ಸಿಕ್ಕ 35 ಸಾವಿರ ನಗದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಸ್ಥಳೀಯ ಮುಖಂಡ….
1 min read
ಸಿಕ್ಕ 35 ಸಾವಿರ ನಗದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಸ್ಥಳೀಯ ಮುಖಂಡ
ಆಲ್ದೂರು: ಪಟ್ಟಣದ ಪುಷ್ಪಗಿರಿ ಹಾರ್ಡ್ ವೇರ್ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡರಾದ ಉಮೇಶ್ ದೇವರಹಳ್ಳಿ ರವರಿಗೆ 35 ಸಾವಿರ ನಗದು ಹಣ ಸಿಕ್ಕಿದ್ದು, ಅದನ್ನು ಕೂಡಲೇ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಹಣವನ್ನು ಕಳೆದುಕೊಂಡಿದ್ದ ಕೂಲಿ ಕಾರ್ಮಿಕರಾದ ಶಿವಕುಮಾರ್ ಕವಿತಾ ದಂಪತಿಗಳು ದೂರು ನೀಡಲು ಬಂದಿದ್ದು, ಕಳೆದುಕೊಂಡಿದ್ದ ಹಣವನ್ನು ಪೊಲೀಸರ ಸಮ್ಮುಖದಲ್ಲಿ ಸಂಬಂಧಪಟ್ಟವರಿಗೆ ತಲುಪಿಸಲಾಯಿತು.
ಎಎಸ್ಐ ಸತೀಶ್ ನಾಯಕ್, ಸಿಬ್ಬಂದಿ ಚಂದ್ರಯ್ಯ ಇತರರು ಇದ್ದರು.

