ಚಿಕ್ಕಮಗಳೂರಿನ ಲೇಖಕಿ ನಳಿನಾ ಅವರ “ಮನೋಮಂತನ” ಕೃತಿ ಲೋಕಾರ್ಪಣೆ.*..
1 min read
ಅವಿನ್ ಟಿವಿ ಸುದ್ದಿಜಾಲ ✒️:
*ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿಯಲ್ಲಿ ಚಿಕ್ಕಮಗಳೂರಿನ ಲೇಖಕಿ ನಳಿನಾ ಅವರ “ಮನೋಮಂತನ” ಕೃತಿ ಲೋಕಾರ್ಪಣೆ.*
ಬೆಂಗಳೂರು ಡಿ.24: ಚಿಕ್ಕಮಗಳೂರಿನ ಸೃಜನಶೀಲ ಲೇಖಕಿ, ಕವಿಯತ್ರಿ ನಳಿನಾ ಡಿ ಅವರ ಮಕ್ಕಳ ಶೈಕ್ಷಣಿಕ ಅಂಕಣ ಬರಹವಾದ “ಮನೋಮಂಥನ” ಕೃತಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಗೃಹಕಚೇರಿ ಕಾವೇರಿಯಲ್ಲಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಲೇಖಕಿ ನಳಿನಾ ಡಿ ಅವರು ಕನ್ನಡ ಸಾರಸತ್ವ ಲೋಕಕ್ಕೆ ಅರ್ಪಿಸಿದ ಅವರ ಇಪ್ಪತೈದನೇ ಕೃತಿ ಇದಾಗಿದೆ. ಮಕ್ಕಳ ಮನೋವಿಕಾಸದ ಬೆಳವಣಿಗೆಗೆ ಪೂರಕವಾದ ವೈಚಾರಿಕವಾದ ಹರಿವನ್ನು ಈ ಕೃತಿಯು ಕಟ್ಟಿಕೊಟ್ಟಿದೆ.
ಹೆಚ್ಚಿನ ಜನಜಂಗುಳಿ ಇಲ್ಲದ ಅತ್ಯಂತ ಸರಳವಾದ ಈ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ರೇಖಾ ಹುಲಿಯಪ್ಪಗೌಡ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸುನಂದಮ್ಮ, ಹಿರಿಯ ವೈದ್ಯೆ ಹಾಗೂ ಸಾಹಿತಿ ಡಾ ವಸುಂಧರ ಭೂಪತಿ, ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ. ಲಲಿತಾ ನಾಯಕ್, ಚಿಂತಕಿ ಮತ್ತು ಬರಹಗಾರ್ತಿ ಡಾ. ಆಶಾದೇವಿ ಎಮ್.ಎಸ್, ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ….. ✒️
ಚಿಕ್ಕಮಗಳೂರು

