लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಾತಿ ಗಣತಿಯಲ್ಲಿ ತಾರತಮ್ಯ — ಮಹಿಳೆಯರ ಆಕ್ರೋಶ ಮೂಡಿಗೆರೆ ತಾಲೂಕಿನಲ್ಲಿ ನಡೆಯುತ್ತಿರುವ ಜಾತಿ–ಆರ್ಥಿಕ–ಸಾಮಾಜಿಕ–ಶೈಕ್ಷಣಿಕ ಗಣತಿಯಲ್ಲಿ ಗಣತಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಪ್ಪು ದಾಖಲೆಗಳ ನಮೂದು ಮಾಡಿರುವ ಆರೋಪ ಕೇಳಿಬಂದಿದೆ. ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಭಾಷ್ ನಗರದ ಕನಕ ಮತ್ತು ರುಕ್ಮಿಣಿ ಎಂಬವರ ಮನೆಗಳಿಗೆ ಜಾತಿ ಗಣತಿ ತೆರಳಿದ್ದ ಗಣತಿದಾರೆ ಮಾಡಿರುವ ಯಡವಟ್ಟು. ಮನೆಯಲ್ಲಿದ ಮಹಿಳೆಯರು ತಮ್ಮ ಜಾತಿ “ಮಲಯಾಳಿ ಬಿಲ್ಲವ” ಎಂದು ಸ್ಪಷ್ಟವಾಗಿ ತಿಳಿಸಿ, ಅದರ ದೃಢೀಕರಣ ಪತ್ರ ಗಣತಿದಾರರಿಗೆ ನೀಡಿದ್ದರೂ, ಅದನ್ನು ನಿರಾಕರಿಸಿ “ಮಲಯಾಳಿ ನಾಯರ್” ಎಂದು ದಾಖಲಿಸಿರುವುದಾಗಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಗಣತಿದಾರೆಯಾದ ಶ್ರೀಮತಿ ಚುಡಾಮಣಿ, ಬಿಳಗುಳ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು, ಮಹಿಳೆಯರ ಮನೆಗಳಿಗೆ ಗಣತಿಗೆ ಭೇಟಿಯಾದ ವೇಳೆ “ಮಲೆಯಾಳಿ ಬಿಲ್ಲವ ಎಂಬ ಜಾತಿಯ ಪಟ್ಟಿಯೇ ಇಲ್ಲ” ಎಂದು ಹೇಳಿ ತಪ್ಪು ಮಾಹಿತಿ ನೀಡಿರುವುದಾಗಿ ಮಾನ್ಯ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ಆಕ್ರೋಶಗೊಂಡ ಮಹಿಳೆಯರು ತಕ್ಷಣವೇ ತಹಸಿಲ್ದಾರ್‌ರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿ, ತಪ್ಪಿತಸ್ಥ ಗಣತಿದಾರರಾದ ಚೂಡಮಣಿ ಶಿಕ್ಷಕಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಗಣತಿದಾರರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಸಮುದಾಯದ ಸದಸ್ಯರು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಗಣತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಹಾಗೂ ಜನರ ಮೂಲ ಮಾಹಿತಿಯನ್ನು ಪಡೆದು ಗೌರವಿಸಬೇಕೆಂದು ಆಗ್ರಹಿಸಿದ್ದಾರೆ…

1 min read

ಮೂಡಿಗೆರೆ ತಾಲೂಕಿನಲ್ಲಿ ನಡೆಯುತ್ತಿರುವ ಜಾತಿ–ಆರ್ಥಿಕ–ಸಾಮಾಜಿಕ–ಶೈಕ್ಷಣಿಕ ಗಣತಿಯಲ್ಲಿ ಗಣತಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಪ್ಪು ದಾಖಲೆಗಳ ನಮೂದು ಮಾಡಿರುವ ಆರೋಪ ಕೇಳಿಬಂದಿದೆ.

ಹೆಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಭಾಷ್ ನಗರದ ಕನಕ ಮತ್ತು ರುಕ್ಮಿಣಿ ಎಂಬವರ ಮನೆಗಳಿಗೆ ಜಾತಿ ಗಣತಿ ತೆರಳಿದ್ದ ಗಣತಿದಾರೆ ಮಾಡಿರುವ ಯಡವಟ್ಟು. ಮನೆಯಲ್ಲಿದ ಮಹಿಳೆಯರು ತಮ್ಮ ಜಾತಿ “ಮಲಯಾಳಿ ಬಿಲ್ಲವ” ಎಂದು ಸ್ಪಷ್ಟವಾಗಿ ತಿಳಿಸಿ, ಅದರ ದೃಢೀಕರಣ ಪತ್ರ ಗಣತಿದಾರರಿಗೆ ನೀಡಿದ್ದರೂ, ಅದನ್ನು ನಿರಾಕರಿಸಿ “ಮಲಯಾಳಿ ನಾಯರ್” ಎಂದು ದಾಖಲಿಸಿರುವುದಾಗಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಗಣತಿದಾರೆಯಾದ ಶ್ರೀಮತಿ ಚುಡಾಮಣಿ, ಬಿಳಗುಳ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು, ಮಹಿಳೆಯರ ಮನೆಗಳಿಗೆ ಗಣತಿಗೆ ಭೇಟಿಯಾದ ವೇಳೆ “ಮಲೆಯಾಳಿ ಬಿಲ್ಲವ ಎಂಬ ಜಾತಿಯ ಪಟ್ಟಿಯೇ ಇಲ್ಲ” ಎಂದು ಹೇಳಿ ತಪ್ಪು ಮಾಹಿತಿ ನೀಡಿರುವುದಾಗಿ ಮಾನ್ಯ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.

ಆಕ್ರೋಶಗೊಂಡ ಮಹಿಳೆಯರು ತಕ್ಷಣವೇ ತಹಸಿಲ್ದಾರ್‌ರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿ, ತಪ್ಪಿತಸ್ಥ ಗಣತಿದಾರರಾದ ಚೂಡಮಣಿ ಶಿಕ್ಷಕಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಗಣತಿದಾರರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಸಮುದಾಯದ ಸದಸ್ಯರು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಗಣತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಹಾಗೂ ಜನರ ಮೂಲ ಮಾಹಿತಿಯನ್ನು ಪಡೆದು ಗೌರವಿಸಬೇಕೆಂದು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed