ಅವಿನ್ ಟಿವಿ ಸುದ್ದಿ ಜಾಲ. ✒️ *ಇದು ಫ್ಯಾಶನ್ ಜಗತ್ತು, ಈ ಫ್ಯಾಶನ್ ಜಗತ್ತು ಇಂದು ಯಾವ ಹಂತಕ್ಕೆ ಬಂದು ನಿಂತಿದೆ ಎಂದರೆ, ಒಮ್ಮೆ ಈ ಚಿತ್ರಪಟವನ್ನು ನೋಡಿ.*
•••••••••••••ಹೆಣ್ಣುಮಕ್ಕಳಾಗಲೀ ಗಂಡುಮಕ್ಕಳಾಗಲೀ ಉಡುಗೆ ತೊಡುಗೆ ಅವರವರ ಆಯ್ಕೆ ಎನ್ನುವವಳು ನಾನು.
ಆದರೆ ನಟಿ ಹುಮಾ ಖುರೇಶಿಯ ಈ ಶರ್ಟ್ ನೋಡಿದಾಗ ದಂಗಾಗಿಹೋದೆ.
ಹಹಹ, ಈ ಕೆಲವು ಫ್ಯಾಷನ್ ಡಿಸೈನರ್ ಗಳು ಕ್ರಿಯೇಟಿವಿಟಿ ಹೆಸರಿನಲ್ಲಿ ಎಂಥವರನ್ನು ಬೇಕಾದರೂ ಹೇಗೆ ಯಾಮಾರಿಸುತ್ತಾರೆ ಅನ್ನಿಸಿ ನಗು ಬಂತು.
ಅಂದ ಹಾಗೆ ಶುದ್ಧ ಕಾಟನ್ ಬಟ್ಟೆಯ ಈ ಡಿಸೈನರ್ ಶರ್ಟ್ ಬೆಲೆ ಕೇವಲ 65ಸಾವಿರ ರೂಪಾಯಿ ಅಂದ್ರಪ್ಪ ಯಾರೋ!
ಅವರ ದುಡ್ಡು, ಅವರ ಶರ್ಟು ನಮಗೇನು ಅಂತಾನಾ?
ನಿಜ, ನನಗೂ ಹಾಗೇ ಅನ್ನಿಸಿದರೂ ಹಂಚಿಕೊಳ್ಳಬೇಕೆನಿಸಿತು.
*ಹೇಗಿದೆ 2025 ರ ಫ್ಯಾಷನ್?*
ಬರಹ ಮತ್ತು ಫೋಟೋ ಕೃಪೆ:ದೀಪಾ ಹಿರೇಗುತ್ತಿ.
••••••••••••••

ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿ ಜಾಲ✒️
ಚಿಕ್ಕಮಗಳೂರು

