ರೈತರು ನೇಗಿಲ ಹೊತ್ತು, ಹೊಲಕ್ಕೆ ಹೋಗದೆ ಸರ್ವೆ ಇಲಾಖೆಗೆ……
1 min read
ರೈತರು ನೇಗಿಲ ಹೊತ್ತು, ಹೊಲಕ್ಕೆ ಹೋಗದೆ ಸರ್ವೆ ಇಲಾಖೆಗೆ

ಪ್ರಕರಣ ಇತ್ಯರ್ಥಕ್ಕೆ ನಿರ್ಲಕ್ಷ್ಯ ಪೋಡಿ ಮುಕ್ತ ಗ್ರಾಮಕ್ಕೆ ಅಡಚಣೆ
ಮುಂದಿನ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವ ಬಗ್ಗೆ ಕಂದಾಯ ಸಚಿವರು ಮಾಡಿದ್ದಾರೆ. ತಾಲೂಕಿನಲ್ಲಿ ಘೋಷಣೆ ಆದರೆ ಸಾವಿರಾರು ಪೋಡಿ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ. ಮಂಜುನಾಥಗೌಡ ದೂರಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯದಲ್ಲಿ 1ಲಕ್ಷಕ್ಕೂ ಅಧಿಕ ರೈತರ ಪೋಡಿ ಪ್ರಕರಣಗಳು ಬಾಕಿ ಉಳಿದಿವೆ. ಇದನ್ನೆಲ್ಲ ಗಮನಿಸಿದ ಕಂದಾಯ ಆಯುಕ್ತ ಮೌನೀಶ್ ಮುದ್ದೀಲ್ ಅವರು 2018ರಲ್ಲಿ ಪೋಡಿ ತಕರಾರು ಪ್ರಕರಣಗಳನ್ನು ಬಗೆಹರಿಸುವ ವಿಧಾನ ವಿವರಿಸಿ 22 ಪುಟದ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಅಧಿಕಾರಿಗಳು ಸುತ್ತೋಲೆಯಂತೆ ಕಾರ್ಯನಿರ್ವಹಿಸಿಲ್ಲ.
ನಂತರ 2025ರಲ್ಲಿ ತುರ್ತಾಗಿ ಪೋಡಿ ಮಾಡಿ ನೀಡಲು ವರದಿ ತಹಸೀಲ್ದಾರರು ಸರ್ವೆ ಇಲಾಖೆಗೆ ಆದೇಶಿಸಿದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಸರ್ವೆಯರ್ ಹಾಗೂ ಮೇಲ್ವಿಚಾರಕರು ಸ್ಥಳಕ್ಕೆ ಬಂದಿದ್ದು,ರೈತರ ಹಿಸ್ಸೆಗಳನ್ನು ಅಳತೆ ಮಾಡಿ ನಕ್ಷೆ ತಯಾರಿಸುವ ಬದಲು, ಅನುಭವದಂತೆ ಆಳತೆ ಮಾಡಿ ನಕ್ಷೆ ತಯಾರಿಸಿ ಸರಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಸರಕಾರದ ಸುತ್ತೋಲೆಯಲ್ಲಿ ಅನುಭವದಂತೆ ಅಳತೆ ಮಾಡಿ ನಕ್ಷೆ ಅವಕಾಶವಿಲ್ಲ ತಯಾರಿಸಲು ಎಂದು ಹೇಳಿದರು.
ಪೋಡಿ ಪ್ರಕ್ರಿಯೆಯಲ್ಲಿ ಪ್ರತಿ ರೈತರ ಹಿಸ್ಸೆ, ಪಹಣಿ ದಾಖಲೆಗೆ ಅನುಸಾರ ಅಳತೆ ಮಾಡಿ ನಕ್ಷೆ ತಯಾರಿಸಲು ಭೂ ಕಂದಾಯ ನಿಯಮ 50 ರಲ್ಲಿ ಸ್ಪಷ್ಟಪಡಿಸಿದೆ. ಆದರೂ ಸರಕಾರದ ನಿರ್ದೇಶನದಂತೆ ಪೋಡು ಮುಕ್ತ ಗ್ರಾಮವನ್ನಾಗಿಸಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಬದಲಾಗಿ ಸರ್ವೆ ಅಧಿ ಕಾರಿಗಳು ಸರಕಾರ ನಿಯಮ ಗಾಳಿಗೆ ತೂರಿ ಅನುಭವದಂತೆ ನಕ್ಷೆ ತಯಾರಿಸುವ ಮೂಲಕ ಅಕ್ಕಪಕ್ಕದ ತೋಟದ ಮಾಲೀಕರೊಂದಿಗೆ ಘರ್ಷಣೆ ಉಂಟು ಮಾಡುವ ಹಾಗೂ ಕೋರ್ಟ್, ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.
ಇದನ್ನೆಲ್ಲ ಪ್ರಶ್ನಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಅ.3ರಂದು ರೈತರು ನೇಗಿಲ ಹೊತ್ತು, ಹೊಲಕ್ಕೆ ಹೋಗದೆ ಸರ್ವೆ ಇಲಾಖೆಗೆ ತೆರಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರೈತ ಮುಖಂಡರಾದ ವನಶ್ರೀಗೌಡ, ರಘು ಬಿಳ್ಳೂರು, ಚಂದ್ರೇಗೌಡ ಕೆಲ್ಲೂರು, ರಾಜ್ ಮೋಹನ್,ಬಿ.ಸಿ.ರವಿ. ಉಪಸ್ಥಿತರಿದ್ದರು.

