लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಲಿತರ ಓಟಿಗಾಗಿ ಭೀಮೋತ್ಸವ

ಚಿಕ್ಕಮಗಳೂರು : ದಲಿತರ ಓಟಿಗಾಗಿ ಭೀಮೋತ್ಸವದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮೊದಲು ತಮ್ಮ ಪಕ್ಷದ ಮುಖಂಡರು ಮತ್ತು ಆರ್.ಎಸ್.ಎಸ್ ಸಂಘಟನೆಯವರಿಗೆ ಅಂಬೇಡ್ಕರ್ ತತ್ವ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸಲಿ ಎಂದು ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಅಧ್ಯಕ್ಷ ಮಲ್ಲೇಶ್ ಸ್ವಾಮಿ ಕಿವಿ ಮಾತು ಹೇಳಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದುತ್ವ ಜಪಿಸುತ್ತಿದ್ದ ಸಿ.ಟಿ ರವಿಯವರಿಗೆ ಸೋಲಿನ ಬಳಿಕ ದಲಿತತ್ವ ನೆನಪಾಗಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಮಾಜಿ ಶಾಸಕ ಸಿಟಿ ರವಿಯವರು ದಲಿತ ಸಂಘಟನೆಗಳ ನಾಯಕರನ್ನು ಅರ್ಬನ್ ನಕ್ಸಲರು ಎಂದು ಕರೆದು ಅಪಮಾನ ಮಾಡಿದ್ದು ಮರೆಯುವ ಮುನ್ನವೇ ಮತ್ತೆ ದಲಿತ ಸಂಘಟನೆಗಳ ನಾಯಕರನ್ನು ಭೀಮೋತ್ಸವ ಕಾರ್ಯಕ್ರಮಕ್ಕೆ ತಮ್ಮ ಮನೆಗೆ ಆಗಮಿಸುವಂತೆ ಕಾಡಿ ಬೇಡಿರುವುದನ್ನು ಗಮನಿಸಿದರೆ ದಲಿತರ ಶಕ್ತಿ ಏನು ಎಂಬುದು ಸೋಲಿನ ಬಳಿಕ ಅರ್ಥವಾದಂತಿದೆ ಎಂದು ಲೇವಡಿ ಮಾಡಿದರು.

ಸಂಘಪರಿವಾರದ ಸಂಸದ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸಲು ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ಎಂದಾಗ ಇದೇ ಸಿಟಿ ರವಿಯವರು ಈ ದೇಶದ ಸಂವಿಧಾನ ಬರೆದವರು ಅಂಬೇಡ್ಕರ್ ಅವರು. ಆಗ ಬಿಜೆಪಿ, ಸಂಘಪರಿವಾರ ಪ್ರಬಲವಾಗಿರಲಿಲ್ಲ. ಇದ್ದದ್ದು ಕಾಂಗ್ರೆಸ್ ಮಾತ್ರ. ಅದನ್ನು ಒಪ್ಪಿಕೊಂಡವರು ಕಾಂಗ್ರೆಸ್ ನವರು ಎಂದು ಹೇಳುವ ಮೂಲಕ ತಮ್ಮ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದರು. ಇದೀಗ ಅಂಬೇಡ್ಕರ್ – ನೆನಪಾಗಿರುವುದು ದುರಂತ ಎಂದರು.

ತಮ್ಮ ಮನೆಯಲ್ಲಿ ಆಚರಣೆ ಮಾಡಿದ ಭೀಮೋತ್ಸವದಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವ ಬದಲು ಅಲ್ಲೂ ಪಾಕಿಸ್ತಾನ, ಹಿಂದುತ್ವ ಎಂದು ಶ್ರೀಕಾಂತ್ ಶೆಟ್ಟಿಯಿಂದ ಭಾಷಣ ಮಾಡಿಸಿರುವುದನ್ನು ಗಮನಿಸಿದರೆ ನಿಮ್ಮ ಕೊಳಕು ಮನಸ್ಥಿತಿ ಜನತೆಗೆ ಅರ್ಥವಾಗಲಿದೆ ಎಂದು ಹೇಳಿದರು.

ಚಲವಾದಿ ನಾರಾಯಣ ಸ್ವಾಮಿಯವರು ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ಮೊದಲು ತಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳಬೇಕಿದೆ.

ಅಧಿಕಾರದ ಆಸೆಗೆ ಕಾಂಗ್ರೆಸ್ ಬಿಟ್ಟು ದಲಿತ ವಿರೋಧಿ ಮನಸ್ಥಿತಿಯ ಸಂಘ ಪರಿವಾರದ ಜೊತೆಗೆ ಸೇರಿ ಹಿಂದುತ್ವ ಎಂದು ದಲಿತರಿಗೆ ಪಾಠ ಮಾಡಲು ಹೊರಟಿದ್ದಾರೆ. ಆದರೆ ಇನ್ನೂ ಕೂಡ ಸಂಘ ಪರಿವಾರದ ಕೇಂದ್ರ ಕಚೇರಿಯ ಬಾಗಿಲ ಹೊರಗೇ ನಿಲ್ಲಬೇಕಿದೆ ಎಂಬ ಸತ್ಯ ಅವರಿಗೆ ಅರ್ಥವಾದರೆ ಸಾಕು ಎಂದು ಕೆಣಕಿದರು.

ಜಿಲ್ಲಾ ದೌರ್ಜನ್ಯ. ವಿರೊದಿ ಸಮಿತಿ ಸದಸ್ಯ ಹುಣೀಸೆಮಕ್ಕಿ ಲಕ್ಷ್ಮಣ್ ಮಾತನಾಡಿ ಸಿ.ಟಿ. ರವಿ ಅವರು ನಾಲ್ಕು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಚಿವರಾಗಿದ್ದ ಸುದೀರ್ಘ ಅವಧಿಯಲ್ಲಿ ಎಲ್ಲೂ ಭೀಮೋತ್ಸವ ಆಚರಿಸದೆ, ಈಗ ಇದ್ದಕ್ಕಿದ್ದಂತೆ ತಮ್ಮ ನಿವಾಸದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿರುವುದರ ಹಿಂದಿನ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ.

ಸಿ.ಟಿ. ರವಿ ಅವರ ಸ್ವಂತ ಊರಾದ ಚಿಕ್ಕಮಾಗರವಳ್ಳಿಯಲ್ಲಿ ನಡೆಯುವ ಸುಗ್ಗಿ ಹಬ್ಬದ ಸಂದರ್ಭದಲ್ಲಿ ಅಲ್ಲಿನ ರಾಜ್ಯದೇವತೆ ದೇವಸ್ಥಾನದಲ್ಲಿ ಇಂದಿಗೂ ದಲಿತರಿಗೆ ಪ್ರಸಾದ ವಿತರಣೆ ಮಾಡದೆ ತಾರತಮ್ಯ ಎಸಗಲಾಗುತ್ತಿದೆ ಮೊದಲು ಅಲ್ಲಿನ ತಾರತಮ್ಯ ಸರಿಪಡಿಸಲಿ ಎಂದು ಸವಾಲೆಸೆದರು.

ಕೇವಲ ತಮ್ಮ ಮನೆಯಲ್ಲಿ ಭೀಮೋತ್ಸವವನ್ನು ಆಚ-ರಿಸುವುದನ್ನು ಬಿಟ್ಟು, ಸಮಾಜದಲ್ಲಿ ಎಲ್ಲೆಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆಯೋ ಮತ್ತು ಯಾವ ಜನ ಸಮುದಾಯಗಳು ದಲಿತರನ್ನು ಇಂದಿಗೂ ದೂರ ಇಟ್ಟಿವೆಯೋ ಅಂತಹ ಜಾಗಗಳಿಗೆ ಖುದ್ದಾಗಿ ತೆರಳಿ ಅಂಬೇಡ್ಕರ್ ಜಯಂತಿಯನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆ ಮೂಲಕ ತಾರತಮ್ಯ ಎಸಗುವ ಜನರ ಮನಪರಿವರ್ತನೆ ಮಾಡಲು ಮುಂದಾಗಬೇಕು ಎಂದು ಸಿ.ಟಿ. ರವಿ ಹೇಳಿದರು. ಲೂಟಿ ಮಾಡುವುದೇ ಸಾಧನಾಸಮಾವೇಶದ ಉದ್ದೇಶ ಎಂದು ಸಿ.ಟಿ ರವಿ ಟೀಕಿಸಿದ್ದಾರೆ ಲೂಟಿ ಎಂಬ ಹೆಸರು ಯಾರಿಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಗೋಷ್ಟಿಯಲ್ಲಿ ಮುಖಂಡರಾದ ಲಕ್ಯಾಸಂತೋಷ್,ದಿವಾಕರ್ ಇದ್ದರು.

About Author

Leave a Reply

Your email address will not be published. Required fields are marked *

You may have missed