ಆಯುಷ್ಮಾನ್’ ರೋಗಿಗಳಿಂದ ಹಣ ಸ್ವೀಕಾರಕ್ಕೆ ಕಡಿವಾಣ: ಸಚಿವ ಯು.ಟಿ.ಖಾದರ್….
1 min read
ಆಯುಷ್ಮಾನ್’ ರೋಗಿಗಳಿಂದ ಹಣ ಸ್ವೀಕಾರಕ್ಕೆ ಕಡಿವಾಣ: ಸಚಿವ
ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಮೇಲೆ ಹೆಚ್ಚುವರಿ ಭಾರ
ಉದಯವಾಣಿ ಸಮಾಚಾರ ಬೆಂಗಳೂರು: ಆಯುಷ್ಮಾನ್ ಭಾರತ-.
ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಚಿಕಿತ್ಸೆ ರೋಗಿಗಳಿಂದ ಪಡೆಯುವ ಖಾಸಗಿ ಆಸ್ಪತ್ರೆಗಳು ಹಣ ಪಡೆಯುತ್ತಿ ರುವುದು ಕಂಡುಬರುತ್ತಿದ್ದು, ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ವಿಧಾನಸೌಧದಲ್ಲಿ ಮಾತನಾಡಿ, ಉತ್ತಮ ಯೋಜನೆ
ರೂಪಿಸುವ ಹೊಣೆ ನನ್ನ ಮೇಲೆ ಇದೆ. ಈಗಾಗಲೇ ಇರುವ ಯೋಜನೆ ಗಳನ್ನು ತಲುಪಿಸು ವಲ್ಲಿಕೆಲವೆಡೆ ತೊಂದರೆಯಿದೆ. ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ಸದಸ್ಯ ರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.100 ಉಚಿತ ಚಿಕಿತ್ಸೆ ಲಭಿಸಬೇಕು. ಯೋಜನೆಯಲ್ಲಿ ಬಿಪಿಎಲ್ ಆದರೆ, ಯೋಜನೆಯ ಹಣ ಬಂದಿಲ್ಲ. ಈ ಚಿಕಿತ್ಸೆ ಕವರ್ ಆಗುವುದಿಲ್ಲ. ಇತರೆ ಖರ್ಚು ಎಂದು ಹೇಳಿ ಕೆಲವು ಖಾಸಗಿ ಆಸ್ಪತ್ರೆಗಳು ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಅದಕ್ಕೆ ಕಡಿವಾಣ ಹಾಕುತ್ತೇನೆ ಎಂದರು.

