ಗೌರವ ಡಾಕ್ಟರೇಟ್ ಪಡೆದ ಶೈಲಾ ಬಸವರಾಜ್ಗೆ ಸನ್ಮಾನ : ನಟರಾಜ್….
1 min read
ಗೌರವ ಡಾಕ್ಟರೇಟ್ ಪಡೆದ ಶೈಲಾ ಬಸವರಾಜ್ಗೆ ಸನ್ಮಾನ : ನಟರಾಜ್
ಚಿಕ್ಕಮಗಳೂರು-ಸಮಾಜ ಸೇವೆಯಲ್ಲಿ ಉತ್ತಮಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಟರ್ ರೀಸರ್ಚ್ ಅಂಗನವಾಡಿ ಯೂನಿವರ್ಸಿಟಿ ಕಾರ್ಯಕರ್ತೆ ಶೈಲಾ ಬಸವರಾಜ್ ರವ-ರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವ ಹಿನ್ನಲೆಯಲ್ಲಿ ಮಾನವ ಹಕ್ಕುಗಳ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಸಿ ನಟ-ರಾಜ್ ತಿಳಿಸಿದರು.
ಅವರು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ನಿರ್ದೇಶಕರಾಗಿ ಸಮಿತಿಯ ಸೇವೆ ಸಲ್ಲಿಸುತ್ತಿರುವ ಶೈಲಾ ಬಸವರಾಜ್ ರವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿರುವ ಹಿನ್ನಲೆಯಲ್ಲಿ ಸನ್ಮಾನಿಸಿ ಮಾತನಾಡಿದರು.
ಶೈಲಾ ಬಸವರಾಜ್ ರವರು ಅಂಗನವಾಡಿ ವೃತ್ತಿಯಲ್ಲಿ ತೊಡಗಿಸಿ ಕೊಂಡಿರುವ ಜೊತೆಗೆ ಸಮಾಜಸೇವೆಯಲ್ಲಿ ಮುಂಚೂಣಿ ಯಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿದ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿರುವ
ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆಯು ಸಾಧನೆ ಮಾಡಬಹುದೆಂದು ಸಮಾಜಕ್ಕೆ ತೋರಿಸಿದ್ದಾರೆ ಎಂದು ಶ್ಲಾಘಿ-ಸಿದರು.
ವೃತ್ತಿ ಮತ್ತು ಸಮಾಜಸೇವೆ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ಉತ್ತಮ ಸೇವೆ ಸಲ್ಲಿಸಿ ಸಾರ್ವಜನಿಕರ ಪ್ರಶಂಸೆ ಗಳಿಸಿರುವ ಶೈಲಾ ಬಸವರಾಜ್ ರವರು ಪ್ರಸ್ತುತ ಮಾನವ ಹಕ್ಕುಗಳ ಸಮಿತಿಯಲ್ಲಿ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರೂ ಸಾಧನೆ ಮಾಡಬಹುದು ಎಂದು ಶೈಲಾ ರವರು ತೊರಿಸಿ
ಸ್ಫೂರ್ತಿಯಾಗಿದ್ದಾರೆ ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿರುವ ಇವರು ಸಾರ್ವಜನಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಹೆಚ್ಚು-ಹೆಚ್ಚು ಪ್ರಶಸ್ತಿಗಳನ್ನು ಪಡೆಯಲಿ ಎಂದು ಆಶಯ ವ್ಯಕ್ತಪಡಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಕೃಷ್ಣಗೌಡ, ನಿರ್ದೇಶಕರುಗಳಾದ ಪ್ರಭು, ಗೌರಮ್ಮ, ಸುಶೀಲಮ್ಮ, ಶಾಹಿನಾ, ಸಮಾಜಸೇವಕ ಜಗದೀಶ್ ಉಪಸ್ಥಿತರಿದ್ದರು.

ವರದಿ..
ಬಾರತಿಉಮೇಶ್.

