लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಂತ ಕಾರಿನಲ್ಲಿ ಅಕ್ರಮ ಪೊಲೀಸ್ ನಾಮಫಲಕ: ಅಧಿಕಾರಿಗಳ ಮೇಲೆಯೇ ಕಾನೂನು ಜಾರಿ…..

1 min read

ಸ್ವಂತ ಕಾರಿನಲ್ಲಿ ಅಕ್ರಮ ಪೊಲೀಸ್ ನಾಮಫಲಕ: ಅಧಿಕಾರಿಗಳ ಮೇಲೆಯೇ ಕಾನೂನು ಜಾರಿ
‎
‎ಸ್ವಂತ ಕಾರಿನಲ್ಲಿ ಅಕ್ರಮವಾಗಿ ?ಪೊಲೀಸ್? ನಾಮಫಲಕ ಅಳವಡಿಸಿಕೊಂಡು ಕುಟುಂಬ ಸಮೇತ ಪ್ರವಾಸಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ದವೇ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡ ಪಿಎಸ್‌ಐ ರೇಣುಕಾ ಅವರ ಕಾರ್ಯಾಚರಣೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
‎
‎ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಣಕಲ್ ಪೊಲೀಸ್ ಠಾಣೆಯ ಸಬ್‌ಇನ್ಸೆಕ್ಟರ್ ರೇಣುಕಾ ಅವರು, ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ (ಫ್ಯಾಮಿಲಿ ಟ್ರಿಪ್) ತೆರಳುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ, ಅಧಿಕೃತ ಕರ್ತವ್ಯದಲ್ಲಿಲ್ಲದಿದ್ದರೂ ಕಾರಿನಲ್ಲಿ ?ಪೊಲೀಸ್? ಎಂಬ ನಾಮಫಲಕ ಅಳವಡಿಸಿರುವುದು ಪತ್ತೆಯಾಯಿ ತು.ನಿಯಮಾನುಸಾರ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಥವಾ ಅಧಿಕೃತ ಅನುಮತಿ ಇಲ್ಲದೆ ?ಪೊಲೀಸ್? ನಾಮಫಲಕ ಬಳಕೆ ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ, ಪಿಎಸ್‌ಐ ರೇಣುಕಾ ಅವರು ಹುದ್ದೆ, ಪರಿಚಯ ಯಾವುದಕ್ಕೂ ಲೆಕ್ಕಿಸದೇ ಸ್ಥಳದಲ್ಲೇ ನಾಮಫಲಕವನ್ನು ತೆರವುಗೊಳಿಸಿ, ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿ ಪ್ರಕರಣ ದಾಖಲಿಸಿದರು.
‎
‎ಈ ಕ್ರಮದ ಮೂಲಕ, ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲೂ ಪೊಲೀಸ್ ಗುರುತು ಬಳಸುವುದರಿಂದ ಸಾರ್ವಜನಿಕರಲ್ಲಿ ತಪ್ಪು ಭ್ರಮೆ ಉಂಟಾಗಬಹುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಕಾನೂನು ಎಲ್ಲರಿಗೂ ಸಮಾನ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ಸಮಾಜಕ್ಕೆ ಬಲವಾಗಿ ರವಾನಿಸಿದೆ.
‎
‎ನಿಸ್ಪೃಹತೆ, ಕರ್ತವ್ಯನಿಷ್ಠೆ ಹಾಗೂ ಕಾನೂನು ಪ್ರಾಮಾಣ ಪ್ರತೀಕವಾಗಿ ಪಿಎಸ್‌ಐ ರೇಣುಕಾ ಅವರ ಈ ಕಾರ್ಯಾ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
‎
ವರದಿ…ಮಗ.

About Author

Leave a Reply

Your email address will not be published. Required fields are marked *

You may have missed