ಬೊಗಸೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.
1 min read




ಬೊಗಸೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಆಲ್ದೂರು: ಸಮೀಪದ ಕಡವಂತಿ ಬೊಗಸೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆ ಮತ್ತು ಅವರ ತಾಯಿಯವರ ಆಶಯದಂತೆ ಏಕ್ ಪೇಡ್ ಮಾ ಕೆ ನಾಮ್ ಸಂಕಲ್ಪದಂತೆ
ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟುಗೂಡಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
13ನೇ ಬಾರಿ ಶೇಕಡ ನೂರರಷ್ಟು ಫಲಿತಾಂಶವನ್ನು ಪಡೆದಿರುವ ಭೋಗಸೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಪ್ರೀತಿ ಬಿಎಮ್, ಮಹಿಮಾ ಕೆಎಂ, ಸೌಜನ್ಯ ಬಿಎಚ್ ರವರೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯರು ನೇಕಾರ ಪ್ರಕೋಶ ರಾಜ್ಯ ಸದಸ್ಯರಾದ ವಿನೋದ್ ಬೊಗಸೆ, ಶಾಲೆಯ ಮುಖ್ಯ ಶಿಕ್ಷಕರಾದ ಆಶಾ ಸಾಹಸಿಕ್ಷಕರುಗಳಾದ ಪವಿತ್ರ ಧನಲಕ್ಷ್ಮಿ ರಶ್ಮಿತ ಕೀರ್ತಿ ಮೋಹನ್ ಕುಮಾರ್, ಸಿಬ್ಬಂದಿಗಳಾದ ಸವಿತಾ, ಭಾಗವಹಿಸಿದ್ದರು.

