ಆಗುಂಬೆಯ ಕಾಳಿಂಗ ಸರ್ಪಗಳ ಶೋಷಣೆ ಮೇಲೆ ಕೇಸ್ ಏಕಿಲ್ಲ?*..
1 min read
*ಆಗುಂಬೆಯ ಕಾಳಿಂಗ ಸರ್ಪಗಳ ಶೋಷಣೆ ಮೇಲೆ ಕೇಸ್ ಏಕಿಲ್ಲ?*
ತನಿಖೆ ಮಾಡದೆ ಆಮಿಷಕ್ಕೆ ಬಲಿಯಾದ ಅಧಿಕಾರಿಗಳು!
ಮಾನ್ಯರೇ
ಕಾಳಿಂಗ ಹೆಸರಲ್ಲಿ ಅಕ್ರಮ ಚಟುವಟಿಕೆ ಮಾಡುವರ ಬೆನ್ನಿಗೆ ನಿಂತ ಅರಣ್ಯ ಇಲಾಖೆ?ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನೂರಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಹಿರಿಯ ಅಧಿಕಾರಿಗಳು.
ಶಿವಮೊಗ್ಗ ಸಮೀಪ ಮತ್ತೂರು ರಸ್ತೆಯಲ್ಲಿ ಹೆಬ್ಬಾವು ಹಿಡಿದವರ ಮೇಲೆ ಕೇಸ್ ದಾಖಲು. ದಸರಾ ಆನೆಗಳ ಜೊತೆ ಫೋಟೋ ತೆಗೆಸಿಕೊಂಡ ಯುವತಿಯ ಮೇಲೆ ಕೇಸು ದಾಖಲು.
ಆದರೆ ದೂರು ಬಂದು ಇಪ್ಪತ್ತು ದಿನಕಳೆದರೂ ಕಾಳಿಂಗ ಸರ್ಪಗಳ ಶೋಷಣೆ ಮಾಡುತ್ತಿರುವ ಅಜಯ್ ಗಿರಿ, ಪ್ರದೀಪ್ ಹೆಗ್ಡೆ, ಗೌರಿಶಂಕರ್,ARRS ,ಕಾಳಿಂಗ ಮನೆ ರೆಸಾರ್ಟ್,ಕಾಳಿಂಗ ಮನೆ ಗೌರಿಶಂಕರ್ ಇತರೆ ಸಮೂಹ ಸಂಸ್ಥೆಗಳ ಮೇಲೆ ಕೇಸ್ ಏಕಿಲ್ಲ? ಅರಣ್ಯ ಕಾನೂನುಗಳು ಅನ್ವಯವಾಗುವುದು ಕೇವಲ ಸಾಮಾನ್ಯ ಜನರಿಗೆ ಮಾತ್ರವೇ? ಶ್ರೀಮಂತರು ಮತ್ತು ಪ್ರಭಾವಿಗಳು ಕಾನೂನುಗಳನ್ನು ಮೀರಿದವರೇ? ಅರಣ್ಯ ಇಲಾಖೆಯ ಈ ದ್ವಂದ್ವ ನಿಲುವು ಏಕೆ?ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆಗುಂಬೆಯಲ್ಲಿ ಕಾಳಿಂಗ ಸರ್ಪ ರಕ್ಷಣೆ ,ಪ್ರವಾಸೋದ್ಯಮ ಹೆಸರಿನಲ್ಲಿ ಕಾಳಿಂಗಗಳ ಅಕ್ರಮ ಬಂಧನ,ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನಧಿಕೃತ ಹಗಲು-ರಾತ್ರಿ ಕಾಡು ಪ್ರವೇಶ, ತಿರುಗಾಟ, ಫೋಟೋ ಶೂಟ್, ವಿಡಿಯೋ ಚಿತ್ರೀಕರಣ, ಕಾಳಿಂಗದ ಮೊಟ್ಟೆಗಳನ್ನು ತಂದು ತಮ್ಮ ಕೇಂದ್ರಗಳಲ್ಲಿ ಕೃತಕವಾಗಿ ಮರಿ ಮಾಡಿರುವುದು, ಆ ಸಂದರ್ಭದಲ್ಲಿ ಹೈ ಫೌಕಸ್ ಲೈಟ್ ಬಳಸಿ ಮರಿಗಳು ಹೊರ ಬರುವ ವೇಳೆಯಲ್ಲಿ ವಿಡಿಯೋ ಚಿತ್ರೀಕರಣ, ಅರಣ್ಯ ಒತ್ತುವರಿ, ಸಂರಕ್ಷಿತ ಪ್ರದೇಶದಲ್ಲಿ ಜಮೀನು ಖರೀದಿ, ರೆಸಾರ್ಟ್,ಟೆಂಟ್ಸ್, ಕಾಟೇಜ್ ನಿರ್ಮಿಸಿ ಪ್ರವಾಸಿಗರನ್ನು ಕರೆಸಿ ಅರಣ್ಯೀತರ ಚಟುವಟಿಕೆ, ಮೊದಲಾದ ಹೆಸರಿನಲ್ಲಿ ಸರಣಿ ಅಕ್ರಮಗಳು ನಡೆದಿವೆ. ಇದಕ್ಕೆಲ್ಲಾ ಸಾಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲೇ ಲಭ್ಯವಿದೆ.ರಾಜಾರೋಷವಾಗಿ ವೈಭವೀಕರಿಸಿ ರೀಲ್ಸ್ ಹಾಕುವುದು,ವಿಡಿಯೋ, ಫೋಟೋ ಹಾಕಿ ತಮ್ಮ ವಾಣಿಜ್ಯ ಚಟುವಟಿಕೆ ಹೆಚ್ಚಿಸಿಕೊಳ್ಳಲು ಗ್ರಾಹಕರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸಿಕ್ಕಿದೆ,ಇನ್ನೂ ಚಲನಚಿತ್ರ ನಟ-ನಟಿಯರು, ಸೆಲೆಬ್ರಿಟಿಗಳು, ವನ್ಯಜೀವಿ ಛಾಯಾಗ್ರಾಹಕರು, ವನ್ಯಜೀವಿ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಯೂಟ್ಯೂಬ್ ರ್ಸ್ ‘ಕಾಳಿಂಗ ಮನೆ’ ಸಮೂಹ ಸಂಸ್ಥೆಗಳ, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೆ(ARRS )ಬಂದು ಹೋಗಿದ್ದಾರೆ.
ಕಾನೂನು ಉಲ್ಲಂಘನೆ:
ಅಕ್ರಮವಾಗಿ ಕಾಡು ಪ್ರವೇಶಿಸಿದ್ದಾರೆ, ದಿನಗಟ್ಟಲೆ ಚಿತ್ರೀಕರಣ, ಮೋಜು-ಮಸ್ತಿ ನಡೆಸಿದ್ದಾರೆ. ಈ ಕೃತ್ಯಗಳೆಲ್ಲಾ , ಸಂರಕ್ಷಣೆ ಹೆಸರಿನಲ್ಲಿ ನಡೆದಿದೆ. 2017 ರ ಆಗಸ್ಟ್ ನಲ್ಲೇ ಸಂಶೋಧಕ ಗೌರಿಶಂಕರ್ ಅವರಿಗೆ ಕಾಳಿಂಗ ಸರ್ಪ ಸಂಶೋಧನೆಗೆ ಇದ್ದ ಅನುಮತಿಯ ಅವಧಿಯೂ ಮುಗಿದಿದೆ. ಇನ್ನು ಅಜಯ್ ಗಿರಿ, ಪ್ರದೀಪ್ ಹೆಗ್ಡೆ ಯಾರಿಗೂ ಅನುಮತಿ ಇಲ್ಲ. ಎಲ್ಲವೂ ಅಕ್ರಮವಾಗಿ ನೆಡೆಯುತ್ತಾ ಬಂದಿದೆ. ಸಂರಕ್ಷಣೆ ಹೆಸರಿನಲ್ಲಿ ಸರಣಿ ಕಾನೂನು ಬಾಹಿರ ಕೃತ್ಯಗಳು ಜರುಗಿವೆ.
ಅರಣ್ಯ ಸಚಿವರಿಗೆ ಸರಣಿ ದೂರುಗಳು ದಾಖಲು:
ಅರಣ್ಯ ಮಂತ್ರಿಗಳಿಗೆ ಸರಣಿ ದೂರುಗಳ ಸರಮಾಲೆಯೇ ಹೋಗಿದೆ. ಸಾಮಾಜಿಕ,ಪರಿಸರ ವನ್ಯಜೀವಿ ಕಾರ್ಯಕರ್ತರು,ರೈತರ ಸಂಘ,ರಾಜಕೀಯ ಪಕ್ಷಗಳು ಸೇರಿದಂತೆ ಹಲವಾರು ಜನ ದೂರು ನೀಡಿ ಸಮಗ್ರ ತನಿಖೆ ಮತ್ತು ಕೇಸು ದಾಖಲು ಮಾಡಲು ದೂರು ನೀಡಿದ್ದಾರೆ. ಆದರೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಅಕ್ರಮ ಧಂದೆ ಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೃದು ಧೋರಣೆ ಅನುಸರಿಸುತ್ತಿದ್ದಾರೆ ,ಹಿರಿಯ ಅಧಿಕಾರಿಗಳು ಇವರ ಅಮೇಶಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಖುದ್ದು ಅರಣ್ಯ ಸಚಿವರೇ ಆದೇಶ ಮಾಡಿ 18 ದಿನ ಕಳೆದರೂ, ಅಧಿಕಾರಿಗಳಿಂದ ಸಚಿವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪ್ರಭಾವಿಗಳ ಪರ ಲಾಬಿ ಮಾಡುತ್ತಾ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗುತ್ತಿದ್ದಾರೆ,ಸಚಿವರು ಕೂಡಲೇ ಇದರಲ್ಲಿ ಶಾಮಿಲಿ ಆಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ,ಸೇವೆಯಿಂದ ಅಮಾನತು ಮಾಡಬೇಕು ಎನ್ನುವ ಒತ್ತಾಯ ಕೂಡ ಕೇಳಿಬಂದಿದೆ.
ಕಾಯಿದೆಗಳ ಸರಣಿ ಉಲ್ಲಂಘನೆ:
ಭಾರತೀಯ ಅರಣ್ಯ ಕಾಯ್ದೆ-1927, ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972, ಪರಿಸರ ಸಂರಕ್ಷಣಾ ಕಾಯ್ದೆ-1986 ,ಕರ್ನಾಟಕ ಅರಣ್ಯ ಇಲಾಖೆ ಮಾಡಿರುವ ಹಾವು ಸಂರಕ್ಷಣೆ SOP ಗಳು(ಮಾರ್ಗಸೂಚಿ) ಉಲ್ಲಂಘನೆ ಆಗಿದ್ದರೂ, ಅಧಿಕಾರಿಗಳು ಏನು ಆಗಿಲ್ಲ ಎಂಬಂತೆ ನಾಟಕವಾಡುತ್ತಿದ್ದಾರೆ.
ಕಾರ್ಕಳ ವಿಭಾಗದ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಯಾವುದೇ ಕ್ರಮ ಕೈಗೊಂಡಿಲ್ಲ. ಶ್ರೀಮಂತರ ಪರ ನಿಂತಿದ್ದಾರೆ. ಸೋಮೇಶ್ವರ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಯಲ್ಲಿ ಇಷ್ಟೆಲ್ಲಾ ಅಕ್ರಮ ಚಟುವಟಿಕೆ ನೆಡೆಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ತೀರ್ಥಹಳ್ಳಿ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಮೊದಲಾದವರು ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಚಟುವಟಿಕೆ ಮಾಡಿದವರ ಪರ ನಿಂತಿದ್ದಾರೆ. ಇನ್ನು ಪ್ರಕರಣ ದಾಖಲು ಮಾಡಿಲ್ಲ, ಇವರೆಲ್ಲ ಪ್ರಭಾವಕ್ಕೆ ಆಮೇಶಕ್ಕೆ ಬಲಿಯಾಗದಂತೆ ಕಾಣುತ್ತಿದ್ದೆ . ಸಾರ್ವಜನಿಕರಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972ರ ಪರಿಚ್ಛೇದ-1ರಲ್ಲಿ ಬರುವ ಕಾಳಿಂಗ ಸರ್ಪಗಳ ಬಗೆಗೆ, ವಿಶೇಷ ಮುತುವರ್ಜಿ ವಹಿಸ ರಕ್ಷಿಸಬೇಕಾದ ಹಾವಿನ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ ಎಂದು ಸರಣಿ ದೂರುಗಳು ದಾಖಲಾಗಿದ್ದರೂ, ಶ್ರೀಮಂತರ ಪರ ಲಾಬಿ ಮಾಡುತ್ತಿರುವ ಇವರುಗಳ ಕರ್ತವ್ಯ ಲೋಪ ಸಹಿಸಲಾಗದ್ದು.
ಸರ್ಕಾರ ದಿಟ್ಟ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ತನಿಖೆ ನಿಷ್ಪಕ್ಷಪಾತವಾಗಿ ನಡೆದು ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕಾಳಿಂಗ ಸರ್ಪಗಳ ಮೇಲಿನ ಶೋಷಣೆ ನಿಲ್ಲಬೇಕು ಎಂದು ಪರಿಸರ ಪ್ರಿಯರು ಒತ್ತಾಯ ಮಾಡುತ್ತಿದ್ದಾರೆ.
ಪರಿಸರ/ವನ್ಯಜೀವಿ ಪ್ರೇಮಿಗಳು
ದೂರುದಾರರು.
ಮೂಕ ಜೀವಿಗಳಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ನೆಡೆಯುತ್ತದೆ.
‘ಕಾಳಿಂಗ ಉಳಿಸಿ ಅಭಿಯಾನ ‘
ಆಗುಂಬೆಯಲ್ಲಿ ಕಾಳಿಂಗ ಹಾವುಗಳ ಮುಕ್ತ ಬದುಕಿಗೆ ಒತ್ತಾಯಿಸಿ….
ವರದಿ….
ನಾಗರಾಜು.ಕೂವೆ.





