ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆ ಸರ್ಕಾರ ಈಡೇರಿಸಿದೆ ಚಿಕ್ಕಮಗಳೂರು:..
1 min read
ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆ ಸರ್ಕಾರ ಈಡೇರಿಸಿದೆ
ಚಿಕ್ಕಮಗಳೂರು:
ಕಾಲೇಜು ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯಾದ ಉಚಿತ ಬಸ್‌ಪಾಸ್ ಸೌಲಭ್ಯವನ್ನು ಒದಗಿಸಲು ರಾಜ್ಯಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಹೇಳಿದರು. ಎಂ.ಸಿ.ಶಿವಾನಂದಸ್ವಾಮಿ
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಅನ್ ಎಸ್ ಯು ಜಿಲ್ಲಾ ಸಮಿತಿಯಿಂದ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಸುವರ್ಣ ಯುಗದ ಶುಭಾರಂಭಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸ್ವಾ ತಿಸುವ ಮೂಲಕ ಅವರು ಮಾತನಾಡಿದರು.
ಮನೆಯಿಂದ ಉದ್ಯೋಗ ಅಥವಾ ತವರಿಗೆ ತೆರಳಲು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪಯಣ ಸರ್ಕಾರ ಕಲ್ಪಿಸಿದೆ. ಅದರಂತೆ ಅಣ್ಣ-ತಮ್ಮಂದಿರಿಗೆ ಶಾಲಾ-ಕಾಲೇಜಿಗೆ ತೆರಳಲು ಬಸ್‌ಪಾಸ್ ಯೋಜನೆ ಜಾ-ರಿಗೊಳಿಸುವ ಮೂಲಕ ಮುಖ್ಯಮಂತ್ರಿ ಡಿಕೆಶಿಯವರು ಸೃಷ್ಟಿಸಿದ್ದಾರೆ ಎಂದರು.
ರಾಜ್ಯದಲ್ಲಿ ಒಂದನೇ ತರಗತಿಯಿಂದ ಪಿಜಿವರೆಗೆ ವ್ಯಾಸಂಗಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪಯಣಕ್ಕೆ ವ್ಯವಸ್ಥೆ ರೂಪಿಸುವ ಮೂಲಕ ಆರನೇ ಗ್ಯಾರಂಟಿಯಾಗಿ ಘೋಷಿಸಿದ್ದಾ ರೆ. ಆ ನಿಟ್ಟಿನಲ್ಲಿ ಎನ್-ಎಸ್ ಯುಐ ಜಿಲ್ಲಾ ಘಟಕ ಸಾರಿಗೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳ ಜೊತೆಗೂ ಸಂಭ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದಿಂದ ಕೆಲವೇ ದಿನಗಳಲ್ಲಿ ಉಚಿತ ಬಸ್‌ಪಾಸ್ ಸಂಬಂಧ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಲಿದೆ. ಇದಕ್ಕೆ ಕಾಲೇಜು ಅನುಮತಿ ಪತ್ರ, ಪಾಸ್ ಪಡೆಯುವ ನಿಯಮ, ಪಾಸಿನ ಅವಧಿ ಎಷ್ಟಿದೆ ಹಾಗೂ ಎಲ್ಲಿಯವರೆಗೆ ಸಂಚರಿಸುವುದು ಎಂಬ ಸಂಪೂರ್ಣ ಮಾಹಿತಿ ಸರ್ಕಾರ ಆದೇಶಿಸಲಿದೆ ಎಂದರು.
ಉಚಿತ ಪಯಣ ಸಂಬಂಧ ಮಹಿಳೆಯರು ಬಸ್‌ಪಾಸ್ ಸೇರಿದಂತೆ ವಿದ್ಯಾರ್ಥಿಗಳು ಅನಾವಶ್ಯಕವಾಗಿ ದುರುಪಯೋಗ ಮಾಡಿಕೊಳ್ಳದೇ, ಒಳ್ಳೆಯ ರೀತಿಯಲ್ಲಿನ ಉಪಯೋಗಿಸಿಕೊಳ್ಳಬೇಕು. ಸಾರಿಗೆ ಇಲಾಖೆ, ರಾಜ್ಯಸರ್ಕಾರ ಸಾರ್ವಜನಿಕರ ಆಸ್ತಿ. ಆದ್ದರಿಂದ ಬಸ್‌ನಲ್ಲಿ ಸ್ವಚ್ಚತೆ ಕಾಪಾಡಬೇಕು ಹಾಗೂ ಸೀಟ್‌ಗಳನ್ನು ಹಾಳುಮಾಡಬಾರದು ಎಂದು ತಿಳಿಸಿದರು.
ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸುಮಂತ್ ಮಾತನಾಡಿ ಡಿಕೆಶಿ ಅಧಿಕಾರ ವಹಿಸಿಕೊಂಡ ಐದು ಗಂಟೆ ಗಳಲ್ಲಿ ಐದು ಗ್ಯಾರಂಟಿ ಘೋಷಿಸಿದ್ದು, ಈ ಪೈಕಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಕಲ್ಪಿಸಿರುವುದು ಸ್ವಾಗತಾರ್ಹ. ಇದಕ್ಕೆ ವಿದ್ಯಾರ್ಥಿ ಒಕ್ಕೂಟ ಬೆಂಬಲಿಸುವ ಮೂಲಕ ಇಂದು ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಎಂದರು. ನಡೆಸುತ್ತಿದೆ
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್, ಅಸ್ಲಂಬಿ ಉಪಾಧ್ಯಕ್ಷ ಪದಾಧಿಕಾರಿಗಳಾದ ತಶೀರ್‌ಅಹ್ಮದ್, ಕೆಎಸ್‌ಆರ್‌ಟಿಸಿ ದಯಾನಂದ್, ಕಾರ್ತಿಕ್, ವಿಕ್ರಜ್ ಖಾನ್, ಕಿರಣ್, ಮಿಲನ್ ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದರು.
ಈ ಕೆಳಗೆ ಅರ್ಜಿ ನಮೂನೆಯನ್ನು ಲಗತ್ತಿಸಿದೆ..

