लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡಾಂಬೆಯ ಸೇವೆಗೆ ಸಮಯದ ಅವಧಿ ನಿಗದಿತವಾಗಬಾರದು ‎ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಲೋಕೇಶಪ್ಪ….

1 min read

ಕನ್ನಡಾಂಬೆಯ ಸೇವೆಗೆ ಸಮಯದ ಅವಧಿ ನಿಗದಿತವಾಗಬಾರದು
‎ಕ.ಸಾ.ಪ ತಾಲ್ಲೂಕು ಅಧ್ಯಕ್ಷ
ಲೋಕೇಶಪ್ಪ

‎ಕನ್ನಡ ಸಾಹಿತ್ಯ ಪರಿಷತ್ತು 112ನೇ ಸಂಸ್ಥಾಪನ ದಿನಾಚರಣೆ

‎ಆಲ್ದೂರು: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ಆಯೋಜಿಸಿದ್ದ, 112ನೇ ಸಂಸ್ಥಾಪನ ದಿನಾಚರಣೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ.ಸಾ.ಪ ತಾಲ್ಲೂಕು ಅಧ್ಯಕ್ಷ
ಲೋಕೇಶಪ್ಪ, ಕನ್ನಡ ನಾಡು ನುಡಿ ಯೊಂದಿಗೆ ಕನ್ನಡಾಂಬೆಯ ಸೇವೆಗೆ ಸಮಯದ ಅವಧಿ ನಿಗದಿತವಾಗಬಾರದು ಎಂದು ಅಭಿಪ್ರಾಯಪಟ್ಟ ಅವರು ಕ.ಸಾ.ಪ ಬೆಳೆದು ಬಂದ ಹಾದಿ ಮತ್ತು ಆಲ್ದೂರಿನಲ್ಲಿ ಕನ್ನಡ ಭವನದ ಅನಿವಾರ್ಯತೆ ಕುರಿತು ಪ್ರಸ್ತಾಪಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುವೇಶ್, ಸಂಘಟನೆಯನ್ನು ಬಲಪಡಿಸುವುದರೊಂದಿಗೆ
‎ಪರಿಸರ ಕಾಳಜಿ ಉಳ್ಳ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
‎ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ನೂತನವಾಗಿ ತಾಲ್ಲೂಕು ಅಧ್ಯಕ್ಷರಾಗಿ ಪದಗ್ರಹಣ ಹೊಂದಿರುವ ಲೋಕೇಶಪ್ಪ ಅವರನ್ನು ಅಭಿನಂದಿಸಿ, ಸಂಸ್ಥಾಪನ ದಿನದ ಅಂಗವಾಗಿ 1000 ಮಂದಿ ಆಜೀವ ಸದಸ್ಯತ್ವ ನೇಮಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
‎ದೀಪ ಹಚ್ಚಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭುವನೇಶ್ವರಿ ತಾಯಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
‎ಕಸಾಪ ಮಹಿಳಾ ಘಟಕದ ಅಧ್ಯಕ್ಷ ನಿರ್ಮಲ ಲಕ್ಷ್ಮಣಗೌಡ, ಪದಾಧಿಕಾರಿಗಳಾದ ಜಯ ಹೂವೇಗೌಡ, ಹೋಬಳಿ ಘಟಕದ ಕೋಶಾಧ್ಯಕ್ಷ ಸಿದ್ದಾರ್ಥ್, ಡಿಬಿ ಈಶ್ವರ್, ಹರೀಶ್ ಯಲಗುಡಿಗೆ, ತಮನ್ನಾ ಸಾಯಿರಾ, ಅನ್ನಪೂರ್ಣ, ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed