लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯದ 25ನೇ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ….

1 min read

ಅವಿನ್ ಟಿವಿ ಸುದ್ದಿಜಾಲ ✍️: ಕರ್ನಾಟಕದಲ್ಲಿ ಈಗ ಅಧಿಕಾರ ಹಸ್ತಾಂತರ ಪರ್ವದ ಕ್ಷಣಗಣನೆ: ರಾಜ್ಯದ 25ನೇ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ.

ಬೆಂಗಳೂರು ಜೂನ್ ೦೩:
*ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಎಂಬ ಹೆಸರಿನವನಾದ ನಾನು…..*
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯಾವ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂಬುದು ಬಹುತೇಕ ಈಗ ಎಲ್ಲರಿಗೂ ಅರ್ಥವಾಗಿದೆ.

ಹಿಂದುಳಿದ ವರ್ಗದ ಸಮುದಾಯಕ್ಕೆ ದಕ್ಕಿದ್ದ ಮುಖ್ಯಮಂತ್ರಿ ಪಟ್ಟ ಈಗ ಕರ್ನಾಟಕ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ದಕ್ಕುತ್ತಿದೆ.

64ರ ವಯೋಮಾನದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ತದನಂತರ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿ, ಪ್ರಮಾಣವಚನ ಸಮಾರಂಭಕ್ಕೆ ಅಹ್ವಾನಿಸಿದ್ದಾರೆ.

ಹಾಗೆಯೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಿ.ಪಮೇಶ್ವರ್ ಅವರೂ ಸಹ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಇಂದು 13 ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಂಭವ ಇದೆ,

ಇಂದು ಸಂಜೆ ಘಂಟೆ 04 :05ಕ್ಕೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಪ್ರಮಾಣವಚನ ಸಮಾರಂಭದ ನೇರ ಪ್ರಸಾರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 230 ಬಸ್ ನಿಲ್ದಾಣಗಳಲ್ಲಿ ರಾಜ್ಯದ ಜನತೆ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಕರ್ನಾಟಕದ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಸುದೀರ್ಘಕಾಲದ ನಂತರ ಒಕ್ಕಲಿಕ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಮತ್ತೊಮ್ಮೆ ದೊರೆತಂತಾಗಿದೆ.

ಸಾಮಾನ್ಯವಾಗಿ ಯಾವುದೇ ಒಂದು ಆಡಳಿತ ಪಕ್ಷದ ವಿದ್ಯಮಾನ ವಿರೋಧಪಕ್ಷದ ವಿದ್ಯಮಾನದ ಮೇಲೆ ಪರಿಣಾಮ ಬಿದ್ದೆ ಬೀರುತ್ತದೆ, ಹಾಗಾಗಿ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತದೆಯೋ ಅದರ ಆಧಾರದ ಮೇಲೆ ವಿರೋಧ ಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತವೆ ಎನ್ನಬಹುದು, ಹೀಗಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಸೇರಿದಂತೆ ಕೆಳಮನೆ ಮತ್ತು ಮೇಲ್ಮನೆ ಈ ಎರಡು ಸದನಗಳಲ್ಲೂ ಹಲವು ಬದಲಾವಣೆಗಳು ಆಗುವುದು ಸಹಜ.

ಈ ರೀತಿ ಏನೇ ಬದಲಾವಣೆಗಳು ಆಗಲಿ, ಆದರೆ ಹೋರಾಟ ಮತ್ತು ಹಿಂದುತ್ವದ ಆಧಾರದ ಮೇಲೆ ಅಧಿಕಾರ ಪಡೆಯಲು ಹಂಬಲಿಸುತ್ತಿರುವ ವಿರೋಧಪಕ್ಷವಾದ ಭಾರತೀಯ ಜನತಾ ಪಕ್ಷವು,ಅಪ್ಪಟ ಹಿಂದುತ್ವವಾದಿಯಾದ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಹಿಂದುತ್ವದ ಆಧಾರದ ಮೇಲೆ ಯಾವ ರೀತಿ ಕಟ್ಟಿಹಾಕಿ ಚುನಾವಣಾ ರಾಜಕೀಯವನ್ನು ಮಾಡುತ್ತದೆ ಎಂಬುದು ಈಗ ಪಕ್ಷಕ್ಕೆ ಒಂದು ಸವಾಲಾಗಿ ಬಿಡಬಹುದು, ಈಗಾಗಲೇ ಭಾರತೀಯ ಜನತಾ ಪಕ್ಷ ಕಠೋರ ಹಿಂದುತ್ವವಾದಿಗಳನ್ನು ತನ್ನ ಪಕ್ಷದಿಂದ ಹೊರಗಿಟ್ಟಿರುವುದನ್ನು ಕಾಣಬಹುದು, ಹಾಗೆಯೇ ಜೆಡಿಎಸ್ ಪಕ್ಷಕ್ಕೆ ತನ್ನ ಹಿಡಿತದಲ್ಲಿರುವ ಪ್ರಬಲ ಒಕ್ಕಲಿಗ ಸಮುದಾಯದ ವೋಟ್ ಬ್ಯಾಂಕಿಗೆ ಟ್ರಬಲ್ ಶೂಟರ್ ಆದ ನೂತನ ಮುಖ್ಯಮಂತ್ರಿ ಯಾವ ರೀತಿ ಕೈ ಹಾಕಲಿದ್ದಾರೆ,ಈ ಹಿನ್ನಲೆಯಲ್ಲಿ ದೇವರು ಧರ್ಮ ಜ್ಯೋತಿಷ್ಯವನ್ನು ಅಪಾರವಾಗಿ ನಂಬಿ, ನಾನು ಅಪ್ಪಟ ಹಿಂದುತ್ವವಾದಿ ಎಂದು ಹಲವು ಬಾರಿ ಹೇಳಿಕೊಂಡಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಿಂದುತ್ವ ಮತ್ತು ಸಮುದಾಯದ ಹೆಸರಿನಲ್ಲಿ ಎದುರಿಸುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಒಂದು ಚಾಲೆಂಜ್ ಎನ್ನಬಹುದು, ಇಂತಹ ಚಾಲೆಂಜನ್ನು ಎದುರಿಸಲು ವಿರೋಧ ಪಕ್ಷಗಳಿಗೆ ಈಗ ಸಮರ್ಥ ನಾಯಕತ್ವದ ಅವಶ್ಯಕತೆ ಇದೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed