ವಸತಿ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಘಟಕ ಸ್ಥಾಪಿಸಬೇಕು….
1 min read
ವಸತಿ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಘಟಕ ಸ್ಥಾಪಿಸಬೇಕು
ಚಿಕ್ಕಮಗಳೂರು: ವಸತಿ ಶಾಲೆಯ ಮಕ್ಕಳಿಗೆ ಕೌಶಲ್ಯ ಮತ್ತು ಮೌಲ್ಯಧಾರಿತ ಶಿಕ್ಷಣ ಒದಗಿಸಲು ಸ್ಕೌಟ್ಸ್-ಗೈಡ್ಸ್ ಚಟುವಟಿಕೆ ಪೂರಕ. ಪ್ರತಿ ಶಾಲೆಗಳಲ್ಲಿ ಸೈಟ್ಸ್ ಘಟಕವನ್ನು ಸ್ಥಾಪಿಸುವ ಮುಖೇನಾ ಪಕ್ಷೇತರ ಚಟುವಟಿಕೆಗೆ ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ಪರಿಸರ ಮೌಲ್ಯ ಮಾಪನ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಸೋಮವಾರ ಶಾಲಾ’ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿ.ಪಂ. ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಸತಿ ಶಾಲೆ ಪ್ರಾಂಶುಪಾಲ ರಿಗೆ ಸ್ಕೌಟ್ಸ್-ಗೈಡ್ಸ್‌ನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.
ವ್ಯಾಸಂಗ ಹಂತದಲ್ಲೇ ವಸತಿ ಶಾಲೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಬೋಧಿಸಲು ಶಾಲೆಗಳ ಪ್ರಾಂಶು ಪಾಲರಿಗೆ ಇಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಾಹಿತಿ ಶಿಬಿರ ಆಯೋಜಿಸಿದೆ. ಈ ತರಬೇತಿಯಲ್ಲಿ ಪಾಲ್ಗೊಂಡವರು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡು, ಶಾಲೆಗಳಲ್ಲಿ ಸ್ಕೌಟ್ಸ್ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಕ್ಷೇತರ ಚಟುವಟಿಕೆ ಒತ್ತು ನೀಡಬೇಕು. ಪರಿಸರ ಪ್ರಜ್ಞೆ ಸಾಮಾಜಿಕ ಕಳಕಳಿ, ಸೇವಾಮೋಭಾವ ಎಂಬ ಸಸಿ ಬಾಲ್ಯದಲ್ಲೇ ಭಿತ್ತಿದರೆ, ಭವಿಷ್ಯದಲ್ಲಿ ಆ ಸಸಿ ಹೆಮ್ಮ ರವಾಗಿ ಬೆಳೆದು ಇತರಿಗೂ ಆಸರೆಯಾಗಲಿದೆ. ಆ ನಿಟ್ಟಿನಲ್ಲಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ವಾರಕ್ಕೇ ಎರಡು ದಿನ ಕೆಲಗಂಟೆಗಳು ಶ್ರಮಿಸಬೇಕಿದೆ ಎಂದರು.
ವಿಭಾಗದ ಪ್ರಾಂತ್ಯ ಅಧ್ಯಕ್ಷ ಬಿ.ಕೆ.ಬಸವರಾಜ್ ಮಾತನಾಡಿ ನಾಯಕತ್ವ ಗುಣ, ಶಿಸ್ತು, ಸಂಯಮ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಮೈಸೂರು ಸಾಮಾಜಿಕ ಶಕ್ತಿ ತುಂಬುವ ಕೆಲಸೆ ಅನೇಕ ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡಿಕೊಂಡು ಬರುತ್ತಿದೆ. ವಿದ್ಯಾರ್ಥಿದೆಸೆಯಲ್ಲೇ ಇವುಗಳ ಪ್ರಯೋಜನ ಪಡೆದುಕೊಂಡಲ್ಲಿ ಮಕ್ಕಳು ದೇಶದ ಆಸ್ತಿ ಆಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.
ಸೈಟ್ಸ್-ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ನೀಲಕಂಠಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ವಿವಿಧ ವಸತಿ ಶಾಲೆ ಪ್ರಾಂಶುಪಾಲ-ರಿಗೆ ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ರವೀಶ್, ಸ್ಕೌಟ್ಸ್-ಗೈಡ್ಸ್ ತರಬೇತಿ ಆಯುಕ್ತರಾದ ಸಂಧ್ಯಾರಾಣೀ, ಪ್ರತಿಮಾ, ಸಂಗಟನಾ ಆಯುಕ್ತ ಕಿರಣ್ ಕುಮಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬಿ.ಆರ್. ರಕ್ಷಿತ್ ಮತ್ತಿತ ರರು ಉಪಸ್ಥಿತರಿದ್ದರು.

