लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವನಿ ಅಂಚೆ ಕಚೇರಿಯ ಅಂಚೆಪಾಲಕಿ ಗೀತಾಂಜಲಿ ಅರ್ಚಕ ಅವರಿಗೆ ಆತ್ಮೀಯ ಬೀಳ್ಕೊಡುಗೆ….

1 min read

ಅವಿನ್ ಟಿವಿ ಸುದ್ದಿಜಾಲ ✍️:
ಶಿವನಿ ಅಂಚೆ ಕಚೇರಿಯ ಅಂಚೆಪಾಲಕಿ ಗೀತಾಂಜಲಿ ಅರ್ಚಕ ಅವರಿಗೆ ಆತ್ಮೀಯ ಬೀಳ್ಕೊಡುಗೆ.

ಅಜ್ಜಂಪುರ ಜೂನ್ ೦೫: ಸ್ಥಳೀಯ ಶಿವನಿ ಉಪ ಅಂಚೆ ಕಚೇರಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಅಂಚೆಪಾಲಕಿ ಗೀತಾಂಜಲಿ ಅರ್ಚಕ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೀಳ್ಕೊಡುಗೆ ಸಮಾರಂಭವನ್ನು ಅಂಚೆ ಕಚೇರಿಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಗ್ರಾಮೀಣ ಅಂಚೆ ಸೇವಕರ ಸಂಘಟನೆಯ ವಿಭಾಗಿಯ ಅಧ್ಯಕ್ಷರಾದ ಟಿ ಸಿ ಚಂದ್ರಪ್ರಕಾಶ್ ತ್ಯಾಗದಕಟ್ಟೆರವರು ವಹಿಸಿ,ಭಾರತೀಯ ಅಂಚೆ ಇಲಾಖೆ ವಿಶ್ವದ ಅತಿದೊಡ್ಡ ಅಂಚೆ ಜಾಲಗಳಲ್ಲಿ ಒಂದಾಗಿದೆ. ಇದು ದೇಶದ ಜನರನ್ನು ಸಂಪರ್ಕಿಸುವ ಪ್ರಮುಖ ಸಂವಹನ ವ್ಯವಸ್ಥೆಯಾಗಿ ಹಲವು ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿದೆ,
ಅಂಚೆ ಇಲಾಖೆ ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಲ್ಲ, ಅದು ದೇಶದ ಹಳ್ಳಿಯಿಂದ ಮಹಾನಗರದವರೆಗೆ ಜನರ ಭಾವನೆಗಳು, ಮಾಹಿತಿ ಮತ್ತು ಅಭಿವೃದ್ಧಿಯನ್ನು ಸಂಪರ್ಕಿಸುವ ಜೀವಂತ ಸೇತುವೆಯಾಗಿದೆ, ಇಂತಹ ಅಂಚೆ ಇಲಾಖೆಯಲ್ಲಿ
ಉತ್ತಮ ಸಲಹೆ ಮತ್ತು ಸಹಕಾರದಿಂದ ನಮ್ಮೊಂದಿಗೆ ಕೆಲಸಮಾಡಿದ ಗೀತಾಂಜಲಿ ಅರ್ಚಕ ರವರು,ಕರ್ತವ್ಯದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಹಾಗೂ ಗ್ರಾಹಕ ಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಿದರೆ ಯಾವ ಕೆಲಸವೂ ಕಷ್ಟವೂ ಅಲ್ಲ ಎಂಬುದನ್ನು ತಮ್ಮ ಕರ್ತವ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ, ನಿಷ್ಠೆ ಮತ್ತು ಪ್ರಾಮಾಣಿಕತೆಯೊಂದಿಗೆ ಕರ್ತವ್ಯ ನಿರ್ವಹಿಸಿದ ಗೀತಾಂಜಲಿ ಅರ್ಚಕ ಅವರನ್ನು ಅಭಿನಂದಿಸಿ ಮಾತನಾಡಿದರು.

ಗೌರವ ಸ್ವೀಕರಿಸಿದ ಗೀತಾಂಜಲಿ ಅರ್ಚಕ ರವರು ಇಲಾಖೆಯ ಸಹೋದ್ಯೋಗಿಗಳ ಸಹಕಾರ ಮತ್ತು ಶಿವನಿ ಜನತೆಯು ಕೊಟ್ಟ ಪ್ರೀತಿ ವಿಶ್ವಾಸದಿಂದ ಧಾಖಲೆಯ ಮಟ್ಟದಲ್ಲಿ ಹೆಚ್ಚು ಖಾತೆಗಳನ್ನು ತೆರೆದು ವಲಯ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಯಿತು, ಪುನಃ ಅವಕಾಶ ಸಿಕ್ಕರೆ ಮತ್ತೆ ಇಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದಳಿದ್ದೇನೆ ಎಂಬ ಆಶಯ ವ್ಯಕ್ತಪಡಿಸಿ, ಗ್ರಾಹಕರು ಮತ್ತು ಗ್ರಾಮದ ಜನತೆ ಕೊಟ್ಟ ಪ್ರೀತಿ ವಿಶ್ವಾಸವನ್ನು ನೆನಪು ಮಾಡಿಕೊಂಡು ಅಭಿನಂದನೆ ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಶಿವನಿ ರೈಲು ನಿಲ್ದಾಣದ ಬಿ ಪಿ ಎಂ ಸಚಿನ್, ದಿವ್ಯ ಏ, ಕಲ್ಲೇನಹಳ್ಳಿ ಗಂಗಾಧರ ವೇಣುಗೋಪಾಲ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಲೋಕೇಶ್ ತ್ಯಾಗದ ಕಟ್ಟೆ, ಸಾನು,ಸುಚಿತ್ ಸೇರಿದಂತೆ ಶಿವನಿ ಗ್ರಾಮಸ್ಥರು, ಅಂಚೆ ಇಲಾಖೆಯ ಗ್ರಾಹಕರು, ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಗೀತಾಂಜಲಿ ಅರ್ಚಕ ಅವರ ಸೇವಾ ಮನೋಭಾವ, ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕರೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿ ಬೀಳ್ಕೊಟ್ಟರು.

ಪರಿಮಳ ಚೀರನಹಳ್ಳಿ ಪ್ರಾರ್ಥಿಸಿ,ವೇಣುಗೋಪಾಲ್ ಸ್ವಾಗತಿಸಿ ಸತೀಶ್ ದಂದೂರು ವಂದಿಸಿದರು
••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed