लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತಾನೇ ಸುತ್ತಿಬಿಟ್ಟ ಬುಗುರಿ ತಿರುಗುವುದು ಇನ್ನೂ ಬಾಕಿ ಇತ್ತು……

1 min read

ಅವಿನ್ ಟಿವಿ ಸುದ್ದಿಜಾಲ ✒️: ತಾನೇ ಸುತ್ತಿಬಿಟ್ಟ ಬುಗುರಿ ತಿರುಗುವುದು ಇನ್ನೂ ಬಾಕಿ ಇತ್ತು, ಬರೆಯುವುದಿತ್ತು, ಬಯ್ಯುವುದಿತ್ತು, ಜಗಳವಾಡುವುದೂ ಕೊಡ ಬಾಕಿ ಇತ್ತು, ಹಾಗೆ ತನ್ನ ತಕರಾರುಗಳಿಗೆಲ್ಲ ತಾರ್ಕಿಕ ಅಂತ್ಯ ಕಾಣಿಸಬೇಕಿತ್ತು……

ಇದು ಸಾಯುವ ವಯಸ್ಸು ಖಂಡಿತ ಅಲ್ಲವೇ ಅಲ್ಲ, ಇನ್ನೂ 62 ಅಷ್ಟೇ, ಚಂಪಾ ಅವರ ನಂತರ ಯಾರನ್ನು ಬಿಡದೆ ವಿಮರ್ಶೆಗೆ ಒಡ್ಡಿ,ತಕರಾರುಗಳನ್ನು ತೆಗೆಯುತ್ತಿದ್ದ ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರ, ಕಾದಂಬರಿ ಕಾರ, ಪ್ರಬಂಧಕಾರ ಹಾಗೂ ವೈಚಾರಿಕ ವಿಮರ್ಶಕರಾಗಿ ಗುರುತಿಸಿಕೊಂಡಿದ್ದ ಮೊಗಳ್ಳಿ ಗಣೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಇಂದು ಹೊಸಪೇಟೆಯಲ್ಲಿ ಕೊನೆಯುಸಿರೆಳದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಕಥೆ ಕಾದಂಬರಿಗಳ ಮೂಲಕ ದೊಡ್ಡ ಕೊಡುಗೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು.

ಅಗಲಿದ ಮೊಗಳ್ಳಿ ಗಣೇಶ್ ಅವರ ಅಂತ್ಯಕ್ರಿಯೆಯು ಇಂದು ಸಂಜೆ ಘಂಟೆ 4:00ಕ್ಕೆ ಮದ್ದೂರು ಸಮೀಪ ನಿಡಘಟ್ಟ ಬಳಿ ಇರುವ, ಅವರ ಹುಟ್ಟೂರು ಸಂತೆಮಾರನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಾಹಿತ್ಯ ಮತ್ತು ಜಾನಪದ ಎರಡು ಕ್ಷೇತ್ರದ ಮೇಲೆ ಅಪಾರ ಹಿಡಿತಾ ಇಟ್ಟುಕೊಂಡು, ಅಸೀಮ ಪ್ರತಿಭೆಯಾಗಿ, ಜನಗಳ ಮಧ್ಯೆ ಇದ್ದರೂ ಒಂಟಿಯಾಗಿ ಇದ್ದಂತೆ ಕಾಣಿಸುತ್ತಿದ್ದರು, ಇವರ ಸುತ್ತಮುತ್ತಲಿನ ಅವರ ಒಡನಾಡಿಗಳು ಇವರ ಚಿಂತನೆಯ ಹಂತಕ್ಕೆ ಏರದೆ ಇದ್ದಾಗ ಸದಾ ಸಿಡಿಮಿಡಿಗೊಂಡು ನಿರಂತರ ಚರ್ಚೆಯಲ್ಲಿ ಜೀವಂತವಾಗಿದ್ದವರು ಈ ಮೊಗಳ್ಳಿ ಗಣೇಶ್ ಅವರು.

ಡಾ. ಮೊಗಳ್ಳಿ ಗಣೇಶ್ ಅವರು ರಚಿಸಿದ
ಕೊನೆಯ ಕವಿತೆ..ಯೊಂದನ್ನು ಅವರ ನೆನಪಿನಲ್ಲಿ ಅವಿನ್ ಟಿವಿ ಸುದ್ದಿಜಾಲದ ಓದುಗರಿಗಾಗಿ ಈ ಸಂದರ್ಭದಲ್ಲಿ ಅರ್ಪಿಸಲಾಗಿದೆ.
__________________________*ಎಲ್ಲವೂ ಸಾಧ್ಯ*
____________________
ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆ
ಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ

ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿ
ಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ

ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆ
ಏನೇನು ರಹಸ್ಯಗಳ ಕಲಿಸಿ ಹುಟ್ಟಿನ
ಮೇಲು ಕೀಳಿಲ್ಲದ ಸತ್ಯವ ಎಷ್ಟು ಉಣಿಸುತ್ತಿತ್ತೊ

ಬೆಟ್ಟದ ಹೆಬ್ಬಂಡೆ ಆಗಿ ಅದರಲ್ಲೊಂದು
ಮರವಾಗಿದ್ದಿದ್ದರೆ ಎಷ್ಟು ಜೀವಿಗಳು
ಗೂಡು ಕಟ್ಟುತ್ತಿದ್ದವೋ

ನನ್ನಂತವರು ಮನುಷ್ಯರಾಗಿ ಹುಟ್ಟಿ
ಏನೇನು ಮಾಡಿದೆವೋ ಯಾರ್ಯಾರು
ದಾರಿ ತಪ್ಪಿಸಿದರೋ ಹಳಿದೇನು ಫಲ…

ಅಮಾಯಕ ವೇಷಗಳಲ್ಲಿ
ಎಷ್ಟೊಂದು ಬರ್ಬರ ನಾಟಕ
ಬೆಳಕ ನುಂಗುವ ಕೂಪಗಳೆಲ್ಲ ನಮ್ಮವೇ

ಹಳ್ಳ ಹೊಳೆ ತೊರೆ ನದಿ
ಕಡಲೆಲ್ಲ ಬೇರೆ ಬೇರೆಯೇ
ಮಳೆಯ ನೀರಾಗುವ ಆಸೆ

ಆಗಲಾದರೂ ನಾನು ಎಲ್ಲರ ದಾಹಕ್ಕೆ ಪನ್ನೀರಾಗುವೆ.
••••••••••
ಹೋಗಿ ಬನ್ನಿ ಸಾರ್…
ಅನಿವಾರ್ಯವಾಗಿ ನಿಮ್ಮ ಈ ಅಗಲಿಕೆಯನ್ನು ಒಪ್ಪಿಕೊಳ್ಳಬೇಕಾಗಿದೆ.
ಅಂತಿಮ ನಮನಗಳು🌹🙏🌹
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed