लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಿರಿಯ ರಾಜಕಾರಣಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಅರಿಶಿಣಗುಪ್ಪೆ ಎ.ಎಸ್. ದಿವಾಕರ್ ನಿಧನ.*

1 min read

ನ್ಯೂಸ್ ಕಿಂಗ್ ✍️: *ಹಿರಿಯ ರಾಜಕಾರಣಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಅರಿಶಿಣಗುಪ್ಪೆ ಎ.ಎಸ್. ದಿವಾಕರ್ ನಿಧನ.*

ಚಿಕ್ಕಮಗಳೂರು, ಜೂನ್ ೧೨: ರಾಜಕಾರಣಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಚಿಕ್ಕಮಗಳೂರು ಸಮೀಪದ ಅರಿಶಿಣಗುಪ್ಪೆಯ ಕಾಫಿ ಬೆಳೆಗಾರ ಎ.ಎಸ್. ದಿವಾಕರ್ ಅವರು ಇಂದು ಬೆಳಿಗ್ಗೆ ಘಂಟೆ 8:30ರ ಸುಮಾರಿಗೆ ನಿಧನರಾಗಿದ್ದಾರೆ.

73ರ ವಯೋಮಾನದ ದಿವಾಕರ್ ಅವರು ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ದಿವಾಕರ್ ಅವರು ರಾಜಕೀಯ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತರವಾಗಿ ಗುರುತಿಸಿಕೊಂಡಿದ್ದರು.

ಅಲ್ಲಂಪುರ ಮಂಡಲ್ ಪಂಚಾಯತಿಯ ಪ್ರಧಾನರಾಗಿ ಉತ್ತಮ ಆಡಳಿತ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು, ಜೊತೆಗೆ ವೀರಶೈವ ಲಿಂಗಾಯತ ಸಮಾಜದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ, ಬಿಎಸ್ಎನ್ಎಲ್ ಇಲಾಖೆಯ ನಿರ್ದೇಶಕರಾಗಿ, ಕಾಫಿ ಮಂಡಳಿ ಸದಸ್ಯರಾಗಿ, ಹಾಗೂ ಭಾರತೀಯ ಜನತಾ ಪಕ್ಷದ ತಾಲೂಕು ಘಟಕಕ್ಕೆ ಎರಡು ಬಾರಿ ಅಧ್ಯಕ್ಷರಾಗಿ ಹೀಗೆ ಕೃಷಿ ಬದುಕಿನ ಜೊತೆ ಜೊತೆಗೆ ರಾಜಕೀಯವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದು ಈ ಭಾಗದ ಜನಮನದಲ್ಲಿ ಚಿರಪರಿಚಿತರಾಗಿದ್ದರು.

ನೇರ ನುಡಿಯ ಮಾತುಗಾರರಾದ ಕಾರಣ ಸಮಾಜದೊಳಗೆ ಪ್ರಶಂಸೆ ಮತ್ತೆ ವಿಮರ್ಶೆ ಈ ಎರಡಕ್ಕೂ ಪಾತ್ರರಾಗಿದ್ದ ಮೃತ ದಿವಾಕರ್ ಅವರು ಪತ್ನಿ ಲೋಹಿತಾಕ್ಷಿ, ಸುಪುತ್ರರಾದ ಆಕರ್ಷ, ಭರತ್, ಆದರ್ಶ್ ಮೂರು ಗಂಡು ಮಕ್ಕಳು ಸೇರಿದಂತೆ ಮೊಮ್ಮಕ್ಕಳಾದಿಯಾಗಿ ಒಂದು ಬಹು ದೊಡ್ಡ ಕುಟುಂಬ ಮತ್ತು ತಾವು ಸಾರ್ವಜನಿಕ ಬದುಕಿನಲ್ಲಿ ಸಂಪಾದಿಸಿಕೊಂಡಿದ್ದ ಸಮಾಜದ ಒಂದು ದೊಡ್ಡ ವರ್ಗದ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.

ಎ.ಎಸ್. ದಿವಾಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹಲವು ಮಠಮಾನ್ಯಗಳ ಮಠಾಧೀಶರು, ಪೂಜ್ಯರು,ರಾಜಕೀಯ ಮುಖಂಡರು, ಸಮಾಜದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ದೊಂದಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಶುಕ್ರವಾರ ಸಂಜೆ ಘಂಟೆ 05:00ರ ಸುಮಾರಿಗೆ ಅರಿಶಿಣಗುಪ್ಪೆಯ ತಮ್ಮ ತೋಟದ ಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಅವರ ಹಿರಿಯ ಪುತ್ರ ಆಕರ್ಷ ತಿಳಿಸಿದ್ದಾರೆ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ನ್ಯೂಸ್ ಕಿಂಗ್….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed