ಡಾ.ಸಿ ಟಿ ರವಿ ಕುರಿತು ಮಹಾಪ್ರಬಂಧ: ಪ್ರಾಧ್ಯಾಪಕ ಲೋಕೇಶ್ ಗೆ ಡಾಕ್ಟರೇಟ್ ಪದವಿ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಡಾ.ಸಿ ಟಿ ರವಿ ಕುರಿತು ಮಹಾಪ್ರಬಂಧ: ಪ್ರಾಧ್ಯಾಪಕ ಲೋಕೇಶ್ ಗೆ ಡಾಕ್ಟರೇಟ್ ಪದವಿ.
ಬೆಂಗಳೂರು ಜೂನ್ ೦೭:
ಎಂ.ಕೆ. ಲೋಕೇಶ ಅವರು “ರಾಜಕಾರಣದಲ್ಲಿ ಸಿ.ಟಿ.ರವಿ ಒಂದು ಅಧ್ಯಯನ’ (ವಿಶೇಷವಾಗಿ ರಾಜಕೀಯ ಮತ್ತು ಆಡಳಿತಾತ್ಮಕ ನಾಯಕತ್ವ)’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ಕೆ.ಜೆ. ಸುರೇಶ್ ಅವರ ಮಾರ್ಗದರ್ಶನದಲ್ಲಿ ಲೋಕೇಶ ಅವರು ಈ ಮಹಾಪ್ರಬಂಧ ಮಂಡಿಸಿದ್ದರು.
ದಿ.ಕೃಷ್ಣಪ್ಪ ಮತ್ತು ಮರಿಯಮ್ಮ ದಂಪತಿ ಪುತ್ರರಾದ ಲೋಕೇಶ ಅವರು ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್. ಪುರಂ ನಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
•••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

