लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪಟ್ಟಣ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರಿಂದ ಇಂದು ಕಚೇರಿ ಮುಂದೆ ಘನತ್ಯಾಜ್ಯ ಸುರಿದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು….

1 min read

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಿಗೆರೆ ತಾಲೂಕ, ಮೂಡಿಗೆರೆ.
ಮೂಡಿಗೆರೆ ಪಟ್ಟಣ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರಿಂದ ಇಂದು ಕಚೇರಿ ಮುಂದೆ ಘನತ್ಯಾಜ್ಯ ಸುರಿದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೂಡಿಗೆರೆ ಪಟ್ಟಣ ಪಂಚಾಯತ್ ಸ್ಥಳೀಯ ಅಧಿಕಾರಿಗಳು ಘನ ತ್ಯಾಜ್ಯ ಮತ್ತು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದು ಕೊಳೆತ ತ್ಯಾಜ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಸ್ಥಳೀಯ ಆಡಳಿತ ಕಂಡು ಕಾಣದಂತಿದೆ. ಅಲ್ಲಲ್ಲಿ ಸುರಿದಿರುವ ಘನತ್ಯಾಜ್ಯ ಕೊಳೆತು ನೀರಿನಲ್ಲಿ ಕೊಚ್ಚಿ ಹಳ್ಳ ಸೇರಿ ಶುದ್ಧ ನೀರು ಕಲುಷಿತಗೊಳ್ಳುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವ ಸ್ಥಳೀಯ ಆಡಳಿತ ಘನತ್ಯಾಜ್ಯ ನಿಯಂತ್ರಿಸುವಲ್ಲಿ ಹಾಗೂ ಸ್ವಚ್ಛತೆಯಲ್ಲಿ ಸಂಪೂರ್ಣ ವಿಫಲವಾಗಿ ತುಂಬಾ ಅಸಹ್ಯ ಪಡುವಂಥ ಸ್ಥಿತಿ ಬಂದು ತಲುಪಿದೆ
ಪಟ್ಟಣದ ಸ್ಥಳೀಯ ಸಮಸ್ಯೆಗಳನ್ನು ಕಚೇರಿಗೆ ದೂರು ನೀಡಲು ಬಂದರೆ ಸ್ಥಳೀಯ ಅಧಿಕಾರಿಗಳು ಯಾವುದೇ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪಟ್ಟಣದ ವಾರ್ಡ್ ನಂಬರ್ ಎರಡರಲ್ಲಿ ಸೂಕ್ತ ಕಸ ವಿಲೇವಾರಿ ಆಗದೆ ತೊಂದರೆ ಆಗಿರುವ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರಿಗೆ ಹಲವಾರು ಬಾರಿ ದೂರವಾಣಿ ಕರೆ ಮತ್ತು ಲಿಖಿತವಾಗಿ ದೂರು ನೀಡಿದರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಇಂದು ಪಂಚಾಯಿತಿ ಕಚೇರಿ ಮುಂದೆ ಘನ ತ್ಯಾಜ್ಯ ಸುರಿಯುವುದರ ಮೂಲಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಸಮರ್ಪಕ ಹಾಗೂ ನಿರ್ಲಕ್ಷ ಧೋರಣೆ ತಾಳಿದರೆ ಕಚೇರಿ ಒಳಭಾಗದಲ್ಲಿ ಸುರಿಯಲಾಗುವುದೆಂದು ಎಚ್ಚರಿಕೆ ನೀಡಲಾಯಿತು.
ಮುಖ್ಯ ಅಧಿಕಾರಿ ಫೋನ್ ಮೂಲಕ ಮಾತನಾಡಿ ನಾಳೆಯಿಂದ ಘನತ್ಯಾಜ್ಯ ಸಾಗಾಣಿಕೆ ಮತ್ತು ನಿರ್ವಹಣೆ ಮಾಡೋದಾಗಿ ಪ್ರತಿಭಟನಾ ನಿರತ ಸಂಘಟಗರಿಗೆ ಭರವಸೆ ನೀಡಿದ್ದಾರೆ.
ಪಟ್ಟಣದ ಚತ್ರ ಮೈದಾನದ ರಸ್ತೆಗಳನ್ನು ನೀರಿನ ಪೈಪ್ ಅಳವಡಿಸಲು ಚರಂಡಿ ಹೊಡೆದಿದ್ದು ರಸ್ತೆ ಸಂಚಾರಕ್ಕೆ ಬಹಳ ತೊಂದರೆ ಆಗಿರುತ್ತದೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಪಟ್ಟಣದ ಮಧ್ಯ ಹಾದು ಹೋಗುವ ಕೆಲವು ರಸ್ತೆಗಳನ್ನು ನೀರಿನ ಪೈಪ್ ಅಳವಡಿಸಲು ಸಣ್ಣ ಸಣ್ಣ ತುಂಡಾಗಿ ಕತ್ತರಿಸಿದ್ದು ಇಲ್ಲಿಯವರೆಗೆ ಅವುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡದೆ ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ .ಪಟ್ಟಣ ಪಂಚಾಯತ್ ಮುಂದೆ ರಂಗಮಂದಿರವಿದ್ದು ಸ್ವಚ್ಛತೆ ಇಲ್ಲದೆ ಸೊರಗುತಿದೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಲಾಯಿತು.
ಇಂದಿನ ಪ್ರತಿಭಟನೆಯಲ್ಲಿ ಈ ಕೆಳಕಂಡ ಮುಖಂಡರುಗಳು ನೇತೃತ್ವ ವಹಿಸಿದ್ದರು.
ಡಿಆರ್ ದುಗ್ಗಪ್ಪಗೌಡ ಜಿಲ್ಲಾಧ್ಯಕ್ಷರು, ವೃಷಭ ರಾಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಿಕೆ ನಾಗೇಶ್ ಜಿಲ್ಲಾ ಸಂಚಾಲಕರು, ಎಸ್ ಪಿ ರಾಜು ತಾ, ಅಧ್ಯಕ್ಷರು, ತುಳಸೇಗೌಡ ತಾ. ಅಧ್ಯಕ್ಷರು ಚಿಕ್ಕಮಗಳೂರು, ಡಿ ಎಸ್ ರಮೇಶ್ ಸಂಚಾಲಕರು, ಬಸವರಾಜಪ್ಪ ಉಪಾಧ್ಯಕ್ಷರು, ಕಳಸ ಕೃಷ್ಣ ,ಹೊರನಾಡು ಪದ್ಮರಾಜ್ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

You may have missed