लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಈಗ ನೆನಪಷ್ಟೇ..
‎ಈ ಸಂಕಟಕ್ಕೆ ಐದನೇ ವರ್ಷ
‎
ಸಾವು ಯಾರಿಗೆ?, ಯಾವಾಗ? ಎಲ್ಲಿ? ಹೇಗೆ?  ಕಾದಿರುತ್ತದೆ ಎಂಬುದು ರಹಸ್ಯದೊಳಗಿರುವ ರಹಸ್ಯ.

‎ಹುಡುಕಾಡಿ, ತಡಕಾಡಿ ತಂದ ಸುದ್ದಿಯ ಪ್ರಕಾರ ಧರ್ಮೇಗೌಡರು ಸಾವಿಗೆ ಧೈರ್ಯದಿಂದ ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ವಿಪರೀತ ಆಸ್ತಿ, ಇದ್ದ ಕೋಟಿ ಕೋಟಿ ಹಣ, ಮೈತುಂಬಾ ಇದ್ದ ಅಧಿಕಾರ, ಗೂಟದ ಕಾರು, ಗನ್ ಮ್ಯಾನುಗಳು, ಪೋಲಿಸ್ ಸೈರನ್ನಿನ ರಕ್ಷಣೆ
ಇವೆಲ್ಲಕ್ಕಿಂತ ಬೆಲೆ ಕಟ್ಟಲಾಗದ ಹೆಂಡತಿ, ಮಕ್ಕಳು‌ ಇವರುಗಳು ಯಾರು ರೈಲಿಗೆ ತಲೆ ಕೊಡುವ ಮುನ್ನಾ ನೆನಪಾಗಲಿಲ್ಲವೇ?
ಮೇಲಿನ ಇಷ್ಟೊಂದನ್ನೆಲ್ಲಾ ಗಳಿಸಿ ಕ್ಷಣಾರ್ಧದಲ್ಲಿಯೇ ಕಳೆದುಕೊಳ್ಳಲು ಧರ್ಮೇಗೌಡರು ಧೈರ್ಯ ಮಾಡಿದ್ದು ಹುಡುಗಾಟವಲ್ಲ.
‎
‎ಸಾವಿಗಾಗಿ ತೀರ್ಮಾನಿಸಿ ಕೋಟ್ಯಾಂತರ ರೂಪಾಯಿಯ ಬೆಳೆಬಾಳುವ ಕಾರುಗಳಿದ್ದರು ಒಂದು ಸಣ್ಣ ಸ್ಯಾಂಟ್ರೋ ಕಾರಿಗೆ ಹತ್ತುವ ಮುನ್ನಾ ಎಲ್ಲವನ್ನು ಬಿಟ್ಟು  ಮಧ್ಯಾಹ್ನ ರೈಲ್ವೇ ನಿಲ್ದಾಣದ ಕಡೆಗೆ ಹೋಗಲು ಮನೆಯಿಂದ ಹೊರಗಿಟ್ಟ ಮೊದಲ ಹೆಜ್ಜೆ ಏನಾಗಿರಬಾರದು ಉಹಿಸಿಕೊಳ್ಳಿ.
‎ಮನೆ ಮಡದಿ ಆಸ್ತಿ ಅಧಿಕಾರ ಆಳು ಕಾಳು ಯಾವುದನ್ನು ಹಿಂದಿರುಗಿ ನೋಡದಷ್ಟ ಸಾವಿನ ಮನೆ ಕಡೆ ಹೊರಡುವಾಗ ಗೌಡರಿಗೆ ಅದೆಷ್ಟು ಧೈರ್ಯ ಬಂದಿರಬಹುದು!!!
‎ಅದಿರಲಿ ನಾಲ್ಕು ಗಂಟೆ ಸುಮಾರಿಗೆ ಸಾಯಲು ರೈಲ್ವೆ ನಿಲ್ದಾಣ ತಲುಪಿದ್ದಾರೆ, ರೈಲು ಬರುವುದು ಎಂಟು ಗಂಟೆಗೆ ಎಂಬ ಮಾಹಿತಿ ತಿಳಿದು ಸಾವಿಗಾಗಿ ಕಾದ ಸಮಯದಲ್ಲಿ ಯಾವ ಆಸೆಯೂ ಗೌಡರ ನಿರ್ಧಾರವನ್ನು ಬದಲಿಸಲಿಲ್ಲವೇ?
ಮಡದಿ, ಮಕ್ಕಳು ನೆನಪಾಗಲಿಲ್ಲವೇ?  ರೈಲು ಬರುವ ಐದು ನಿಮಿಷ  ಮುನ್ನ ಸಾಯಲು ಮಲಗಿದಾಗ ಅದೆಂತ ಧೈರ್ಯ ಬಂದಿರಬೇಕು. ರೈಲು ಬಂದ ಕ್ಷಣಾರ್ಧದಲ್ಲಿ ಸಾವು ತನ್ನ ಕೆಲಸ ಮಾಡಿದೆ.
ಸಾಯಲು ಮಲಗಿದ ಐದು ನಿಮಿಷ ಮುನ್ನಾ ಇನ್ನೆರಡೇ ಕ್ಷಣದಲ್ಲಿ ನಾನು ಸಾಯುತ್ತೇನೆ ಎಂಬ ಭಯ ಬದುಕುವ ಆಸೆ ಹುಟ್ಟಿಸಿ ತನ್ನ ತೀರ್ಮನವನ್ನು ಬದಲಿಸಬಹುದಿತ್ತು.‌ ಆದರೆ ಸಾವೇ ಉತ್ತಮ ಎಂಬಷ್ಟು ತೀರ್ಮಾನ ಮಾಡಲು ಆಗಿರುವ ಮಾನಸಿಕ ನೋವು ಏನಿರಬಹುದು. ಕೆಲವು ನೋವುಗಳು ಸಾವಿಗಿಂತ ಕೆಟ್ಟವಾಗಿರುತ್ತವೆ. ನೋವಿಗಿಂತ ಸಾವೇ ಮೇಲು ಎನ್ನುವ ನೋವುಗಳ ಇಂತಹ ಸಾವಿಗೆ ಕಾರಣ ಆಗಿರುತ್ತವೆ

‎ಧರ್ಮೇಗೌಡರ ರಾಜಕಾರಣ ಏನೇ ಇರಲಿ, ಅವರ ಸಾವಿಂದ ನಮ್ಮ ಜಿಲ್ಲೆಗೆ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿತ್ತು.

ವಿಧಿಯಾಟದ ಮುಂದೆ, ಸಾವಿನಾಟದ ಮುಂದೆ ಹಣ ಆಸ್ತಿ ಅಧಿಕಾರ ಎಲ್ಲವೂ ಮಂಡಿಯೂರಲೇ ಬೇಕು. ಮಂಡಿಯೂರಿದವು.

ಒಂದು ಕ್ಷಣದ ಸಾವಿಗೆ ಇಷ್ಟೊಂದನ್ನು ಗಳಿಸಬೇಕಿತ್ತಾ? ಸಾವು ಮನುಷ್ಯರ ಬೆನ್ನತ್ತುವುದನ್ನು ನೋಡಿದ್ದೇವೆ, ಸಾವನ್ನೇ ಬೆನ್ನತ್ತಿ ಸಾವು ಪಡೆದ ಧರ್ಮೇಗೌಡರು ನಮ್ಮೊಂದಿಗೆ ಇರಲೇಬೇಕಿತ್ತು..
‎ಸಾವಿಗೆ ನಿಜವಾದ ಕಾರಣ ಇನ್ನೂ ಸಿಕ್ಕಿಲ್ಲ. ಕಾರಣ ಸಿಕ್ಕಿದರೂ ಆ ಕಾರಣಕ್ಕೆ ಧರ್ಮೇಗೌಡರನ್ನು ವಾಪಸ್ಸು ಸಾಧ್ಯವಿಲ್ಲವಲ್ಲ..
ನನ್ನ ಕಣ್ಣಂಚಿನ ನೀರೊಂದು ಇಣುಕಿ ಧರ್ಮೇಗೌಡರನ್ನು ಬೀಳ್ಕೊಟ್ಟು ಐದು ವರ್ಷಗಳೇ ಕಳೆದವು. ಹೋಗಿ ಬನ್ನಿ ಗೌಡರೇ….
‎
‎ಮನಸುಳಿ ಮೋಹನ್ ತರೀಕೆರೆ.

About Author

Leave a Reply

Your email address will not be published. Required fields are marked *

You may have missed