लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನೆಮ್ಮದಿ ಸಿಗುವುದಲ್ಲ ನಾವೇ ಪಡೆದು ಕೊಳ್ಳುವುದು
“ನೆಮ್ಮದಿ” ಎಲ್ಲೋ ಕೇಳಿದ ಹಾಗೆ ಇದೆ ಅಲ್ವಾ? ಇತ್ತೀಚಿಗೆ ಯಾರನ್ನೇ ಕೇಳಿ ನೋಡಿ ಹೇಗಿದ್ದೀರಾ, ಆರಾಮಾಗಿ ಇದಿರಾ ಎಂದು, ಬರುವ ಉತ್ತರ ಏನು ಖುಷಿನೋ, ಏನೋ ಆರಾಮೋ? ಎಂಬ ನಿಟ್ಟುಸಿರು ಬಿಡುವ ಜನರೇ ಸಿಗುವುದು. ಶ್ರೀಮಂತನ ಬಳಿ ಕೇಳಿದರೆ, ಎಷ್ಟು ಹಣವಿದ್ದರೇನು? ನೆಮ್ಮದಿ ಇಲ್ಲದ ಮೇಲೆ ಎನ್ನುತ್ತಾರೆ.
ಬಡವನ ಕೇಳಿದರೆ ಯಾರಿಗೆ ಬೇಕು ಈ ಬದುಕು?
ನೆಮ್ಮದಿಯೇ ಇಲ್ಲದ ಮೇಲೆ ಎನ್ನುತ್ತಾರೆ. ಯುವಕರು ಯಾ-ರಿಗೆ ಬೇಕು ಗುರು ಈ ಲೈಫ್. ಯಾಕಾದ್ರೂ ಹುಟ್ಟಿದೀನೋ? ಅಂತ ನಿರುತ್ಸಾಹದ ಉತ್ತರ. ಹೆಣ್ಣು ಮಕ್ಕಳಂತು ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಮುಂದೆ ಯಾವುದಕ್ಕೂ ದಾರಿ ಇಲ್ಲದೆ, ಡಿಪ್ರೇಷನ್ ಗೆ ಹೋಗಿರುವ ಅಥವಾ ಕೋಮದಲ್ಲಿರುವ ರೋಗಿಯ ಹಾಗೆ ವರ್ತಿಸುತ್ತಾರೆ. ಹಾಗಾದರೆ ಈ ಸಮಾಜದಲ್ಲಿ ನೆಮ್ಮದಿಯಿಂದ “ಬದುಕಿರುವವರ” ಸಂಖ್ಯೆ ಬಹಳ ವಿರಳ.
‎
ಆಧುನಿಕತೆ ಬೆಳೆದಂತೆಲ್ಲ ಮನುಷ್ಯನ ಬೇಡಿಕೆಗಳು ಕಾಲ ಬಳಿ ಬಂದು ಬೀಳುತ್ತಿದ್ದಂತೆಲ್ಲ ಆ ವ್ಯಕ್ತಿ ಹೆಚ್ಚಿನ ನೆಮ್ಮದಿಯಲ್ಲಿ ಜೀವಿಸಬೇಕು ಎಂಬುದು ಎಲ್ಲರ ಅನಿಸಿಕೆ. ಆದರೆ ಆದರೆ ನೆಮ್ಮದಿ ಎಂಬ ಪದ ಯಾರ ಬದುಕಿನ ಶಬ್ದಕೋಶದಲ್ಲೂ ಇಲ್ಲವಾಗಿದೆ. ಹೀಗೇಕೆ? ಈಗಂತೂ ಸ್ಮಶಾನವೇ ಸಿಂಗರಿಸಿಕೊಂಡು ಸುಂದರವಾಗುತ್ತಿದೆ. ಅರಮನೆ ಕಳೆಗುಂದಿ ಮಂಕಾಗಿದೆ. ಪ್ರತಿಯೊಬ್ಬರ ಮನಸ್ಸೇ ಸತ್ತು ನೀರವ, ನಿರ್ಜನ, ಕಳೆಗುಂದಿದ, ಭಯಾನಕ ರೂಪ ತಳೆದಿದೆ.
‎
‎”ನೆಮ್ಮದಿ” ಎಂಬುದು ಯಾರೊಬ್ಬನ ಆಸ್ತಿಯಲ್ಲೋ . ಅಂತಸ್ತಿನಲ್ಲೊ, ಬಾಹ್ಯ ಸೌಂದರ್ಯದಲ್ಲೋ, ಸಾವಿರ ಸ್ನೇಹಿತರ ಮಧ್ಯದಲ್ಲೋ ನೆಲೆ ನಿಂತಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಮಾತಿನಲ್ಲಿ, ನಡೆ – ನುಡಿಯಲ್ಲಿ, ಶಾಂತ ಚಿತ್ತದಲ್ಲಿ, ದೈವಾರಾಧನೆಯಲ್ಲಿ ಪ್ರಾಮಾಣಿಕ ವೃತ್ತಿಯೊಳಗೆ ನೆಲೆ ನಿಂತಿದೆ.
‎
‎ಜೀವನಕ್ಕಾಗಿ ಹಣ ಸಂಪಾದನೆಯೇ ಹೊರತು ನೆಮ್ಮದಿಗಾಗಿ ಖಂಡಿತ ಅಲ್ಲ. ಬದುಕಲ್ಲಿ ಸರಳತೆ, ಮೊಗದಲ್ಲಿ ಮಂದಹಾಸ, ಹಿರಿಯರಲ್ಲಿ, ಭಕ್ತಿಭಾವ, ಸಮಾನರಲ್ಲಿ ಗೌರವ, ಕಿರಿಯರ ಮೇಲೆ ಪ್ರೀತಿ ಮನಸ್ಸನ್ನು ತಿಳಿಗೊಳಿಸುವ ತಂತ್ರ
‎
‎ಅವರಂತೆ ನಾನಿಲ್ಲ, ನನ್ನಲ್ಲಿ ಏನೂ ಇಲ್ಲಾ, ಅದು ಬೇಕು, ಇದು ಬೇಕು, ಈ ಬೇಕು – ಬೇಕು ಎನ್ನುವ ಅತಿ-ರೇಕದ ತೀವ್ರವಾದ ಹಂಬಲ ನೆಮ್ಮದಿಯನ್ನು ಹುಡುಕುವಂತೆ ಮಾಡುವುದು ಸಹಜ.
‎
‎ಪ್ರೀತಿ – ಪ್ರೇಮ – ಕಾಮ – ವ್ಯಾಮೋಹದ ಬಲೆಯೊಳಗೆ ಎಲ್ಲಿಯವರೆಗೆ ಮನುಷ್ಯ ಸಿಲುಕಿ, ನಲುಗಿ ನರಳಾಡುತ್ತಾನೋ, ಅಲ್ಲಿಯವರೆವಿಗೂ ನೋವು ಕಣ್ಣೀರು, ನಿರಾಸೆ ಕಟ್ಟಿಟ್ಟ ಬುತ್ತಿ, ಅತಿಯಾಸೆ ಆಯಸ್ಸನ್ನು, ಸಂತೋಷವನ್ನು, ಕೊನೆಗೆ ಬದುಕನ್ನೇ ನುಂಗಿ ಹಾಕಿ ಬಿಡುವುದೇ ಹೊರತು ತೃಪ್ತಿ ತಂದು ಕೊಡುವುದಿಲ್ಲ.
‎
‎ಅನ್ಯರ ಅಂದರೆ ನಮಗಿಂತ ಒಂದು ಪಟ್ಟು ಕೆಳಗೆ ಜೀವನ ನಡೆಸುವ ಜನರ ಬದುಕು ಕಂಡು ಭಗವಂತನಿಗೆ ಕೃತಜ್ಞತೆ ಸಲ್ಲಿಸಬೇಕು. ಇರುವುದರಲ್ಲಿ ತೃಪ್ತ ಭಾವ ಹೊಂದಬೇಕು. ಎಂತೆಂತದ್ದೋ ಕರಾಳ ಪರಿಸ್ಥಿತಿ ಬಂದೋದಗಿದರೂ ಈ ಜಗತ್ತಿನಲ್ಲಿ ನಾನು ಬದುಕಿದ್ದೇನೆ ಎಂದರೆ, ಇನ್ನಾದರೂ ಬದುಕಬೇಕು ಎಂಬ ಭಾವ ತಾಳಬೇಕು.
‎
ಎಲ್ಲವುದಕ್ಕಿಂತ ಮೊದಲು” ನಮ್ಮನ್ನು ನಾವು ಪ್ರೀತಿಸ ಬೇಕು” ಹಿರಿಯ ಸಾಹಿತಿಗಳು, ಕವಿ ಶ್ರೇಷ್ಠರು ಆದ ಜಿ.ಎಸ್ ಶಿವರುದ್ರಪ್ಪ ರವರು ಹೇಳುವಂತೆ, ಎಲ್ಲವೂ ನಮ್ಮೊಳಗೇ ಇದೆ. ಅದನ್ನು ಗುರುತಿಸುವ ಕೆಲಸ ನಮ್ಮದಾಗ ಬೇಕಾಗಿದೆ. ನೆಮ್ಮದಿ ಸಿಗುವುದಲ್ಲ ನಾವೇ ಪಡೆದು ಕೊಳ್ಳುವುದು”.
‎
ರೂಪಸುಧೀರ್

‎ಶಿಕ್ಷಕಿ ಚಿಕ್ಕಮಗಳೂರು.

About Author

Leave a Reply

Your email address will not be published. Required fields are marked *

You may have missed