ಎಸ್ ಡಿ ಪಿ ಐ ವತಿಯಿಂದ ಎಸ್ಐಆರ್ ತರಬೇತಿ ಶಿಬಿರ
1 min read
ಎಸ್ ಡಿ ಪಿ ಐ ವತಿಯಿಂದ ಎಸ್ಐಆರ್ ತರಬೇತಿ ಶಿಬಿರ
ಆಲ್ದೂರು: ಪಟ್ಟಣದ ಜಾಮಿಯಾ ಮಸೀದಿ ಶಾದಿ ಮಹಲ್ ಸಭಾಂಗಣದಲ್ಲಿ ಎಸ್ ಡಿ ಪಿ ಐ ಗ್ರಾಮ ಸಮಿತಿ ವತಿಯಿಂದ ಎಸ್ಐಆರ್ ಪ್ರಕ್ರಿಯೆಯ ಮತದಾನ ಗಣತಿ ನೋಂದಣಿ ಮತ್ತು ಅಗತ್ಯ ದಾಖಲೆಗಳ ಕುರಿತ ಮಾಹಿತಿ ಕಾರ್ಯಾಗಾರ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಫ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಿ ಅಗತ್ಯ ದಾಖಲೆಗಳನ್ನು ಮಾಹಿತಿಯನ್ನು ಸಕಾಲಕ್ಕೆ ಒದಗಿಸಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು
ಎಸ್ ಡಿ ಪಿ ಐ ಗ್ರಾಮಾಂತರ ಅಧ್ಯಕ್ಷ
ಮಹಮ್ಮದ್ ಅಶ್ರಫ್ ಅಡೂರು ದೇಶದ ಪ್ರತಿಯೊಬ್ಬ ಭಾರತೀಯ ನಾಗರೀಕರು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಬಹು ಮುಖ್ಯವಾಗಿದ್ದು ಪೌರರಾಗಿ ಅಗತ್ಯ ದಾಖಲೆ ಮಾಹಿತಿಗಳನ್ನು ಸಿದ್ಧಪಡಿಸಿಕೊಂಡು ಬಿ ಎಲ್ ಓ ಗಳಿಗೆ ಸಹಕಾರ ನೀಡಬೇಕಾಗಿರುವುದು ಆದ್ಯ ಕರ್ತವ್ಯ ಎಂದು ತಿಳಿಸಿದ ಅವರು ಬಳಿಕ ತರಬೇತಿಯಲ್ಲಿ ಭಾಗವಹಿಸಿದವರಿಗೆ ಎಸ್ಐಆರ್ ಅರ್ಥ, ನಮೂನೆಗಳನ್ನು ಭರ್ತಿ ಮಾಡುವ ವಿಧಾನ, 11 ದಾಖಲೆಗಳ ಒದಗಿಸುವಿಕೆ, ಮ್ಯಾಪಿಂಗ್,ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಎಸ್ಐಆರ್ ಪ್ರಕ್ರಿಯೆಯ ಕುರಿತು ಇರುವಂತಹ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರಿಸಿ, ಬಿ ಎಲ್ ಓ, ಬಿಎಲ್ಎ, ನಮೂನೆಗಳನ್ನು ವಾಪಸ್ಸು ಸಲ್ಲಿಸಲು ಇರುವ ಕೊನೆಯ ದಿನಾಂಕಗಳ ಕಾಲಾವಕಾಶಗಳನ್ನು ತಿಳಿಸಿದರು.
ಗ್ರಾಮ ಸಮಿತಿ ಅಧ್ಯಕ್ಷ ಇಮ್ರಾನ್ ಅನ್ಸರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಅಲಿ, ಮೂಡಿಗೆರೆ ವಿಧಾನಸಭಾ ಸಮಿತಿಯ ಅಧ್ಯಕ್ಷ ಶಫೀಕ್ ಎಂ ಯು, ಕಾರ್ಯದರ್ಶಿ ಆರಿಫ್ ಹುಸೇನ್, ಸಹ ಕಾರ್ಯದರ್ಶಿ ಮನ್ಸೂರ್, ಗ್ರಾಮ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ರಿಯಾಜ್,
ಮಹಮ್ಮದ್ ಇಕ್ಬಾಲ್, ಪದಾಧಿಕಾರಿಗಳಾದ ಶಫೀಕ್ ಅಹಮದ್, ಮುಜೀಬ್, ಸಮೀವುಲ್ಲಾ, ಜಿಶಾನ್, ಮೊಹಮ್ಮದ್ ಹುಸೇನ್,
ಕಾಫಿ ಬೆಳೆಗಾರ ತೌಸೀಫ್ ಅಲಿ, ಗುಲ್ರೀಜ್ ಅಹಮದ್, ಇತರರು ಇದ್ದರು.

