ಮನುಷ್ಯರು ಮನುಷ್ಯರೊಟ್ಟಿಗೆ ಸಂವಾದ ಮಾಡುವುದಕ್ಕೂ, ಯಂತ್ರ ಮನುಷ್ಯರೊಟ್ಟಿಗೆ ಸಂವಾದ ಮಾಡುವುದಕ್ಕೂ ವ್ಯತ್ಯಾಸವಿದೆ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಮನುಷ್ಯರು ಮನುಷ್ಯರೊಟ್ಟಿಗೆ ಸಂವಾದ ಮಾಡುವುದಕ್ಕೂ, ಯಂತ್ರ ಮನುಷ್ಯರೊಟ್ಟಿಗೆ ಸಂವಾದ ಮಾಡುವುದಕ್ಕೂ ವ್ಯತ್ಯಾಸವಿದೆ, ಚಿಕ್ಕಮಗಳೂರಿನಲ್ಲಿ ನವ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆ ಕುರಿತು ತರಬೇತಿ ಶಿಬಿರಕ್ಕೆ ಸಿದ್ಧತೆ.
ಚಿಕ್ಕಮಗಳೂರು ಮಾ ೧೨: ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಹೊಸ ತಲೆಮಾರಿನ ಯುವ ಸಮುದಾಯ ಎದುರಿಸುತ್ತಿರುವ, ಎದುರಿಸಬೇಕಾಗಿರುವ ತಾಕಲಾಟಗಳು ಸಂಕಷ್ಟಗಳ ನಿವಾರಣೆಯ ದೃಷ್ಟಿಯಿಂದ, ನಾಳೆಗಳ ಪ್ರಖರತೆಗಾಗಿ ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮಗಳ ಅರಿವಿನ ಓರೆ ಕೋರೆ ಕುರಿತು ನವಮಾಧ್ಯಮಗಳ ಜವಾಬ್ದಾರಿ ಏನು? ಎತ್ತ ? ಹೇಗೆ ? ಎಂಬ ವಿಚಾರವಾಗಿ ಇದೇ ಮಾರ್ಚ್ 14 ಮತ್ತು 15ರಂದು ಚಿಕ್ಕಮಗಳೂರಿನಲ್ಲಿ ನವ ಮಾಧ್ಯಮಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಎನ್ ರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ ರಾಜು ಅವರು ತಂತ್ರಜ್ಞಾನದ ಹೊಸ ಆವಿಷ್ಕಾರದ ಫಲ ಮಾನವನ ಮತ್ತು ಜೀವ ಸಂಕುಲದ ಬದುಕಿಗೆ ಪೂರಕವಾಗಿ ಇರಬೇಕೆ ವಿನಃ ಮಾರಕವಾಗಿರಬಾರದು, ಆದರೆ ಇಂದು ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರವು ಸೈಬರ್ ಕ್ರೈಂ ಹೆಸರಿನಲ್ಲಿ ನ್ಯಾಯಾಧೀಶರಂಥಹ ನ್ಯಾಯಾಧೀಶರೇ ಮೋಸದ ಜಾಲಕ್ಕೆ ಒಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಇದು ಆತಂಕದ ವಿಚಾರ, ಈ ನಿಟ್ಟಿನಲ್ಲಿ ವಿಜ್ಞಾನದ ಆವಿಷ್ಕಾರಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಕುರಿತು ಸಾಮಾಜಿಕ ಮಾಧ್ಯಮಗಳು ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಐಐಪಿ ಪ್ರಕಾಶನದ ಮುಖ್ಯಸ್ಥ ನಂದೀಶ್ ಬೆಣ್ಣೂರು ಇದೆ ಸಂದರ್ಭದಲ್ಲಿ ಮಾತನಾಡಿ ಇದು IA ತಂತ್ರಜ್ಞಾನದ ಪರ್ವಕಾಲ, ಹೊಸ ಹೊಸ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವುದು ಅನಿವಾರ್ಯ, ಸ್ವಾಭಾವಿಕವಾಗಿ ಮನುಷ್ಯನ ಮನಸ್ಸು ಹೊಸತನಕ್ಕೆ ಆಕರ್ಷಿಸುತ್ತದೆ, ಇಂತಹ ಆಕರ್ಷಣೆಗಳು ಮಾನವ ಜನಾಂಗದ ಏಳಿಗೆಗೆ ಕೆಡುಕಾಗದಂತೆ ಸುಜ್ಞಾನದ ಮಾರ್ಗದತ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ತುರ್ತು ಎಂದರು.
ಇದೇ ಮಾರ್ಚ್ 14 ಮತ್ತು 15ರಂದು ಎರಡು ದಿನಗಳ ಕಾಲ ಚಿಕ್ಕಮಗಳೂರು ನಗರದ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯುವ ಈ ನವಮಾಧ್ಯಮಗಳ ತರಬೇತಿ ಶಿವರಕ್ಕೆ ವಿಷಯ ತಜ್ಞರು ಪರಿಣಿತರು ಆಗಮಿಸಿ ನವ ಮಾಧ್ಯಮಗಳ ಜವಾಬ್ದಾರಿ ಮತ್ತು ಕೃತಕ ಬುದ್ಧಿಮತ್ತೆಯ ಸಾಧಕ ಬಾಧಕಗಳನ್ನು ಕುರಿತು ನಡೆಯುತ್ತಿರುವ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಈ ತರಬೇತಿ ಶಿಬಿರವನ್ನು ಆಯೋಜಿಸಿರುವ ಹೊನ್ನ ಬಿತ್ತೇವು ಹೊಲಕೆಲ್ಲ ತಂಡ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿಯು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡಿತು.
ಸುದ್ದಿಗೋಷ್ಠಿಯಲ್ಲಿ ನ್ಯೂಸ್ ಕಿಂಗ್ ಸುದ್ದಿವಾಹಿನಿ ಮತ್ತು ಹೊನ್ನ ಬಿತ್ತೇವು ಹೊಲಕೆಲ್ಲ ತಂಡದ ಮುಖಂಡರಾದ ಗುರುಶಾಂತಪ್ಪ, ನಟರಾಜ್ ಎಸ್ ಕೊಪ್ಪಲು, ಪಿಳ್ಳೆನಳ್ಳಿ ವಿಜಯ್ ಕುಮಾರ್, ಜಾನ್ಸಾಲೆ ರವಿ , ಡಿ ಎಂ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.
••••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

