ವಿದ್ಯಾರ್ಥಿಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿದ ಶಿಕ್ಷಕರು
1 min read
ಶಾಲಾ ಮಕ್ಕಳಿಗೆ ಪೂರ್ಣ ಕುಂಭ ಸ್ವಾಗತ ನೀಡಿದ ಶಿಕ್ಷಕರು

ದಿನಾಂಕ:01:06:2026ರಂದು ರಾಜ್ಯದೆಲ್ಲೆಡೆ ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಯು 2026-27 ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೊಸ ಕನಸನ್ನು ಹೊತ್ತು ಲವಲವಿಕೆಯಿಂದ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳನ್ನು ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಹೂವು ಮತ್ತು ಲೇಖನಿಯನ್ನು ನೀಡಿ ಆರತಿ ಬೆಳಗಿ ಪೂರ್ಣ ಕುಂಭ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ, ಮಕ್ಕಳಿಗೆ ವಿದ್ಯಾಸಂಸ್ಥೆಯು ಜ್ಞಾನ ಮತ್ತು ಸಂಸ್ಕಾರಯುತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಕಲ್ಪದೊಂದಿಗೆ ಹೆಜ್ಜೆ ಇಟ್ಟಿದ್ದು ಎಲ್ಲಾ ಮಕ್ಕಳು ಜ್ಞಾನವಂತರಾಗಿ ಸಮಾಜದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕರು ವರ್ಷದ ಪ್ರತಿದಿನವು ಹೊಸತನದ ಹಾದಿಯಲ್ಲಿ ಮಕ್ಕಳಿಗೆ ಬೋಧನೆ ಮತ್ತು ಮಾರ್ಗದರ್ಶನ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸಿ ಸಂಸ್ಥೆಯ ಏಳಿಗೆಗೆ ಸೇವೆಯನ್ನು ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರ ಸಮ್ಮುಖದಲ್ಲಿ ಶಾರದಾ ಪೂಜೆಯನ್ನು ನೆರವೇರಿಸಿ ಸಿಹಿ ವಿತರಣೆ ಮಾಡಲಾಯಿತು. ಮಕ್ಕಳು ಶಾರದ ಮಾತೆಗೆ ಪುಷ್ಪಾರ್ಚನೆ ಮಾಡಿ, ಪಾಲಕರು ಮತ್ತು ಶಿಕ್ಷಕರಿಗೆ ನಮಿಸಿ ತರಗತಿಯನ್ನು ಪ್ರವೇಶಿಸಿದರು.
ಮಕ್ಕಳನ್ನು ಪೂರ್ಣ ಕುಂಭ ದೊಂದಿಗೆ ಅದ್ಧೂರಿಯಾಗಿ ಸಂಭ್ರಮದಿಂದ ಬರಮಾಡಿಕೊಂಡ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ನಿರ್ದೇಶಕರಾದ ಬಿ.ಬಿ.ಮಂಜುನಾಥ್. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸಿ.ನಾಗರಾಜು. ಉಪಮುಖ್ಯಶಿಕ್ಷಕ ವಸಂತ್ ಹಾರ್ಗೋಡು. ಶಿಕ್ಷಕರಾದ ಭಕ್ತೇಶ್.ವಿಜಯೇಂದ್ರ.ಲಿಂಗರಾಜು.ಪ್ರತಾಪ್.ಲೋಕೇಶ್.ಅಶ್ವತ್.ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್.ನೃತ್ಯಶಿಕ್ಷಕ ಕಿಶೋರ್.ಲೀಲಾಮಣಿ.ಸಾಯಿಕೀರ್ತನಾ.ಕನ್ನಿಕ.ಕುಸುಮ.ಎಸ್.ಶೆಟ್ಟಿ.ಗೀತಾ.ಅಶ್ವಿತಾ.ಆಶಾ.ಪೂಜಾ.ಅನುಷ.ಆರೋಗ್ಯವಾಣಿ.ಚಂದನ.ಪ್ರೀತಿ.ಶಾಲಾ ಬೋಧಕೇತರ ಸಿಬ್ಬಂದಿ .ಅಡುಗೆ ಸಿಬ್ಬಂದಿ.ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.






