ಮೂಡಿಗೆರೆ ಯ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಚಿನ್ಮಯಿ ಗೆ ಅಭಿನಂದನೆ….
1 min read
ಅಜ್ಜಂಪುರ :ಮೂಡಿಗೆರೆ ಯ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಚಿನ್ಮಯಿ ಗೆ ಅಭಿನಂದನೆ.




ಬಗ್ಗವಳ್ಳಿ ಗ್ರಾಮದ ಚಿನ್ಮಯಿ ಕ್ರಿಯೇಟಿವ್ ಕಾರ್ಕಳ ಪಿಯು ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಿ ರಾಜ್ಯಕ್ಕೆ ಪಿ ಯುಸಿ ವಿಜ್ಞಾನ ವಿಭಾಗ ದಲ್ಲಿ 10ನೇ ರಾಂಕ್ ಪಡೆದಿರುತ್ತಾರೆ. ಇವರು ಬಗ್ಗವಳ್ಳಿ -ಗಿರಿಯಪುರ ಕಿರಣ್ ಹಾಗೂ ಶಿಕ್ಷಕಿ ಜ್ಯೋತಿ ದಂಪತಿಯ ಪುತ್ರಿ ಇವರು ಅಜ್ಜoಪುರ ತಾಲ್ಲೂಕು ಗೆ ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಮ್ಮೆ ತಂದಿರುತ್ತಾರೆ..
ಮುಖ್ಯ ಅತಿಥಿಗಳಾದ ಅಜ್ಜಂಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷರು ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ (ರಿ )ಕಾರ್ಯದರ್ಶಿ ಚನ್ನಾಪುರ ಸಿದ್ದೇಗೌಡ ರವರು ಚಿನ್ಮಯಿ ಗೆ ಸನ್ಮಾನ ಸಲ್ಲಿಸಿ ಮಾತನಾಡುತ್ತಾ ಜೀವನ ದಲ್ಲಿ ಉನ್ನತ ಗುರಿ ಹೊಂದುವುದು ಮುಖ್ಯ ಅದನ್ನು ಸಾದಿಸಲು ಸಮಯ ಪಾಲನೆ ಮತ್ತು ಶಿಸ್ತು ಅತ್ಯಗತ್ಯ. ಹಾಗೂ ಪ್ರತಿಭೆ ಎಲ್ಲರಲ್ಲೂ ಇದೆ ಆದರೆ ಅದನ್ನು ಸಾಬೀತು ಪಡಿಸಲು ಛಲ ಮತ್ತು ಪರಿಶ್ರಮ ಮುಖ್ಯ ಎಂದರು.
ಇವರಿಗೆ ಮೂಡಿಗೆರೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿದರು. ನಂತರ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಈ ಪ್ರತಿಭೆ. ಭರತ ನಾಟ್ಯ ಹಾಗೂ ಸಂಗೀತ ದಲ್ಲೂ ಸಹ ಸೈ ಎನಿಸಿಕೊಂಡಿದ್ದು ಇವರು ಮುಂದಿನ ವಿದ್ಯಾಭ್ಯಾಸ ಬೆಂಗಳೂರು ನಲ್ಲಿ ಇಂಜಿನಿಯರ್ ಮಾಡುವ ಅಭಿಲಾಷೆ ಹೊಂದ್ದಿದರೆಂದು ಹೇಳಿದರು. ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ವಿದ್ಯಾಭ್ಯಾಸ ಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿದರು.
ಪೋಷಕರಾದ ಜ್ಯೋತಿ ರವರು ಮಗಳ ವಿದ್ಯಾಭ್ಯಾಸ ಕ್ಕೆ ಹಾಗೂ ಕಲೆ ಸಾಹಿತ್ಯ ಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿನ್ಮಯಿ ಮೊದಲಿಗೆ ನಮ್ಮ ತಂದೆ ತಾಯಿ ಗೆ ಕೃತಜ್ಞತೆ ಸಲ್ಲಿಸಿದಳು. ನನಗೆ ವಿದ್ಯಾ ಸಂಸ್ಥೆಯ ಶಿಕ್ಷಕರು ಆಡಳಿತ ಮಂಡಳಿ ಯವರು ಸಂಪೂರ್ಣ ಸಹಕಾರ ನೀಡಿದರು ಹಾಗೂ ನಾನು ಎಲ್ಲಾ ವಿಷಯ ದಲ್ಲಿ ಸಂಪೂರ್ಣ ಅಂಕ ಗಳನ್ನು ನಿರೀಕ್ಷಿಸಿದ್ದೆ. ಪ್ರತಿದಿನ ಬೆಳಿಗ್ಗೆ ಜಾಸ್ತಿ ಓದುತ್ತಿದ್ದೆ ಮುಂದೆ ಐ ಎ ಎಸ್ ಮಾಡುವ ಕನಸಿದೆ ಎಂದರು.
ಕಾರ್ಯಕ್ರಮ ದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ಅಧ್ಯಕ್ಷತೆ ವಹಿಸಿ ಹೆಣ್ಣುಮಕ್ಕಳು ಇಂತಹ ಸಾಧನೆ ಮಾಡಿದಾಗ ಜೀವನ ಸಾರ್ಥಕ ವಾಗುತ್ತದೆಂದರೂ.
ಪ್ರತಿಷ್ಠಾನದ ಗೌರವ ಟ್ರಸ್ತಿ ಸಿ ಸಿ ರಾಜಣ್ಣ.. ಬಾಂಧವ್ಯ.ಡಿಂಪಲ್. ಯೋಗಮ್ಮ. .ಪುಟ್ಟಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.

