂ.ಎಸ್. ಸುರೇಶ್ ಸ್ವಾಗತಿಸಿದರು, ಅಜಿತ್ ದುರ್ಗದಹಳ್ಳಿ ವಂದಿಸಿದರು, ಎ.ಟಿ.ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

‎ಸುಂಕಸಾಲೆ ಮತ್ತು ಸುತ್ತಮುತ್ತಲ ನೂರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About Author

More Stories

Leave a Reply

Your email address will not be published. Required fields are marked *

You may have missed