लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✍️: ಅಲ್ದೂರಿನ ನವೀನ ಮಹೇಶ್ ಅಕಾಲಿಕ ಮರಣಕ್ಕೆ ತುತ್ತು.

ಆಲ್ದೂರು ಮೇ 31: ಜಾತಸ್ಯ ಮರಣಂ ಧ್ರುವಂ.

ಹುಟ್ಟಿದ ಕ್ಷಣದಿಂದ ಮನುಷ್ಯ ಸಾಗುವುದೇ ಮರಣದ ಕಡೆಗೆ….

ಎಂದಿನಂತೆ ಊಟ ಮಾಡಿ ರಾತ್ರಿ ಮಲಗಿದವರು ಬೆಳಿಗ್ಗೆ ಮಗ್ಗಲು ಮಾಡಿ ಏಳದೆ ಚಿರನಿದ್ರೆಗೆ ಜಾರಿ ಹೋಗಿ, ಹೊತ್ತಲ್ಲದ ಸಮಯದಲ್ಲಿ ಸಾವಿನ ಜಾಡು ಹಿಡಿದು , ಅಕಾಲಿಕ ಮರಣಕ್ಕೆ ಇಂದು ತುತ್ತಾದ ಆಲ್ದೂರಿನ ಸಹೋದರಿ 58ರ ವಯೋಮಾನದ ನವೀನ ಮಹೇಶ್ ಅವರಿಗೆ ಭಾವಪೂರ್ಣ ಸಂತಾಪಗಳನ್ನು ಸಲ್ಲಿಸುತ್ತಾ , ಪತಿ ಮಹೇಶ್ ಮತ್ತು ಗಂಡು ಮಕ್ಕಳಾದ ಸ್ಪರ್ಶಿತ್. ಡಾ. ಸ್ಕಂದ ಸೇರಿದಂತೆ ಅವರ ಇಡೀ ಕುಟುಂಬ ವರ್ಗಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಒದಗಿ ಬರಲಿ ಎಂದು ಆಶಿಸುತ್ತಾ…. ಈ ಅಕಾಲಿಕ ಮರಣವನ್ನು ಕುರಿತು ಒಂದೆರಡು ಮಾತುಗಳೊಂದಿಗೆ ನುಡಿ ನಮನವನ್ನು ಸಲ್ಲಿಸುತ್ತಿದ್ದೇನೆ.

ಕೆಲವು ಅನಿರೀಕ್ಷಿತ ಮತ್ತು ಅಕಾಲಿಕ ಸಾವುಗಳು ನಮ್ಮನ್ನು ಕದಡಿ ಬಿಡುತ್ತವೆ, ಕಮರಿ ಹಾಕುತ್ತವೆ, ಅವರು ಹತ್ತಿರದವರೇ ಆಗಿರಲಿ ಅಥವಾ ದೂರದ ವ್ಯಕ್ತಿಗಳೇ ಆಗಿರಲಿ ಅಥವಾ ಜನಪ್ರಿಯತೆ ಹೊಂದಿದವರೇ ಆಗಿರಲಿ ಏನೋ ಒಂದು ಸಂಕಟ ಮನಸ್ಸಿನಲ್ಲಿ ಉಂಟಾಗುತ್ತದೆ.

ಸಾವು ಅನಿವಾರ್ಯ. ಅದು ಎಲ್ಲರಿಗೂ ತಿಳಿದಿದೆ. ಸಮಯ ಮಾತ್ರ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೂ ಇನ್ನೆಂದೂ ಬಾರದ ಲೋಕಕ್ಕೆ ಜೀವ ಹೊರಟು ಹೋಗುತ್ತದೆ ಎಂಬ ಭಾವವೇ ನಮ್ಮನ್ನು ಕುಸಿಯುವಂತೆ ಮಾಡಿ ಅಪಾರ ತಲ್ಲಣಗಳನ್ನು ಸೃಷ್ಟಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಈ ರೀತಿಯ ಸಾವುಗಳನ್ನಂತೂ ಊಹಿಸಿಕೊಳ್ಳುವುದು ಸಹ ತುಂಬಾ ಯಾತನಾಮಯ.

ಸಹಜವಾಗಿ ಸಾವೆಂದರೆ ದೇಹದ ಚಲನೆಯ ನಿಲ್ಲುವಿಕೆ ಅಥವಾ ತಟಸ್ಥವಾಗುವಿಕೆ. ಅದಕ್ಕಿಂತ ಹೆಚ್ಚಿನ ಅರ್ಥ ಹುಡುಕತೊಡಗಿದರೆ ನಮ್ಮ ಒತ್ತಡ ಹೆಚ್ಚುತ್ತದೆ. ಏನೇ ಅರ್ಥಗಳು ಇದ್ದರೂ ನಾವು ಇಲ್ಲಿರುವುದಿಲ್ಲ ಎಂಬುದಷ್ಟೇ ಸತ್ಯ. ಉಳಿದದ್ದೆಲ್ಲ ಅದರ ವ್ಯಾಖ್ಯಾನ ಮಾತ್ರ.

ಸಾವೇ ಅಂತಿಮ ಅಲ್ಲಿಂದ ಮುಂದೆ ಏನೂ ಉಳಿದಿರುವುದಿಲ್ಲ. ಆದರೆ ಸಮಸ್ಯೆ ಇರುವುದು ಅವರ ಮಡದಿ ಮಕ್ಕಳು ಗಂಡ ಅಪ್ಪ ಅಮ್ಮ ಸೇರಿದಂತೆ ಕುಟುಂಬದ ಅವಲಂಬಿತರು ಮತ್ತು ಪ್ರೀತಿ ಪಾತ್ರರದು.

ಇನ್ನು‌ ಆ ಜೀವ ನಮ್ಮೊಂದಿಗೆ ಇರುವುದಿಲ್ಲ ಎಂಬುದರ ಜೊತೆಗೆ ಅದರಿಂದ ಮುಂದಿನ ನಮ್ಮ ಮೇಲಾಗುವ ಪರಿಣಾಮಗಳು ಸಹ ದುಃಖದ ಪ್ರಭಾವ ಹೆಚ್ಚಿಸುತ್ತದೆ.
ಮರಣವೇ ಮಹಾ ನವಮಿ ಎಂಬ ಶರಣರ ಮಾತುಗಳನ್ನು ವಾಸ್ತವಕ್ಕೆ ಅಳವಡಿಸಿಕೊಳ್ಳುವಷ್ಟು ನಮ್ಮ ಸಮಾಜದ ವೈಯಕ್ತಿಕ ಅಥವಾ ಸಾಮೂಹಿಕ ಮನೋಭಾವ ಬೆಳೆದು ಬಂದಿಲ್ಲ.

ಆತಂಕಕಾರಿಯಾದ ಅಕಾಲಿಕ ಸಾವುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ,ಅದರಲ್ಲೂ ಯುವ ಸಮುದಾಯ ಹೆಚ್ಚಾಗಿ ಹೃದಯಘಾತದಂತಹ ಅವಘಡಕ್ಕೆ ಈಡಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ, ಇಂತಹ ಅಕಾಲಿಕ ಮರಣಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂಬುದು ಒಂದು ಚಿಂತನಾತ್ಮಕ ವಿಷಯವಾಗಿದೆ.

ಮಾನವನ ಜೀವನವು ಅಮೂಲ್ಯವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಅಕಾಲಿಕ ಸಾವುಗಳು ಹೆಚ್ಚುತ್ತಿರುವುದು ಸಮಾಜದಲ್ಲಿ ಆತಂಕವನ್ನುಂಟುಮಾಡುತ್ತಿದೆ.

ವಯಸ್ಸಾದ ನಂತರ ಸಾವನ್ನಪ್ಪುವುದು ಸಹಜ ಪ್ರಕ್ರಿಯೆ ಮತ್ತು ಪ್ರಕೃತಿ ದತ್ತವಾದ ಧರ್ಮ, ಆದರೆ ಯೌವನದಲ್ಲೇ ಅಥವಾ ಮಧ್ಯವಯಸ್ಸಿನಲ್ಲೇ ಸಂಭವಿಸುವ ಸಾವುಗಳು ಕುಟುಂಬ ಹಾಗೂ ಸಮಾಜಕ್ಕೆ ದೊಡ್ಡ ಆಘಾತವನ್ನು ಉಂಟುಮಾಡುತ್ತಿವೆ, ಮನೆಯಲ್ಲಿಯೇ ವೈದ್ಯರು ಇದ್ದರೂ ಕೂಡ ಅಕಾಲಿಕ ಸಾವು ಸಂಭವಿಸುತ್ತಿವೆ, ಅಷ್ಟೇ ಅಲ್ಲ ವೈದ್ಯರು ಕೂಡ ಅಕಾಲಿಕ ಸಾವಿಗೆ ಈಡಾಗುತ್ತಿರುವುದು ಗಂಭೀರವಾದ ವಿಷಯ,

ಒತ್ತಡಭರಿತ ಜೀವನಶೈಲಿ, ಸಾಂಪ್ರದಾಯಿಕವಲ್ಲದ ಆಹಾರ ಪದ್ಧತಿ, ಶ್ರಮರಹಿತವಾದ ಬದುಕು, ಯಂತ್ರಗಳನ್ನು ಮನುಷ್ಯ ಹೆಚ್ಚಾಗಿ ಅವಲಂಬಿಸಿ, ಸುಖಕ್ಕೆ ಜೋತು ಬಿದ್ದ ಕಾರಣ ಸಂತೋಷ ಮತ್ತು ಆರೋಗ್ಯವನ್ನು ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ, ಆರೋಗ್ಯವನ್ನು ಮಾತ್ರವಲ್ಲ, ನಮ್ಮ ನಮ್ಮ ಸಂಕುಚಿತ ಮನೋಭಾವನೆಗಳಿಂದ ಮನುಷ್ಯ ಸಂಕುಲ ಸಹಜವಾದ ನಗುವನ್ನೇ ಮರೆಯುತ್ತಾ ಸಾಗುತ್ತಿದೆ.

ಅಕಾಲಿಕ ಸಾವು ಒಂದು ವ್ಯಕ್ತಿಯ ಸಾವಷ್ಟೇ ಅಲ್ಲ; ಅದು ಒಂದು ಕುಟುಂಬದ ಹಲವು ಕನಸುಗಳು ಕಮರಿ ಹೋದಂತೆ ಆಗುತ್ತದೆ, ಮನೆಯ ಆಧಾರಸ್ತಂಭವಾಗಿರುವ ವ್ಯಕ್ತಿಯ ಅಕಾಲಿಕ ನಿಧನ ಆರ್ಥಿಕವಾಗಿ ಮಾತ್ರವಲ್ಲ, ಕುಟುಂಬವನ್ನು ಮಾನಸಿಕ ಸಂಕಷ್ಟಕ್ಕೆ ತಳ್ಳುತ್ತದೆ. ಮಕ್ಕಳ ಭವಿಷ್ಯ, ಕುಟುಂಬದ ಸ್ಥಿರತೆ ಎಲ್ಲವೂ ಪ್ರಶ್ನಾರ್ಥಕವಾಗುತ್ತದೆ.
••••••••••••••
ಡಿ ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ … ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed