ಕೆಳಗೂರು ಮಕ್ಕಳ ಬೇಸಿಗೆ ಬೆಸುಗೆ ಶಿಬಿರ ಸಮಾರೋಪ….
1 min read
ಕೆಳಗೂರು ಮಕ್ಕಳ ಬೇಸಿಗೆ ಬೆಸುಗೆ ಶಿಬಿರ ಸಮಾರೋಪ
ಆಲ್ದೂರು: ಸಮೀಪದ ಕೆಳಗೂರು ಗ್ರಾಮದಲ್ಲಿರುವ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೇಸಿಗೆ ಬೆಸುಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಶನಿವಾರ ಮುಕ್ತಾಯವಾಯಿತು.
ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಚೈತ್ರ ಮಾತನಾಡಿ ಮಕ್ಕಳಿಗಾಗಿ ಉತ್ತಮವಾದಂತಹ ಕಲಿಕೆಯ ವೇದಿಕೆಯನ್ನು ಸರ್ಕಾರದ ವತಿಯಿಂದ ಆಯೋಜಿಸಿದ್ದು ನಲಿಕೆಯೊಂದಿಗೆ ಕಲಿಕೆ ಗೆ ಅತ್ಯುತ್ತಮ ಅವಕಾಶ ಇದಾಗಿದೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಲ್ದೂರು ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್ ಡಿಆರ್, ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣ ಮತ್ತು ವೃದ್ಧಿಗೆ ಬೇಸಿಗೆ ಬೆಸುಗೆ ಶಿಬಿರವು ಮಾದರಿಯಾಗಿದ್ದು, ಸರ್ಕಾರ ಆಯೋಜಿಸುವ ಇಂತಹ ಅದ್ಭುತ ಹಿನ್ನೆಲೆಯುಳ್ಳ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು ಪೋಷಕರು ಅವರನ್ನು ಪ್ರೋತ್ಸಾಹಿಸಬೇಕು
ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳನ್ನು ಇನ್ನಷ್ಟು ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಿಕೊಳ್ಳಲು ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸಲು ಅತ್ಯುತ್ತಮ ಶೀರ್ಷಿಕೆಯ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಗ್ರಂಥ ಪಾಲಕಿ ಧನ್ಯ ಕುಮಾರಿ ಕೆಪಿ, ಮಾತನಾಡಿ
49 ದಿನಗಳ ಶಿಬಿರ ಇದಾಗಿದ್ದು ನಾವು 50 ದಿನಗಳ ಕಾಲ ನಡೆಸಿದ್ದೇವೆ. ಒಟ್ಟು 22 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಪ್ರತಿದಿನವೂ ವಿದ್ಯಾರ್ಥಿಗಳಿಗೆ ಒಂದೊಂದು ಶೀರ್ಷಿಕೆ ಯಡಿ ಕಾರ್ಯಕ್ರಮ ರೂಪಿಸಿದ್ದು, ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ಕಾರ್ಯಗಾರಗಳನ್ನು ಕೂಡ ಆಯೋಜಿಸಿದ್ದೇವೆ ಆರು ವರ್ಷದಿಂದ 15 ವರ್ಷದವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಏರ್ಪಡಿಸಿದ್ದ ಕೌಶಲ್ಯ ಪೂರಿತ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಮುಖ್ಯ ಅತಿಥಿ ಕೆಳಗೂರು ಪೂರ್ಣೇಶ್ ಮಕ್ಕಳೆಲ್ಲರಿಗೂ ವಾಟರ್ ಬಾಟಲ್ ಗಳನ್ನು ಕೊಡುಗೆಯಾಗಿ ನೀಡಿದರು.
ಪಿಡಿಒ ಧರ್ಮಪ್ಪ, ಕಾರ್ಯದರ್ಶಿ ಪ್ರೇಮ, ಆರೋಗ್ಯ ಸಹಾಯಕಿ ಲಿಖಿತ, ಸ್ವಸಹಾಯ ಸಂಘದ ಮೇಲ್ವಿಚಾರಕಿ ಎಂ ಬಿಕೆ,ರಮ್ಯ
ಪಂಚಾಯಿತಿ ಸಿಬ್ಬಂದಿಗಳು ಪೋಷಕರುಗಳು ಇದ್ದರು.

