लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಯಾವುದೋ ಒಬ್ಬ ರಾಜಕಾರಣಿಯ ಹುಟ್ಟುಹಬ್ಬದ ಕಾರ್ಯಕ್ರದಲ್ಲಿ “ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ” ಕಾರ್ಯಕ್ರಮ ಇದೆಯಂತೆ!!!

1 min read

‎ಯಾವುದೋ ಒಬ್ಬ ರಾಜಕಾರಣಿಯ ಹುಟ್ಟುಹಬ್ಬದ ಕಾರ್ಯಕ್ರದಲ್ಲಿ “ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ” ಕಾರ್ಯಕ್ರಮ ಇದೆಯಂತೆ!!!
‎
‎* ಈ ರಾಜಕಾರಣಿಗಳಿಂದ ಸನ್ಮಾನ ಮಾಡಿಸಿಕೊಂಡು ಉಪಕೃತರಾಗುವ ಪತ್ರಕರ್ತರು ನಿಜಕ್ಕೂ ವೃತ್ತಿಧರ್ಮ ಪಾಲಿಸುತ್ತಾರೆಯೇ?
‎* ಅಕಸ್ಮಾತ್ ಆ ರಾಜಕಾರಣಿ ಕಡುಭ್ರಷ್ಟನಾಗಿದ್ದು, ಆತನ ಮೇಲೆ ವಿರೋಧಿಗಳು ನೈಜ ಆರೋಪಗಳನ್ನು ಮಾಡಿದಾಗ ಈ #ಸನ್ಮಾನಿತ_ಪತ್ರಕರ್ತರು ಅದನ್ನು ವರದಿ ಮಾಡುತ್ತಾರೆಯೇ?
‎* ಹೀಗೆ ತಮ್ಮನ್ನು ಸನ್ಮಾನ ಮಾಡದ ರಾಜಕಾರಣಿ ಮತ್ತು ಪಕ್ಷಗಳ ಸುದ್ದಿಗಳನ್ನು ಈ ಸನ್ಮಾನಿತ ಪತ್ರಕರ್ತರು ಯಾವ ರೀತಿ ವರದಿ ಮಾಡುತ್ತಾರೆ ಅಥವ ಮಾಡುವುದಿಲ್ಲ?
‎
‎”ಅಯ್ಯೋ, ಬಿಡಿ ಸಾರ್, ಮುಖ್ಯಮಂತ್ರಿಗಳು ತಮ್ಮ ಒಡ್ಡೋಲಗದಲ್ಲಿ ಹತ್ತಾರು ಸಾವಿರ ರೂಪಾಯಿ ಬೆಲೆಯ  ಫಾರಿನ್ ಎಣ್ಣೆಯನ್ನು ಪತ್ರಕರ್ತರಿಗೆ ಕುಡಿಸುವುದಿಲ್ಲವೆ? ರಾಜಕಾರಣಿಗಳ ಪತ್ರಿಕಾಗೋಷ್ಠಿ ನಂತರ ಕೆಲವು ಕಡೆ ಕವರ್ ಕೊಡುವುದಿಲ್ಲವೇ? ಇದೆಲ್ಲಾ ಯಾವ ಮಹಾ?” ಎನ್ನುತ್ತೀರಾ? ನೀವು ಕೇಳುತ್ತಿರುವುದೂ (ಯಾರಾದರೂ ಕೇಳಿದ್ದೇ ಆದಲ್ಲಿ) ಸರಿ ಇದೆ ಮತ್ತು ಅದರಲ್ಲಿ ಸತ್ಯವೂ ಇದೆ.
‎
‎ಪತ್ರಕರ್ತರು ರಾಜಕಾರಣಿಗಳನ್ನು ಖಾಸಗಿಯಾಗಿ ಭೇಟಿ ಆಗುವುದು, ಅವರಿಂದ ಸಹಾಯ ಪಡೆದುಕೊಳ್ಳುವುದು ಸೇರಿದಂತೆ ಅವರ ಖಾಸಗಿ ವ್ಯವಹಾರಗಳು ಅವರವರ ನೈತಿಕತೆ, ಯೋಗ್ಯತೆ, ಅನಿವಾರ್ಯತೆಗೆ ಸಂಬಂಧಿಸಿದ್ದು. ಆದರೆ ಹೀಗೆ ಚಾಲ್ತಿಯಲ್ಲಿರುವ ವೃತ್ತಿಪರ ರಾಜಕಾರಣಿಯೊಬ್ಬ ಸಾರ್ವಜನಿಕವಾಗಿ ಮಾಡುವ ಸಾಮೂಹಿಕ ಸನ್ಮಾನ ಸ್ವೀಕರಿಸುವುದು ನಾಚಿಕೆಗೇಡು, ಅಕ್ಷಮ್ಯ. (ಯೋಗ್ಯ ಮತ್ತು ಪ್ರಾಮಾಣಿಕ ಪತ್ರಕರ್ತರನ್ನು ಗುರುತಿಸಿ ಯಾವುದಾದರೂ ಸಂಘಸಂಸ್ಥೆಯ ಮೂಲಕ ರಾಜಕಾರಣಿಗಳು ಸನ್ಮಾನಿಸಿದರೆ ಅದು ಬೇರೆ ವಿಷಯ. ಅದರಲ್ಲಿ ಪ್ರಾಮಾಣಿಕರನ್ನು ಪ್ರೋತ್ಸಾಹಿಸುವ ಮತ್ತು ಇತರರನ್ನು ಉತ್ತೇಜಿಸುವ ಸಕಾರಣ ಇರುತ್ತದೆ. ಆದರೆ… ಇಲ್ಲಿ?)
‎
‎ಇಂತಹ ಪ್ರಶ್ನೆಗಳನ್ನು ಹಲವಾರು ಕಾರಣಗಳಿಗೆ ನನ್ನಂತಹವರು ಕೇಳಬಾರದು. ಆದರೆ ನಾವು ಇಲ್ಲಿ ಹೇಗಾದರೂ ಸರಿ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂದು ಬಂದಿಲ್ಲ. ಒಂದು ಉತ್ತಮ ವ್ಯವಸ್ಥೆ ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟಬೇಕು ಎಂದು ಬಂದಿರುವ ಕಾರಣ ಈ ಪ್ರಶ್ನೆಗಳನ್ನು ನಾವು ಕೇಳದೆ ಇನ್ಯಾರು ಕೇಳಬೇಕು?
‎
‎ಮತ್ತು, ನಾವಲ್ಲದೆ ಇನ್ಯಾರು ತಾನೇ ಕೇಳುತ್ತಾರೆ?
‎
‎ಇಲ್ಲಿ ಎತ್ತಿರುವ ಪ್ರಶ್ನೆಗಳು ನಿಮಗೂ ಸರಿ ಅನ್ನಿಸಿದರೆ ದಯವಿಟ್ಟು ಕಾಮೆಂಟ್ ಮಾಡಿ ಮತ್ತು ಚರ್ಚಿಸಿ.
‎
‎ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
‎
‎16-05-2026.

About Author

Leave a Reply

Your email address will not be published. Required fields are marked *

You may have missed