ಸ್ವಂತ ಹಣ ಖರ್ಚು ಮಾಡಿ ರಸ್ತೆ ಗುಂಡಿ ಮುಚ್ಚಿಸಿದ ಖಾಸಗಿ ಶಾಲೆ ಮುಖ್ಯಸ್ಥ* :
1 min read
*ಸ್ವಂತ ಹಣ ಖರ್ಚು ಮಾಡಿ ರಸ್ತೆ ಗುಂಡಿ ಮುಚ್ಚಿಸಿದ ಖಾಸಗಿ ಶಾಲೆ ಮುಖ್ಯಸ್ಥ* :


ಪಟ್ಟಣದ ತತ್ಕೋಳ ರಸ್ತೆ ಬದಿಯಲ್ಲಿ ಉಂಟಾಗಿದ್ದ ಅಪಾಯಕಾರಿ ಗುಂಡಿಗಳನ್ನು ಇಲ್ಲಿನ ಎಂಇಎಸ್ ಶಾಲೆ ಮುಖ್ಯಸ್ಥ ಹರೀಶ್ ಎಂಬುವರು ತಮ್ಮ ಸ್ವಂತ ಹಣ ಖರ್ಚು ಮಾಡಿ ಮುಚ್ಚಿಸಿದ್ದಾರೆ.
ಕಳೆದ ಐದಾರು ವರ್ಷದಿಂದಲೂ ಪಟ್ಟಣದ ಬಸ್ ನಿಲ್ದಾಣದಿಂದ ಎಂಇಎಸ್ ಶಾಲೆವರೆಗೆ ಸುಮಾರು 500 ಮೀಟರ್ ರಸ್ತೆ ಬದಿಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣಗೊಂಡಿವೆ. ಇಲ್ಲಿ ಪ್ರತಿನಿತ್ಯ ಸಂಚರಿಸುವ ಶಾಲೆ ವಾಹನ ಹಾಗೂ ಖಾಸಗಿ ವಾಹನಗಳು ಸಂಚರಿಸಲು ತೊಂದರೆ ಉಂಟಾಗಿತ್ತು. ಅಲ್ಲದೇ ಮಳೆಗಾಲದಲ್ಲಿ ಗುಂಡಿ ಕಾಣದೇ ಅನೇಕ ವಾಹನಗಳು ಗುಂಡಿ ಬಿದ್ದು ಜಖಂಗೊಂಡಿದ್ದ ಘಟನೆಗಳು ನಡೆದಿವೆ.
ರಸ್ತೆ ದುರಸ್ತಿ ಕಾಣದ ಕಾರಣ, ಇನ್ನು ಮಳೆ ಮುಗಿಯುವವೆರಗೂ ರಸ್ತೆ ಅಭಿವೃದ್ಧಿ ಕನಸಿನ ಮಾತೆಂದು ಅರಿತು, ಸಾರ್ವಜನಿಕರ ಹಿತಕ್ಕಾಗಿ ಎಂಎಇಸ್ ಶಾಲೆ ಮುಖ್ಯಸ್ಥ ಹರೀಶ್ ಅವರು ಸ್ವಂತ ಹಣದಲ್ಲಿ ದಪ್ಪಜಲ್ಲಿ, ಮಣ್ಣು ತರಿಸಿ ಗುಂಡಿಗಳನ್ನು ಮುಚ್ಚಿಸಿದ್ದು, ಸಧ್ಯಕ್ಷೆ ವಾಹನಗಳ ಸಂಚಾರ ನಿರಾಳವಾಗಿದೆ. ಹರೀಶ್ ಅವರ ಸಾಮಾಜಿಕ ಕಾಳಜಿಗೆ ಸ್ಥಳೀಯರು ಶ್ಲಾಘಿಸಿದ್ದು, ಸಂಬಂಧಪಟ್ಟ ಇಲಾಖೆ ಈ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

