ಬಾಳೆಹೊನ್ನೂರು ಬಸ್ ಸ್ಟ್ಯಾಂಡ್ ಆವರಣದಲ್ಲಿ *ಐ ಲವ್ ಬಾಳೆಹೊನ್ನೂರು*
1 min read
ಇನ್ನರ್ವೀಲ್ ಕ್ಲಬ್ ಬಾಳೆಹೊನ್ನೂರು ಸುಮಾರು 24 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಲ್ಲಿ ಜನಮನ್ನಣೆ ಗಳಿಸಿದ್ದು 2025 26ನೇ ಸಾಲಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಇನ್ನರ್ವೀಲ್ ಕ್ಲಬ್ ಗೆ ಮತ್ತೊಂದು ಗರಿಯನ್ನು ಮೂಡಿಸಿದೆ 2025 26 ನೇ ಸಾಲಿನ ಅಧ್ಯಕ್ಷರಾದ ಸಹನಾ ಯೋಗೇಶ್, ಕಾರ್ಯದರ್ಶಿ ಸುಪ್ರಿಯಾ ರಮೇಶ್ ರವರ ಅವಧಿಯಲ್ಲಿ ಬಾಳೆಹೊನ್ನೂರು ಬಸ್ ಸ್ಟ್ಯಾಂಡ್ ಆವರಣದಲ್ಲಿ *ಐ ಲವ್ ಬಾಳೆಹೊನ್ನೂರು* ಎಂ
ಬ ಕಲಾ ಕೃತಿಯನ್ನು ರಚಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ಅಲ್ಲದೆ ಇನ್ನರ್ವೇಲ್ ಜಿಲ್ಲೆ 318 ರ ಹೆಗ್ಗಳಿಕೆಗೆ ಪಾತ್ರವಾಗಿದ್ದು ಜಿಲ್ಲೆಯಲ್ಲಿ ಔಟ್ ಸ್ಟ್ಯಾಂಡಿಂಗ್ ಕ್ಲಬ್, ಬೆಸ್ಟ್ ಇನ್ನರ್ ವೀಲ್ ಬ್ರಾಂಡಿಂಗ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದೇ ಜೂನ್ 28ರಂದು ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಅಸೆಂಬ್ಲಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶಬರಿ ಕಡಿದಾಳ್ರವರು ಪ್ರಶಸ್ತಿಯನ್ನು ನೀಡಿ ಪ್ರಶಂಸಿಸಿ ಗೌರವಿಸಿದರು ಈ ಕಾರ್ಯಕ್ರಮದಲ್ಲಿ ಇನ್ನರ್ವಹೀಲ್ ಸದಸ್ಯರಾದ ಕವಿತಾ ಕೇಶವ್ ಕಾಂಚನ ಸುಧಾಕರ್ ಜೋಹ್ರ ರೆಹಮಾನ್ ತಾಹಿರಾ ಇಬ್ರಾಹಿಂ ಪಲ್ಲವಿ ನಾಗರಾಜ್ ಶೈಲಾರವಿ ನಂದಿನಿ ರಾಜೇಶ್ ವಿದ್ಯಾ ಶೆಟ್ಟಿ ಹಾಗೂ ಇನ್ನಿತರರು ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು

