ಕೃತಕ ಬುದ್ಧಿ ಮತ್ತೆ ಎಂಬ ಎ ಐ ತಂತ್ರಜ್ಞಾನವು ಉದ್ಯೋಗವನ್ನು ನಾಶ ಮಾಡುತ್ತದೆ ಎನ್ನುವುದಕ್ಕಿಂತ ಉದ್ಯೋಗದ ಸ್ವರೂಪವನ್ನು ಬದಲಾಯಿಸುತ್ತದೆ: ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ಅಭಿಪ್ರಾಯ.
1 min read
ಅವಿನ್ ಟಿವಿ ಸುದ್ದಿಜಾಲ ✍️: ಕೃತಕ ಬುದ್ಧಿ ಮತ್ತೆ ಎಂಬ ಎ ಐ ತಂತ್ರಜ್ಞಾನವು ಉದ್ಯೋಗವನ್ನು ನಾಶ ಮಾಡುತ್ತದೆ ಎನ್ನುವುದಕ್ಕಿಂತ ಉದ್ಯೋಗದ ಸ್ವರೂಪವನ್ನು ಬದಲಾಯಿಸುತ್ತದೆ: ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ಅಭಿಪ್ರಾಯ.
ಚಿಕ್ಕಮಗಳೂರು ಮಾ ೧೪: ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗುತ್ತಿರುವ ತಾಂತ್ರಿಕತೆಯ ಜೊತೆಗೆ ನಾವು ಹೊಂದಿಕೊಳ್ಳದಿದ್ದರೆ ಹೊರಗಿನ ಪ್ರಪಂಚ ನಮಗೆ ಗೊತ್ತಾಗುವುದಿಲ್ಲ, ಕೃತಕ ಬುದ್ದಿ ಮತ್ತೆ ಎಂಬ ಎ ಐ ತಂತ್ರಜ್ಞಾನವು ಉದ್ಯೋಗವನ್ನು ನಾಶಮಾಡುತ್ತದೆ ಎನ್ನುವುದಕ್ಕಿಂತ ಉದ್ಯೋಗದ ಸ್ವರೂಪವನ್ನು ಬದಲಾಯಿಸುತ್ತದೆ ಎಂದು ಐಐಪಿ ಸಂಸ್ಥೆಯ ಸಂಸ್ಥಾಪಕ ನಂಜೇಶ್ ಬೆಣ್ಣೂರು ಅವರು ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂ ಸ್ ಕಿಂಗ್ ಸುದ್ದಿ ವಾಹಿನಿಯು ಚಿಕ್ಕಮಗಳೂರಿನ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ನವಮಾಧ್ಯಮಗಳ ತರಬೇತಿ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ, ಎ ಐ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗದ ಕಡಿತದ ಸಾಧಕ ಬಾದಕ ಮತ್ತು ಪರಿಹಾರೋಪಾಯ ಕುರಿತು ಅವಲೋಕನ ಮಾಡಿದರು.
ನವ ಮಾಧ್ಯಮಗಳ ತರಬೇತಿ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿ, ಆಸಕ್ತಿಯಿಂದ ಭಾಗವಹಿಸಿ AI ತಂತ್ರಜ್ಞಾನದ ಸಾದಕ ಬಾದಕಗಳ ವಿಚಾರಕ್ಕೆ ಗಂಭೀರವಾಗಿ ತೆರೆದುಕೊಂಡರು.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

