लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರದಿಂದ ವಿತರಣೆ ಮಾಡುವ ಅಕ್ಕಿಯಲ್ಲಿ ಹುಳಗಳು ಪತ್ತೆ….

1 min read

ಸರ್ಕಾರದಿಂದ ವಿತರಣೆ ಮಾಡುವ ಅಕ್ಕಿಯಲ್ಲಿ ಹುಳಗಳು ಪತ್ತೆ

ಸತ್ತಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೊಸೈಟಿಯಲ್ಲಿ ವಿತರಿಸಿರುವ 50ಕ್ಕೂ ಹೆಚ್ಚಿನ ಅಕ್ಕಿ ಮೂಟೆಗಳಲ್ಲಿ ಹುಳುಗಳು ಕಂಡುಬಂದಿರುವ ಆರೋಪ

ಆಲ್ದೂರು: ಸಮೀಪದ ಸತ್ತಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯಲ್ಲಿ ಸರ್ಕಾರದಿಂದ ವಿತರಣೆ ಮಾಡಿರುವ ಅಕ್ಕಿಯಲ್ಲಿ ಹುಳಗಳು ಪತ್ತೆಯಾಗಿದ್ದು,ಅಕ್ಕಿಯನ್ನು ಪಡೆಯಲು ಬಂದ ಸಾರ್ವಜನಿಕರು ಅಸಮಾಧಾನ ಮತ್ತು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಶಾಖೆಯಲ್ಲಿ ಅಂದಾಜು 600ಕ್ಕೂ ಹೆಚ್ಚು ಪಡಿತರ ಚೀಟಿಗಳು ಇದ್ದು ಫಲಾನುಭವಿಗಳಿಗೆ ಒದಗಿಸುವಂತಹ ಅಕ್ಕಿಯ ದಾಸ್ತಾನಿನ 50ಕ್ಕೂ ಹೆಚ್ಚಿನ ಮೂಟೆಗಳಲ್ಲಿ ಹುಳಗಳು ಕಂಡುಬಂದಿದ್ದು,ತೀವ್ರ ಅಸಮಾಧಾನವನ್ನು ಅಕ್ಕಿ ಪಡೆಯಲು ಬಂದ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಫಲಾನುಭವಿಗಳಾದ
ಮಹೇಶ್ ಮತ್ತು ಸ್ವಾಮಿ ಎಂಬುವವರು ಮಾತನಾಡಿ ಅಕ್ಕಿ ಗುಣಮಟ್ಟ ಸರಿ ಇಲ್ಲ ಮತ್ತು ಹಳೆಯ ಸ್ಟಾಕ್ ಇದ್ದಂತೆ ಕಾಣುತ್ತಿದ್ದು, ಒಳ್ಳೆಯ ಅಕ್ಕಿಯೊಂದಿಗೆ ಮಿಶ್ರಣವನ್ನು ಮಾಡಿ ನೀಡುತ್ತಿದ್ದಾರೆ.
ಕೃಷಿ ಪತ್ತಿನ ಸಂಘದವರು ಅಕ್ಕಿ ಬಂದಾಗಲೇ ಅದರ ಗುಣಮಟ್ಟವನ್ನು ಜನಹಿತಕ್ಕಾಗಿ ಮೊದಲು ಪರಿಶೀಲಿಸಿ ಬಳಿಕ ಸರಿ ಇಲ್ಲದಿದ್ದರೆ ಅದನ್ನು ವಾಪಸ್ಸು ಕಳುಹಿಸಬೇಕಿತ್ತು, ಅಕ್ಕಿಯಲ್ಲಿ ಕುಟ್ಟೆ ಹುಳ ಬರುವುದು ಸಾಮಾನ್ಯ ಅದನ್ನು ಬಿಸಿಲಿಗೆ ಇಟ್ಟರೆ ಹುಳ ಅಕ್ಕಿಯಿಂದ ಬೇರ್ಪಟ್ಟು ಹೊರ ಹೋಗುತ್ತದೆ ಆದರೆ ಇದು ಕಪ್ಪು ಬಣ್ಣದ ಅಕ್ಕಿಯ ಬೇರೆ ತರದ ಹುಳವಾಗಿದ್ದು ಇಂತಹ ಕಳಪೆ ಗುಣಮಟ್ಟದ ಅಕ್ಕಿಯನ್ನು ಜನರಿಗೆ ವಿತರಿಸಿ ಅವರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟ ಮತ್ತು ಬೇಜವಾಬ್ದಾರಿತನ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಾದ ಸುಶೀಲ ಎಂಬುವರು ಮತ್ತು ಇನ್ನು ಕೆಲವರು ಅದೇ ಅಕ್ಕಿಯನ್ನು ತೆಗೆದುಕೊಂಡು ಮನೆಗೆ ಹೊರಟಿದ್ದು ಅವರ ಬಳಿ ಪ್ರಶ್ನಿಸಿದಾಗ ನಾವೆಲ್ಲರೂ ಕೂಲಿ ಕಾರ್ಮಿಕರು ಈಗಾಗಲೇ ಅಕ್ಕಿ ತೆಗೆದುಕೊಳ್ಳಲು ಕೆಲಸಗಳಿಗೆ ರಜೆಯನ್ನು ಹಾಕಿದ್ದೇವೆ ನಾಳೆ ಅಥವಾ ಇನ್ನೊಂದು ದಿನ ಉತ್ತಮ ಅಕ್ಕಿ ಬಂದಾಗ ಬಂದು ತೆಗೆದುಕೊಳ್ಳಲು ಪುನಃ ರಜೆಯನ್ನು ಹಾಕಬೇಕು ನಮಗಿರುವ ಆರ್ಥಿಕ ಸಂಕಷ್ಟದಲ್ಲಿ ಹೇಗೆ ತಾನೇ ಪ್ರತಿದಿನ ರಜೆ ಹಾಕಿ ಅಕ್ಕಿ ಪಡೆಯಲು ಬರಲು ಸಾಧ್ಯ ಎಂದು ನೋವನ್ನು ತೋಡಿಕೊಂಡರು.

ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ರಘು, ಪಂಜಾಬ್ ನಿಂದ ಬಂದಂತಹ ಅಕ್ಕಿಯ ದಾಸ್ತಾನು ಇದಾಗಿದ್ದು,ಈಗಾಗಲೇ ಸಮಸ್ಯೆಯ ಕುರಿತು ತಾಲ್ಲೂಕು
ವ್ಯವಸಾಯ ಕೃಷಿ ಉತ್ಪನ್ನ ಸಂಘಕ್ಕೆ ಮಾಹಿತಿಯನ್ನು ತಿಳಿಸಿದ್ದು, ಹುಳ ಇರುವಂತಹ ಅಕ್ಕಿ ಮೂಟೆಗಳನ್ನು ಪ್ರತ್ಯೇಕ ಇರಿಸುವಂತೆ ಸೂಚಿಸಿದ್ದು, ಪರ್ಯಾಯವಾಗಿ ಬೇರೆ ಗುಣಮಟ್ಟದ ಅಕ್ಕಿಯನ್ನು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

ಸತ್ತಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಎಷ್ಟು ಚೀಲಗಳು ಕಳಪೆ ಮತ್ತು ಹುಳಗಳಿಂದ ಇದೆಯೋ ಅದನ್ನು ಪ್ರತ್ಯೇಕ ಇರಿಸುವಂತೆ ತಿಳಿಸಿದ್ದು,ರಾಗಿ ದಾಸ್ತಾನು ಸಂಬಂಧ ಪಟ್ಟ ನ್ಯಾಯ ಬೆಲೆ ಅಂಗಡಿಗೆ ಉಗ್ರಾಣದಿಂದ ಹೋಗಬೇಕಿದ್ದು, ಆಗ ಪರ್ಯಾಯವಾಗಿ ಅಕ್ಕಿ ಮೂಟೆಗಳನ್ನು ಕಳುಹಿಸಿಕೊಡಲಾಗುವುದು ಎಂದು
ಆಹಾರ ನಿರೀಕ್ಷಕರಾದ
ಪ್ರಕಾಶ್ ಎಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.

ಮುಖ್ಯಾಂಶಗಳು
*ಸತ್ತಿಹಳ್ಳಿ ಕೃಷಿ ಪತ್ತಿನ ನ್ಯಾಯಬೆಲೆ ಅಂಗಡಿಯ 50ಕ್ಕೂ ಹೆಚ್ಚಿನ ಅಕ್ಕಿ ಮೂಟೆಗಳಲ್ಲಿ ಹುಳುಗಳು ಪತ್ತೆ
*ಸಾರ್ವಜನಿಕರಿಂದ ತೀವ್ರ ಆಕ್ರೋಶ
*ಅಧಿಕಾರಿಗಳಿಂದ
ಪರ್ಯಾಯ ವ್ಯವಸ್ಥೆಯ ಕ್ರಮದ ಭರವಸೆ

About Author

Leave a Reply

Your email address will not be published. Required fields are marked *

You may have missed