ಮಲ್ಲಂದೂರಿನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಸಭಾಂಗಣದಲ್ಲಿ…..
1 min read
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇಂದು ಮಲ್ಲಂದೂರಿನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್ ಡಿ ಮಂಜುನಾಥ್ ಗೌಡ ಉಪಾಧ್ಯಕ್ಷರಾಗಿ ಟಿಸಿ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು ಚುನಾವಣಾ ಅಧಿಕಾರಿಯಾಗಿ ಚಿಕ್ಕಮಗಳೂರಿನ ಸಹಾಯಕ ಉಪನಂದನಾಧಿಕಾರಿ ಅಧಿಕಾರಿಗಳಾದ ಸಂಧ್ಯಾ ರವರು ಚುನಾವಣಾ ಅಧಿಕಾರಿ ಗಳಾಗಿದ್ದರು.
ನಿರ್ದೇಶಕರುಗಳಾದ ರಘುನಾಥ್ ಸುಜಾತ ಧರ್ಮರಾಜ್ ಇಂಪಾ ರಮೇಶ್ ಆಶ್ರಯ ಎಂಇ ಮಂಜುನಾಥ್ ಪ್ರಥಮ್ ಪ್ರಶಾಂತ್ ಎಂಪಿ ಶೇಖರ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ್ ಸ್ಥಳೀಯ ಮುಖಂಡರಾದ ಹೊಲದ ಗದ್ದೆ ಗಿರೀಶ್ ಕೆರೆ ಮಕ್ಕಿ ಮಹೇಶ್ ಎನ್ ಎಂ ಮಂಜುನಾಥ್ ಮಹೇಂದ್ರ ಬೈಗೂರು ನಾಗೇಶ್ ಸಿಸಿ ಪುಟ್ಟೇಗೌಡ ನಾರಾಯಣಗೌಡ ಅಹಮದ್ ಶಶಿಧರ್ ಗಣೇಶ್ ಮುಂತಾದವರು ಇದ್ದರು
ಈ ಸಂದರ್ಭದಲ್ಲಿಸ್ಥಳೀಯ ಮುಖಂಡರಾದ ಹೊಲದಗದ್ದೆ ಗಿರೀಶ್ ಮಾತನಾಡಿ ಮಲ್ಲಂದೂರು ಪ್ರಾಥಮಿಕ ಕೃಷಿ ಪತ್ತಿನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನೇಶ್ ರವರು ಕಳೆದ ನಾಲ್ಕು ಐದು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಸ್ಥಳೀಯ ರೈತರಿಗೆ ಬೆಳಗಾರರಿಗೆ ಬ್ಯಾಂಕ್ ಸಾಲ ಮರುಪಾವತಿ ರಸಗೊಬ್ಬರ ವಿತರಣೆ ಪಡಿತರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ ಇಂದು ಅಧ್ಯಕ್ಷರಾದ ಮಂಜುನಾಥ್ ರವರು ಮತ್ತು ಲೋಕೇಶ್ ರವರು ಎಲ್ಲರ ವಿಶ್ವಾಸದಿಂದ ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು

