लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೀನ್ಸ್ ನಲ್ಲಿ ಸೆರಗು ಎಲ್ಲಿಂದ ಸಿಗುತ್ತದೆ ? ಆದರೆ ತಾಯಿಯ ಸೆರಗಿನಲ್ಲಿ ಏನೆಲ್ಲಾ ಅಡಗಿದೆ…

1 min read

ಅವಿನ್ ಟಿವಿ ಸುದ್ದಿಜಾಲ ✍️: ಜೀನ್ಸ್ ನಲ್ಲಿ ಸೆರಗು ಎಲ್ಲಿಂದ ಸಿಗುತ್ತದೆ ? ಆದರೆ ತಾಯಿಯ ಸೆರಗಿನಲ್ಲಿ ಏನೆಲ್ಲಾ ಅಡಗಿದೆ, ಬಾಲ್ಯದಲ್ಲಿ ಅಮ್ಮನ ಸೆರಗಿನ ಹಿಂದೆ ಅವಿಚಿಕೊಂಡು ಕುಳಿತು ಓಡಾಡಿದ ಅದೆಷ್ಟೋ ನೆನಪುಗಳ ಅನಾವರಣ ಈ ಪ್ರಬಂಧ…

ಇತ್ತೀಚೆಗೆ ಸಿನಿಮಾವೊಂದರಲ್ಲಿ ಸೆರಗನ್ನು ಕುರಿತು ಸರ್ಸೆ ಸರ್ಸೆ ಎಂಬ ಕೀಳು ಅಭಿರುಚಿಯ ಹಾಡಿಗೆ ಚಲನಚಿತ್ರರಂಗದ ಪ್ರಸಿದ್ಧ ಮೇದಾವಿ ನಿರ್ದೇಶಕರೊಬ್ಬರು ನಾಡಿನಾದ್ಯಂತ ವ್ಯಾಪಕವಾದ ಟೀಕೆಗೆ ಒಳಗಾಗಿ ಚಿತ್ರೀಕರಿಸಿದ ಆ ಹಾಡನ್ನು ಕೈಬಿಡಬೇಕಾಯಿತು, ಆದರೆ ಒಬ್ಬ ವಿದ್ಯಾರ್ಥಿ ಅದೇ ಸೆರಗನ್ನು ಕುರಿತು ಮಹಾಪ್ರಬಂಧ ಬರೆಯಿರಿ ಎಂದು ಶಿಕ್ಷಕರು ಕೇಳಿದ್ದಕ್ಕೆ ಅವನು ತನ್ನ ವಯಸ್ಸಿಗೂ ಮೀರಿ ಸೀರೆಯ ಸೆರಗಿನ ಸೊಬಗನ್ನು ಅದೆಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾನೆ ಎಂದರೆ ಆಶ್ಚರ್ಯವಾಗುತ್ತದೆ, ಈ ವಿದ್ಯಾರ್ಥಿಯ ಮುಂದೆ ಆ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕುಬ್ಜನಾಗಿ ಕುರೂಪಿಯಂತೆ ಕಾಣುತ್ತಾನೆ, ಚಲನಚಿತ್ರ ನಿರ್ದೇಶಕನ ಸೆರಗಿನ ಹಾಡಿನಲ್ಲಿ ಕಾಮದ ವಾಸನೆ ಇದ್ದರೆ, ವಿದ್ಯಾರ್ಥಿಯ ಈ ಪ್ರಬಂಧದ ಸೆರಗಿನಲ್ಲಿ ಮಣ್ಣಿನ ವಾಸನೆ ಇದೆ.

ಈ ಪ್ರಬಂಧ ಅನಾಮಿಕ ವಿದ್ಯಾರ್ಥಿಯೊಬ್ಬನ ಚೈತನ್ಯಯುಕ್ತ ಬರಹ.

ವಿದ್ಯಾರ್ಥಿಗಳೆಂದರೆ ಜಗದ ಜೀವಾಳಗಳು, ನಾಗಾಲೋಟದಿಂದ ಓಡುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಇಂದಿನ ವಿದ್ಯಾರ್ಥಿಗಳು ಬದುಕುಳಿಯಬೇಕಾದರೆ ಪರೀಕ್ಷೆಗಳನ್ನು ಪ್ರಬಂಧಗಳನ್ನು ಸಮರ್ಥವಾಗಿ ಎದುರಿಸಲೇಬೇಕು. ಹೀಗೆ ಪರೀಕ್ಷೆಗಳನ್ನು ಎದುರಿಸುವಾಗ ಓದಿ ತಿಳಿಯುವುದೇ ಬೇರೆ , ಅನುಭವದಿಂದ ಧಕ್ಕಿಸಿಕೊಳ್ಳುವುದೇ ಬೇರೆ, ಓದಿ ಕಲಿ ನೋಡಿ ತಿಳಿ ಎಂಬು ಈ ಎರಡು ಸಂಗತಿಗಳು ಬದುಕಿನ ಪ್ರಧಾನವಾದ ಅಂಶಗಳು.

ಉಡುಗೆ ತೊಡುಗೆ ರುಚಿ ಅಭಿರುಚಿಗಳು, ಆಹಾರ ವಿಹಾರ, ಆಟ ಪಾಠ, ಸಂಸ್ಕೃತಿ ಸಲ್ಲಾಪಗಳೆಲ್ಲ ಬದಲಾದ ಈ ದಿನಮಾನಗಳಲ್ಲಿ ಮಕ್ಕಳ ಮನೋಭಾವವೇ ಈಗ ವಿಭಿನ್ನವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ಬರೆದ ಎರಡು ಪ್ರಬಂಧಗಳು ಇತ್ತೀಚೆಗೆ ವ್ಯಾಪಕವಾಗಿ ಹರಿದಾಡುತ್ತಿವೆ.

ಒಬ್ಬ ವಿದ್ಯಾರ್ಥಿಗೆ ಹಸುವಿನ ಮೇಲೆ ಪ್ರಬಂಧವೊಂದನ್ನು ಬರೆಯಲು ಕೊಟ್ಟರೆ , ಆ ವಿದ್ಯಾರ್ಥಿ ಹಸುವಿನ ಚಿತ್ರವನ್ನು ಬರೆದು ಆ ಹಸುವಿನ ಚಿತ್ರದ ಮೇಲೆ ಪ್ರಬಂಧ ಎಂದು ಬರೆದು ಹತ್ತಕ್ಕೆ ಸೊನ್ನೆ ಅಂಕಗಳನ್ನು ಪಡೆದು *”ದನ ಕಾಯಲು ಹೋಗು”* ಎಂಬ ಟಿಪ್ಪಣಿಯ ಮುದ್ರೆಯನ್ನು ತನ್ನ ಉತ್ತರ ಪತ್ರಿಕೆಯ ಮೇಲೆ ಶಿಕ್ಷಕರಿಂದ ಪಡೆದಿದ್ದಾನೆ, ಇದು ಅವನ ಮುಗ್ಧತೆಯು ಅಥವಾ ದಡ್ಡತನವು ಗೊತ್ತಾಗುತ್ತಿಲ್ಲ , ಈ ದಡ್ಡತನದ ಹಿಂದೆ ಶಿಕ್ಷಕರ, ಪೋಷಕರ ಪಾಲು ಇದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.

ಇನ್ನೊಂದೆಡೆ , ಮತ್ತೊಬ್ಬ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಸೆರಗನ್ನು ಕುರಿತು ಪ್ರಬಂಧ ಬರೆಯಲು ತಿಳಿಸಿದಾಗ ಆ ವಿದ್ಯಾರ್ಥಿ ಅವ್ವನ ಸೆರಗನ್ನು ಕುರಿತು ಬರೆದ ಈ ಕೆಳಕಂಡ ಪ್ರಬಂಧವು, ಆಧುನಿಕ ಕಾಲದ ಜೀನ್ಸ್ ಉಡುಗೆಯ ತಾಯಂದಿರಿಗೆ ಚಾಟಿ ಏಟು ಕೊಟ್ಟಂತಿದೆ ಹಾಗೂ ಅವ್ವನ ಸೆರಗಿನ ಮರೆಯಲಿ ಆಡಿ ಬೆಳೆದ ತುಂಟಾಟಗಳನ್ನೆಲ್ಲ ನೆನಪಿಸುವಂತಿದೆ.

ಇಂದಿನ ಆಧುನಿಕ ಕಾಲದ ಜೀನ್ಸ್ ಉಡುಗೆಯ ತಾಯಂದಿರಿಗೆಲ್ಲ ಈ ಪುಟ್ಟ ವಿದ್ಯಾರ್ಥಿ ಎಷ್ಟೊಂದು ಸುಂದರವಾಗಿ ಪಾಠ ಮಾಡಿದ್ದಾನೆ, ಒಮ್ಮೆ ಗಂಭೀರವಾಗಿ ಓದಿ ನೋಡಿ, ಹೆಸರು ಶಾಲೆ ಊರು ಗೊತ್ತಿಲ್ಲದ ಈ ಅನಾಮಿಕ ವಿದ್ಯಾರ್ಥಿಗೆ ಮನದಲ್ಲಿ ಒಂದು ಬೇಶ್ ಹೇಳಿ.

ಭಾರತದ ನಾರಿಯರು ನೂರಕ್ಕೂ ಹೆಚ್ಚು ರೀತಿಯಲ್ಲಿ ಭಿನ್ನವಾಗಿ ಸೀರೆಗಳನ್ನು ಉಡುತ್ತಾರೆ, ಒಂದೊಂದು ಉಡುಗೆಯ ಬಗೆಗೂ ಬೇರೆ ಬೇರೆ ಹೆಸರಿದೆ, ಹಾಗೆ ಆ ಸೀರೆಯ ಸೆರಗು ನೂರಕ್ಕೂ ಹೆಚ್ಚು ರೀತಿಯ ಉಪಯೋಗವಾಗುತ್ತದೆ,ಈ ಕಾರಣಕ್ಕೆ ಸೀರೆಗೆ, ಸೀರೆಯ ಸೆರಗಿಗೆ ವಿಶಿಷ್ಟ ಮಹತ್ವವಿದೆ.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಹರಿದಾಡುತ್ತಿದ್ದ ಈ ಎರಡು ಪ್ರಬಂಧಗಳ ಬಗ್ಗೆ ಒಂದು ಕಿರು ಟಿಪ್ಪಣಿಯೊಂದಿಗೆ, ಹೆಸರಿಲ್ಲದ, ವಿಳಾಸವಿಲ್ಲದ ಅನಾಮಿಕ ವಿದ್ಯಾರ್ಥಿ ಒಬ್ಬರು ಬರೆದ ಈ ಕೆಳಕಂಡ ಪ್ರಬಂಧವನ್ನು ಯಥಾವತ್ತಾಗಿ ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ.
••••••••••••••👇

ಜೀನ್ಸ್‌ನಲ್ಲಿ ‘ಸೆರಗು’ ಎಲ್ಲಿಂದ ಸಿಗುತ್ತದೆ 🤔

ಶಾಲೆಯಲ್ಲಿ ಶಿಕ್ಷಕರು‘ತಾಯಿಯ ಸೆರಗು’ ಕುರಿತು ಪ್ರಬಂಧ ಬರೆಯಿರಿ..!ಎಂದು ಹೇಳಿದರು.ಆಮೇಲೆ ಒಬ್ಬ ವಿದ್ಯಾರ್ಥಿ ತಾಯಿಯ ಸೆರಗು ಬಗ್ಗೆ ಎಷ್ಟು ಸುಂದರವಾಗಿ ಬರೆದಿದ್ದಾನೆ ನೋಡಿ…ಪೂರ್ತಿ ಓದಿದರೆ ಮನಸ್ಸು ತುಂಬಿ ಬರುತ್ತದೆ…

ಆದರಣೀಯ ಗುರುಗಳೇ,

ತಾಯಿಯ ಸೆರಗು ತಾಯಿಗೆ ಗೌರವಯುತವಾದ ರೂಪವನ್ನು ನೀಡುತ್ತಿತ್ತು.

ತಾಯಿಯ ಸೆರಗು ಅಡಿಗೆಯಲ್ಲಿರುವ ಬಿಸಿ ಪಾತ್ರೆಗಳನ್ನು ಎತ್ತಲು ಉಪಯೋಗವಾಗುತ್ತಿತ್ತು.

ತಾಯಿಯ ಸೆರಗು ಮಕ್ಕಳ ಬೆವರು ಮತ್ತು ಕಣ್ಣೀರನ್ನು ಒರೆಸಲು, ಮಸಿಯಾದ ಕಿವಿ ಮತ್ತು ಮುಖವನ್ನು ತೊಳೆಯಲು ಬಳಸಲಾಗುತ್ತಿತ್ತು.

ಊಟ ಮಾಡಿದ ನಂತರ ತಾಯಿಯ ಸೆರಗಿನಲ್ಲಿ ಬಾಯಿ ಒರೆಸಿಕೊಳ್ಳುವುದರಲ್ಲಿ ಮಕ್ಕಳಿಗೆ ಒಂದು ವಿಶೇಷ ಸಂತೋಷ ಇರುತ್ತಿತ್ತು.

ಕೆಲವೊಮ್ಮೆ ಕಣ್ಣಿಗೆ ಏನಾದರೂ ಬಿದ್ದರೆ, ತಾಯಿ ತನ್ನ ಸೆರಗಿನ ತುದಿಯನ್ನು ಗುಂಡಾಗಿ ಮಾಡಿ, ಉಸಿರಿನಿಂದ ಬಿಸಿ ಮಾಡಿ ಕಣ್ಣಿನ ಮೇಲೆ ಇಡುತ್ತಿದ್ದರು — ಆಗ ನೋವು ತಾನೇ ಕಡಿಮೆಯಾಗುತ್ತಿತ್ತು.

ತಾಯಿಯ ಮಡಿಲಲ್ಲಿ ಮಲಗಿದ ಮಕ್ಕಳಿಗೆ ತಾಯಿಯ ಮಡಿಲೇ ಹಾಸಿಗೆ, ತಾಯಿಯ ಸೆರಗು ಹೊದಿಕೆಯಾಗುತ್ತಿತ್ತು.

ಮನೆಯಿಗೆ ಅಪರಿಚಿತರು ಬಂದಾಗ, ಮಗು ತಾಯಿಯ ಸೆರಗಿನ ಹಿಂದೆ ಅಡಗಿಕೊಳ್ಳುತ್ತಿತ್ತು.

ಹಾಗೆಯೇ, ಮಗು ನಾಚಿಕೆಪಟ್ಟಾಗ ತನ್ನ ಮುಖವನ್ನು ತಾಯಿಯ ಸೆರಗಿನಿಂದ ಮುಚ್ಚಿಕೊಳ್ಳುತ್ತಿತ್ತು.

ಮಗು ಹೊರಗೆ ಹೋಗಬೇಕಾದಾಗ ತಾಯಿಯ ಸೆರಗನ್ನು ಹಿಡಿದುಕೊಂಡೇ ಹೋಗುತ್ತಿತ್ತು, ಆ ಸೆರಗು ಅವನಿಗೆ ದಾರಿದೀಪವಾಗುತ್ತಿತ್ತು.

ಮಗು ತಾಯಿಯ ಸೆರಗನ್ನು ಹಿಡಿದಿರುವವರೆಗೆ ಇಡೀ ಜಗತ್ತೇ ತನ್ನ ಕೈಯಲ್ಲಿದೆ ಎಂಬ ಭಾವನೆ ಇರುತ್ತಿತ್ತು.

ಚಳಿಗಾಲದಲ್ಲಿ ತಾಯಿಯ ಸೆರಗಿನಿಂದ ಮಗು ಚಳಿಯಿಂದ ರಕ್ಷಿಸಲು ಎಲ್ಲಾ ಕಡೆಗಳಿಂದ ಹೊದಿಸುತ್ತಿದ್ದರು.

ಮತ್ತೆ…

ಭಾರಿ ಮಳೆ ಬಂದಾಗ ತಾಯಿಯ ಸೆರಗು ಛತ್ರಿಯಂತೆ ಮುಖವನ್ನು ಮುಚ್ಚುತ್ತಿತ್ತು.

ತಾಯಿಯ ಸೆರಗು ಕೈ ಒರೆಸುವ ಟವೆಲ್‌ನ ಕೆಲಸವೂ ಮಾಡುತ್ತಿತ್ತು.

ಮರದಿಂದ ಬಿದ್ದ ನೇರಳೆ ಹಣ್ಣುಗಳು ಮತ್ತು ಸುಗಂಧ ಹೂಗಳನ್ನು ಕಲೆಹಾಕಿ ತರಲು ತಾಯಿಯ ಸೆರಗು ಉಪಯೋಗವಾಗುತ್ತಿತ್ತು.

ಕೆಲವೊಮ್ಮೆ…

ಧಾನ್ಯ, ದಾನ ಅಥವಾ ಪ್ರಸಾದ ಸಂಗ್ರಹಿಸಲು ತಾಯಿಯ ಸೆರಗು ಬಳಸಲಾಗುತ್ತಿತ್ತು.

ಮನೆಯಲ್ಲಿದ್ದ ವಸ್ತುಗಳ ಧೂಳನ್ನು ತೂಗಲು ಕೂಡ ತಾಯಿಯ ಸೆರಗು ಸಹಾಯ ಮಾಡುತ್ತಿತ್ತು.

ಕೆಲವೊಮ್ಮೆ ಏನಾದರೂ ಕಳೆದುಹೋದರೆ, ತಾಯಿಯ ಸೆರಗಿನಲ್ಲಿ ಗಂಟು ಹಾಕುತ್ತಿದ್ದೆವು. ಆಗ ಅದು ಸಿಗುತ್ತದೆ ಎಂಬ ನಂಬಿಕೆ ಬರುತ್ತಿತ್ತು — ಮತ್ತು ನಿಜವಾಗಿಯೂ ಸಿಗುತ್ತಿತ್ತು.

ತಾಯಿಯ ಸೆರಗಿನ ಗಂಟು ಒಂದು ಚಲಿಸುವ ಬ್ಯಾಂಕ್ ಅಥವಾ ಲಾಕರ್‌ನಂತಿತ್ತು. ಅದೃಷ್ಟವಿದ್ದರೆ ಕೆಲವೊಮ್ಮೆ ಅದರಲ್ಲಿ ಹಣವೂ ಸಿಗುತ್ತಿತ್ತು.

ತಾಯಿಯ ಸೆರಗು ಒಂದು ಮಾಯಾಮಯ ಅನುಭವ. ಇಂದಿನ ಪೀಳಿಗೆ ಅದನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರದು.

ಈಗ ಜೀನ್ಸ್ ಧರಿಸುವ ತಾಯಿಗೆಸೆರಗು ಎಲ್ಲಿಂದ ಸಿಗುತ್ತದೆ…?

ನಮಗೆ ಸೀರೆ ತೊಟ್ಟ ತಾಯಿಯ ಸೆರಗಿನ ಅನುಭವ ನೀಡಿದ ಎಲ್ಲಾ ತಾಯಂದಿರಿಗೂ ಸಮರ್ಪಣೆ..
•••••••••••••••ಸಂಗ್ರಹ
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed