ಹಾಂದಿ ಈದ್ ಉಲ್ ಫಿತರ್ ಆಚರಣೆ…
1 min read
ಹಾಂದಿ ಈದ್ ಉಲ್ ಫಿತರ್ ಆಚರಣೆ
ಆಲ್ದೂರು: ಸಮೀಪದ ಹಾಂದಿಯ ಖಿಲಾರಿಯ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು.
ಮಸೀದಿಯ ಖಾತೀಬ್ ಕಯ್ಯುಮ್ ಫೈಝಿ ಹಬ್ಬದ ನಮಾಜ್ ನೇತೃತ್ವ ವಹಿಸಿದ್ದರು.
ರಂಜಾನ್ ಪ್ರಯುಕ್ತ 40 ದಿನಗಳ ಉಪವಾಸವನ್ನು ಕೈಗೊಂಡು ಕೆಡುಕಿನಿಂದ ಪರಿವರ್ತನೆ ಹೊಂದಿ ಒಳಿತನ್ನು
ಬದುಕಿಗೆ ಅಳವಡಿಸಿಕೊಳ್ಳೋಣ ಶಾಂತಿ ಪ್ರೀತಿ ಸಹೋದರತ್ವದಿಂದ ಸರ್ವ ಸಮುದಾಯವನ್ನು ಗೌರವಿಸಿ ಸಹಬಾಳ್ವೆ ನಡೆಸೋಣ ಎಂದು ಹಬ್ಬದ ಸಂದೇಶ ನೀಡಿದರು. ಪ್ರಾರ್ಥನೆ ಬಳಿಕ ಹಬ್ಬದ ಶುಭಾಶಯಗಳು ವಿನಿಮಯ ಮಾಡಲಾಯಿತು.
ಸದರ್ ಉಮರ್ ಫಾರೂಕ್, ಹಸನಬ್ಬ, ಇಬ್ರಾಹಿಂ, ಮಸೀದಿಯ ಅಧ್ಯಕ್ಷರಾದ ಸೈಯದ್ ಸಮಿತಿಯ ಸದಸ್ಯರಾದ ಶರೀಫ್, ಕಲಂದರ್, ಸಲೀಂ, ಉಮರ್, ಖಾಸಿಂ ,ಅಬ್ದುಲ್ ರೆಹಮಾನ್, ಉಪಸ್ಥಿತರಿದ್ದರು.

