ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ….
1 min read
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ
ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು
ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಭಾರೀ ಗಾಳಿ, ಸಿಡಿಲು ಮತ್ತು ಗುಡುಗಿನ ನೊಂದಿಗೆ ಧಾರಾಕಾರ ಮಳೆ ಸುರಿದಿದೆ.
ಕಳೆದ ಕೆಲವು ದಿನಗಳಿಂದ ಬಿಸಿಲಿ ತಾಪಕ್ಕೆ ಹೈರಾಣಗಿದ್ದ ಜನತೆ ಕಳೆದ ಹಲವು ದಿನಗಳಿಂದ ಮಲೆನಾಡಿನ ವಿವಿಧ ಭಾಗಗಳಲ್ಲಿ ಬಿದ್ದ ಸಣ್ಣ ಪ್ರಮಾಣದ ಮಳೆಗೆ ತುಸು ನಿರಾಳರಾಗಿದ್ದರು. ಶನಿವಾರ ಮುಂಜಾನೆಯಿಂದಲೆ ಮಳೆಯ ವಾತಾವರಣ ಸೃಷ್ಟಿಯಾಗುತ್ತು ನಗರದಲ್ಲಿ ಬಿದ್ದ ಹೂಮಳೆಗೆ ಜನಹರ್ಷ ವ್ಯಕ್ತಪಡಿಸಿದ್ದರು.
ಮಧ್ಯಾನದ ನಂತರ ಭಾರೀ ಗಾಳಿ, ಸಿಡಿಲು ಮತ್ತು ಗುಡುಗಿನ ನೊಂದಿಗೆ ಧಾರಾಕಾರ ಮಳೆ ನಿರಂತರವಾಗಿ ಸುರಿಯುತ್ತಿದ್ದು ಮಲೆನಾಡಿನ ಮಳೆಯನ್ನು ನೆನಪಿಸಿದೆ. ಮಲೆನಾಡಲ್ಲಿ ವಾತಾವರಣ ತಂಪಾಗಿದೆ. ಜಿಲ್ಲೆಯ ಮೂಡಿಗೆರೆ, ಆಲ್ಲೂರು, ಬಾಳೆಹೊನ್ನೂರು ಹಾಗೂ ಕಳಸ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಅಲ್ಲಲ್ಲಿ ಮಳೆಯ ರಭಸಕ್ಕೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಡಕುಂಟುಮಾಡಿದ ಘಟನೆಗಳು ನಡೆದಿವೆ.
ನಗರದದಿಂದ ಮೂಡಿಗೆರೆ ಸಂಪರ್ಕಿಸುವ ಕಬ್ಬಿಣಸೇತುವೆ ಕೆಳಗೂರಿನ ಬಳಿ ಗಾಳಿ ಮಳೆಗೆ ಬುಡಸಮೇತ ಮರಗಳು ರಸ್ತೆಗೆ ಉರುಳಿದ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಡಕಾಯಿತು ಮಾಹಿತಿ ಅರಿತ ಅಧಿಕಾರಿಗಳು ಸ್ಥಳೀಯರ ನೆರವು ಪಡೆದು ಮರಗಳನ್ನು ತೆರವುಗೊಳೀಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿಶೇಷವಾಗಿ ಚಾರ್ಮಾಡಿ ತಪ್ಪಲಿನಲ್ಲಿರುವ ಕೊಟ್ಟಿಗೆಹಾರ ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ, ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು. ದಟ್ಟವಾದ ಮಂಜು ಮತ್ತು ಜಿಟಿಜಿಟಿ ಮಳೆಯ ನಡುವೆ ಸಾಗಲು ಸವಾರರು ಹರಸಾಹಸ ಪಟ್ಟರು.
ಕೇವಲ ಗ್ರಾಮೀಣ ಮತ್ತು ಮಲೆನಾಡು ಭಾಗ ಮಾತ್ರವಲ್ಲದೆ ಎಲ್ಲ ಬಾಗದಲ್ಲೂ ಮಳೆ ಬಂದಿದೆ.

