ಇನ್ನೇನು ರೊಬಷ್ಟ ಕಾಫಿ ಕೂಯ್ಲು ಮುಗಿತಾ ಬರುತ್ತಿದೆ, ಒಂದು 25 ದಿನದ ಹಿಂದೆ ಒಳ್ಳೆ ಮಳೆ ಆಯ್ತು. ಕಾಫಿ ಹೂ ಸಹ ಆಯ್ತು, ಅದೆ ನಮಗೆ ಮುಂದಿನ ವರ್ಷದ ಬೆಳೆ, ಅದನ್ನ ಕಾಪಾಡಿಕೊಳ್ಳಲು ತಕ್ಷಣ spinkler ಮಾಡ ಬೇಕು,…
1 min read
ಇನ್ನೇನು ರೊಬಷ್ಟ ಕಾಫಿ ಕೂಯ್ಲು ಮುಗಿತಾ ಬರುತ್ತಿದೆ, ಒಂದು 25 ದಿನದ ಹಿಂದೆ ಒಳ್ಳೆ ಮಳೆ ಆಯ್ತು. ಕಾಫಿ ಹೂ ಸಹ ಆಯ್ತು, ಅದೆ ನಮಗೆ ಮುಂದಿನ ವರ್ಷದ ಬೆಳೆ, ಅದನ್ನ ಕಾಪಾಡಿಕೊಳ್ಳಲು ತಕ್ಷಣ spinkler ಮಾಡ ಬೇಕು,



ಕಳೆದ ವರ್ಷ ಏಪ್ರಿಲ್ ನಂತರ spinkler ಮಾಡಿಲ್ಲ, ಅದರಲ್ಲೂ ಮಲೆನಾಡು ಭಾಗದಲ್ಲಿ ಕೆರೆ ಮಾಡಿಸಿರುತ್ತೇವೆ, ತಕ್ಷಣ ಹೋಗಿ spinkler ಗೆ ಪೈಪ್ ಜೋಡಿಸಿ ಕರೆಂಟ್ ಮೋಟಾರ್ ಪಂಪ್ ಆನ್ ಮಾಡುತ್ತೇವೆ, ತಕ್ಷಣ ಮೋಟಾರ್ ಪಂಪ್ ಸುಟ್ಟು ಹೋಗುತ್ತದೆ, ಅರೆ ಹೊಸ ಮೋಟಾರ್ ಹಾಕಿಸಿ 3.4 ವರ್ಷ ಆಗಿದೆ 2 ವರ್ಷದ ಹಿಂದೆ winding ಮಾಡಿಸಿದ್ದೆ ಈಗೇಕೆ ದಿಡೀರ್ ಅಂತ ಶಾರ್ಟ್ ಆಗಿ ಸುಟ್ಟು ಹೋಯ್ತು, electrician ಸರಿಯಾಗಿ ಕೆಲಸ ಮಾಡಿಲ್ಲ, ದುಡ್ಡು ಹೊಡೆದ ಅನ್ನುವ ಗುಮಾನಿ, ಇನ್ನು ಹಂಗೆ ಆಗಿರಬಹುದು, ಹಿಂಗೆ ಆಗಿರಬಹುದು ಅನ್ನುವ ಅಂದಾಜು. ಅದೆಲ್ಲಕ್ಕಿಂತ ಕಷ್ಟದ್ದು ಅ ಪಂಪ್ ಅನ್ನು ಕೆರೆಯಿಂದ ಮೇಲೆ ಎತ್ತುವುದು, ಕನಿಷ್ಠ ಪಕ್ಷ 8 ಜನ ಹೆಣಗ ಬೇಕು. Spinkler ಮಾಡುವುದು ಕನಿಷ್ಠ ಪಕ್ಷ 10 ದಿನ ಮುಂದಕ್ಕೆ ಹೋಯಿತು , ಪಂಪ್ winding ಮಾಡಿಸಬೇಕು, electrician ತಕ್ಷಣಕ್ಕೆ ಸಿಗುತ್ತಿಲ್ಲ stress, stress, stress
ಇಂದಿನ ಜನರ ಸಮಸ್ಯೆ ಇರುವ ಕಾಲದಲ್ಲಿ. ಇದೊಂದು ಸಮಸ್ಯೆ
ಈ ಸಮಸ್ಯೆ ಇಂದ ಪಾರಾಗಲು ಮುಂಜಾಗ್ರತೆ ಕ್ರಮ ಏನು
ಮಲೆನಾಡು ಭಾಗದ ಕೆರೆ ಗಳಲ್ಲಿ ಹಾಕಿದ submersible pump ನ ಕರೆಂಟ್ connection ವೈರ್ ನ ಮೇಲಭಾಗದ insulator ನ್ನು ಕೆರೆಯ ನೀರಿನಲ್ಲೇ ಇತ್ತೀಚಿಗೆ ಕೆಲವೊಂದು ಹುಳಗಳು ನೀರಿನಲ್ಲಿ ಇದ್ದು ನೀರಿನಲ್ಲಿರುವ ವೈರ್ ನ್ನು ತಿಂದು ಹಾಕುತಿದ್ದು,ಇದರಿಂದ ಪಂಪ್ ಆನ್ ಮಾಡಿದಾಗ ಕಾಪರ್ ವೈರ್ ಒಂದಕ್ಕೊಂದು ತಾಗಿ ಶಾರ್ಟ್ ಆಗಿ ಪಂಪ್ ಕೆಲವೆ ಕ್ಷಣಗಳಲ್ಲಿ ಸುಟ್ಟು ಹೋಗುತ್ತಿದೆ, ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಮಲೆನಾಡಿನ ಕೆರೆ ಗಳಲ್ಲಿ ಇದು ವ್ಯಾಪಾಕ ವಾಗಿ ಆಗುತ್ತಿದೆ. ಇದರ ಕೆಲವೊಂದು pic ಹಾಕಿದ್ದೇನೆ.ಈ pic ಅಲ್ಲಿ ಕೆಲವು ಮಾತ್ರ ಹಾಕಿದ್ದೇನೆ ಸುಮಾರು 50 ಅಡಿ ವೈರ್ ಕತೇನು ಇದಕ್ಕಿಂತ ಬೀಕರ 😥.
ಇಂತ ಸಂದರ್ಭದಲ್ಲಿ ಪಂಪ್ ಆನ್ ಮಾಡುವ ಮೊದಲು ಪಂಪ್ ನ ವೈರ್ connection ಮತ್ತು ನೀರಿನಲ್ಲಿರುವ ವೈರ್ ನ್ನು ಪರೀಕ್ಷಿಸಿ ಕೊಳ್ಳಿ ಇಲ್ಲದಿದ್ದರೆ ಸಮಸ್ಯೆ ಮೈ ಮೇಲೆ ಎಳೆದು ಕೊಂಡಂತೆ
ಈ ಹುಳದ ಕಾಟಕ್ಕೆ ಸದ್ಯಕ್ಕೆ ಯಾವುದೆ ಪರಿಹಾರ ವಿಲ್ಲ, ಪಂಪ್ ಉಪಯೋಗಿಸಿದ ನಂತರ ಪಂಪ್,ವೈರ್ connection ನೀರಿಗೆ ತಾಗದಂತೆ ಮೇಲೆ ಎತ್ತಿಡಿ
ಇದು ನನ್ನ ಅನುಭವ ವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ ಕೇವಲ 4 ವರ್ಷ ಹಿಂದೆ ಹಾಕಿಸಿದ 15 HP ಪಂಪ್ ಕತೆ.
ನನಗೆ ಆದ ನಷ್ಟ, ಕಷ್ಠ ನಿಮಗೆ ಬಾರದಿರಲಿ ಅನ್ನುವ ಕಾಳಜಿ.
ಇನ್ನು ನಿಮಗೆ ಬಿಟ್ಟ ವಿಚಾರ
✍️ ಅವರೇಕಾಡು ಪೃಥ್ವಿ

