ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಆರೋಪ: ಗಡಿಪಾರಿಗೆ ಒತ್ತಾಯ…..
1 min read
ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಆರೋಪ: ಗಡಿಪಾರಿಗೆ ಒತ್ತಾಯ
ಚಿಕ್ಕಮಗಳೂರು : ಯತೀಶ್ ಎಂಬ ವ್ಯಕ್ತಿ ಪದೇ ಪದೇ ದಲಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡುತ್ತಿದ್ದು, ಆ ವ್ಯಕ್ತಿಯ ಪಿಸ್ತೂಲ್ ಪರವಾನಗಿ ರದ್ದುಪಡಿಸಿ, ಗುಂಡಾಕಾಯ್ದೆ ದಾಖಲಿಸಿ, ಗಡಿಪಾರು ಮಾಡಬೇಕೆಂದು ಜಿಲ್ಲಾ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಹೊನ್ನೇಶ್ ಆಗ್ರಹಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಲಾಡ್ಜ್ ರೂಂ ವಿಚಾರಕ್ಕೆ ಯತೀಶಗೌಡ ಇಂದಾವರ ಮತ್ತು ಸಂದೀಪ್ ಉಂಡೇದಾಸರಹಳ್ಳಿ ಇವರುಗಳ ನಡುವೆ ಫೋನ್ಕರೆ ಮೂಲಕ ಮಾತುಕತೆ ನಡದಿತ್ತು. ಆದ ಕಾರಣ ಯತೀಶ್ ಗೌಡ ಎಂಬಾತ ಅದೇ ದಿನ ಸುಮಾರು 8:00 ಗಂಟೆ ಸಮಯಕ್ಕೆ ರಾಮನಹಳ್ಳಿಯ ಸಂದೀಪ್ ರವರ ನಡೆಸುತ್ತಿರುವ ಒಲಂಪಿಯಾ ಹೋಟೆಲ್ ಹತ್ತಿರ ಯತೀಶ್ ಬಂದು ಅವಾಚ್ಯ ಶಬ್ದದಿಂದ ಬೈದು ಜಾನಿ ನಿಂಧನೆ ಮಾಡಿ, ಪುಸ್ತೂಲ್ (ಗನ್) ತೆಗೆದು ಸಂದೀಪ್ರವರ ಹಣೆಗೆ ಇಟ್ಟು ಜೀವಬೆದರಿಕೆ ಹಾಇದ್ದಾರೆ ಎಂದು ಆರೋಪಿಸಿದರು.
ಇದೇ ವ್ಯಕ್ತಿ ಕಳೆದ ವರ್ಷ ರಂದು ಮಲ್ಲಂದೂರು ಪೊಲೀಸ್ ಠಾಣೆ, ವ್ಯಾಪ್ತಿಯ ಉಳುವಾಗಿಲು ಗ್ರಾಮದಲ್ಲಿದಲ್ಲಿಯೂ ಕೂಡಾ ದಲಿತರ ಮೇಲೆ ಹಲ್ಲೆ ಮಾಡಿ ಪಿಸ್ತೂಲ್ ತೋರಿಸಿರುತ್ತಾನೆ. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟಂತೆ ಜಿಲ್ಲಾ ಯುವ ಒಕ್ಕಲಿಗರ ಸಂಘ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ದಲಿತರು ಅಟ್ರಾಸಿಟಿ ಕೇಸ್ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಅಟ್ರಾಸಿಟಿ ಕೇಸು ಮಾಡಿರುವವರ ವಿರುದ್ಧ ದೂರಿರುತ್ತಾರೆ. ಗೋಷ್ಟಿಯಲ್ಲಿ ಸಂತ್ರಸ್ತ ಸಂದೀಪ್,ಮುಖಂಡರಾದ ದಿವಾಕರ್ ಹುಣೀಸೇಮಕ್ಕಿ ಲಕ್ಷ್ಮಣ್ ಇದ್ದರು.

