ಜೀವಕ್ಕೆ *ಕೆಸ* ತಂತು ಕುತ್ತು ಕಡಿದಾಳು ಗ್ರಾಮದ ಸುಬ್ಬಮ್ಮ (65)ಹೇಮಾವತಿ ನದಿಯಲ್ಲಿ ದುರ್ಮರಣ…
1 min read
ಜೀವಕ್ಕೆ *ಕೆಸ* ತಂತು ಕುತ್ತು
ಕಡಿದಾಳು ಗ್ರಾಮದ ಸುಬ್ಬಮ್ಮ (65)ಹೇಮಾವತಿ ನದಿಯಲ್ಲಿ ದುರ್ಮರಣ
ಕೆಸದ ಆಸೆ ಜೀವವನ್ನೇ ಬಲಿ ಪಡೆದ ದಾರುಣ ಘಟನೆ ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.
ಬೆಳಗ್ಗೆ 10 ಘಂಟೆಗೆ ಕೆಸ ತರುವುದಾಗಿ ಹೇಳಿ ಹೋದ ಸುಬ್ಬಮ್ಮ ಸಂಜೆಯಾದರು ಮನೆಗೆ ಬಾರದ ಕಾರಣ ಗಾಬರಿ ಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ..
ಹೇಮಾವತಿ ಹೊಳೆಯಲ್ಲಿ ಶವ ವಾಗಿ ಪತ್ತೆ. ಸ್ಥಳಕ್ಕೆ ಮೂಡಿಗೆರೆ ಪೋಲೀಸರ ಭೇಟಿ. ಪರಿಶೀಲನೆ
ಪ್ರಕರಣ ದಾಖಲು.. ಮರಣೋತ್ತರ ಪರೀಕ್ಷೆಗೆ ಎಂ ಜಿ ಎಂ ಆಸ್ಪತ್ರೆಗೆ ಶವ ರವಾನೆ
ಸಮಾಜ ಸೇವಕ ಅರೀಫ್ ಬಣಕಲ್ ಅವರ ತಂಡ ಶವ ಹೊರತೆಗೆದಿದ್ದಾರೆ

