ಚಾರ್ಮಾಡಿ ಘಾಟಿಗೆ ಜಿಲ್ಲಾದಿಕಾರಿಗಳ ಭೇಟಿ, ಪರಿಶೀಲನೆ…
1 min read
ಚಾರ್ಮಾಡಿ ಘಾಟಿಗೆ ಜಿಲ್ಲಾದಿಕಾರಿಗಳ ಭೇಟಿ, ಪರಿಶೀಲನೆ
ಕೊಟ್ಟಿಗೆಹಾರ: ಮುಂಗಾರು ಪ್ರಾರಂಭವಾಗಿರುವ
ಹಿನ್ನಲೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್, ಬಾಳೂರು, ಮಧುಗುಂಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿ ಮುಂಜಾಗೃತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮುಂಗಾರು ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕುರಿತು ಅರಣ್ಯ, ಕಂದಾಯ, ಪೊಲೀಸ್ ಮುಂತಾದ ಇಲಾಖೆಗಳ ಅಧಿಕಾರಗಳ ಜೊತೆ ಚರ್ಚೆ ನಡೆಸಿದರು. ಚಾರ್ಮಾಡಿ ಘಾಟ್ ಹೆದ್ದಾರಿ, ತಡೆಗೋಡೆ ಮುಂತಾದವುಗಳನ್ನು ವೀಕ್ಷಿಸಿದರು. ನೆರೆಪ್ರವಾಹ ಪೀಡಿತ ಪ್ರದೇಶಗಳಾದ ಬಾಳೂರು ಮಧುಗುಂಡಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಅಧಿಕಾರ ಬಳಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಟೇಶ್, ಸಹಾಯಕ ಅರಣ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ರಂಜಿತ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಚನ್ನಕೇಶವ, ಅಭಿಯಂತರರಾಧ ಚನ್ನಯ್ಯ, ಮಂಜುನಾಥ್, ಹೆದ್ದಾರಿ ಪ್ರಾಧಿಕಾರದ ಅಭಿಯಂತರರಾದ ಶಶಿಕುಮಾರ್, ವಿಶ್ಲೇಶ್, ವೃತ್ತನಿರೀಕ್ಷಕ ರಾಜಶೇಖರ್, ರಾಜಸ್ವ ನಿರೀಕ್ಷಕ ಮಂಜುನಾಥ್, ಬಾಬು, ಗ್ರಾಮ ಲೆಕ್ಕಾಧಿಕಾ-ರಿಗಳಾದ ಮಹೇಶ್, ಸಾಮಾಜಿಕ ಕಾರ್ಯಕರ್ತ ಸಂ-ಜಯಗೌಡ ಕೊಟ್ಟಿಗೆಹಾರ ಮುಂತಾದವರು ಇದರು.

