लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೊಂದು ಮರುಭೇಟಿ….

1 min read

*ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೊಂದು ಮರುಭೇಟಿ….*

ಸಮಾಜ ಮೌಢ್ಯದಿಂದ, ಜಾತಿ ಪದ್ಧತಿಯಿಂದ ಹೊರಬಂದು ಸರಳವಾದ ವಿವಾಹವನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು ಎಂಬ ಸದಾಶಯದೊಂದಿಗೆ ರಾಷ್ಟ್ರಕವಿ ಕುವೆಂಪು ಅವರು ರಚಿಸಿ ಕೊಟ್ಟಿದ್ದು ಮಂತ್ರ ಮಾಂಗಲ್ಯ ವಿವಾಹ ಸಂಹಿತೆ, ತಾವು ರಚಿಸಿದ ಈ ಮಂತ್ರ ಮಾಂಗಲ್ಯಕ್ಕೆ ಬೇರೊಬ್ಬರ ಮಗನನ್ನು ವರನನ್ನಾಗಿ ಮಾಡದೆ ತಮ್ಮ ಮಗ ತೇಜಸ್ವಿ ಅವರನ್ನೇ ಮೊದಲನೆಯ ವರನನ್ನಾಗಿಮಾಡಿದವರು ಕುವೆಂಪುರವರು.

ಇಂತಹ ಮಂತ್ರ ಮಾಂಗಲ್ಯದ ಮೂಲಕ ಪೂರ್ಣಚಂದ್ರ ತೇಜಸ್ವಿಯವರು ಬಾಳ ಸಂಗಾತಿಯಾಗಿ ಪರಸ್ಪರ ಕೈ ಹಿಡಿದಿದ್ದು ರಾಜೇಶ್ವರಿ ಅವರನ್ನು, ಬಾಳ ಸಂಗಾತಿಯಾಗಿ ರಾಜೇಶ್ವರಿ ಅವರನ್ನು ಕೈ ಹಿಡಿದರೆ, ಜೀವನದ ಸಂಗಾತಿಯನ್ನಾಗಿ ಕೈ ಹಿಡಿದದ್ದು ಬಜಾಜ್ ವೆಸ್ಪಾ ಸ್ಕೂಟರ್ ನ್ನು. ತೇಜಸ್ವಿಯವರ ಬದುಕಿನೂದ್ದದ ಪಯಣದಲ್ಲಿ ಅವರು ಬಳಸುತ್ತಿದ್ದ ಈ ಬಜಾಜ್ ವೆಸ್ಪಾ ಸ್ಕೂಟರ್ ಅವರ ಸಾಹಿತ್ಯ ಲೋಕದಲ್ಲಿ ಒಂದು ಕಥನದಂತೆ ತೆರೆದುಕೊಂಡಿದೆ.

ತೇಜಸ್ವಿ ಅವರ ಬದುಕಿನ ದಿನಮಾನಗಳಲ್ಲಿ, ಅವರನ್ನು ಭಿನ್ನ ವಿಭಿನ್ನವಾಗಿ ಒಂದು ರೋಚಕದ ಜಾಡಿನಲ್ಲಿ ನಿರಂತರವಾಗಿ ಏರುಸಿರು ಬಿಡುತ್ತಾ ರಂಜನೀಯವಾಗಿ ಪರಮಾಪ್ತ ಗೆಳೆಯನಂತೆ ಹೊತ್ತೊಯ್ದದ್ದು ಈ ಬಜಾಜ್ ವೆಸ್ಪಾ ಸ್ಕೂಟರ್.

ನಿರುತ್ತರ ದಿಂದ ತೇಜಸ್ವಿಯವರು ದೈಹಿಕವಾಗಿ ನಿರ್ಗಮಿಸಿದ ನಂತರ, ಹಲವು ದಶಕಗಳ ಕಾಲ ಅವರ ಒಡನಾಡಿಯಾಗಿ,ಅವರ ಸಾಹಿತ್ಯ ಲೋಕದ ಅನೇಕ ಕಥನಕ್ಕೆ ಕಾರಣವಾಗಿ, ಈಗ ದಂತಕತೆಯಾಗಿರುವ ಈ ಬಜಾಜ್ ವೆಸ್ಬಾ ಸ್ಕೂಟರ್ ಈಗ ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿಷ್ಠಾನದೊಳಗೆ,ತನಗಾಗಿ ಒಂದು ಎತ್ತರದ ಸಿಂಹಾಸನವನ್ನು ಪಡೆದುಕೊಂಡು, ಪ್ರತಿಷ್ಠಾನದ ಒಳಗೆ ಕಾಲಿಟ್ಟವರನ್ನೆಲ್ಲ ಭಾವನಾತ್ಮಕವಾಗಿ
ಬಾ ಇಲ್ಲಿ…ಎಂದು ಕೈ ಚಾಚಿ ಆಕರ್ಷಣೀಯವಾಗಿ ತನ್ನತ್ತ ಸೆಳೆದು, ಮನವನ್ನು ಮುಧಗೊಳಿಸುತ್ತದೆ ಈ ಬಜಾಜ್ ವೆಸ್ಪಾ ಸ್ಕೂಟರ್.

ಮೂಡಿಗೆರೆಯ ಕಸಾಪ ದಲ್ಲಿರುವ ಸಾಹಿತ್ಯದ ಒಡನಾಡಿಗಳೊಂದಿಗೆ, ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿಷ್ಠಾನಕ್ಕೆ, ತೇಜಸ್ವಿಯವರ 88ನೇ ಜನ್ಮದಿನಾಚರಣೆಯಂದು ಭೇಟಿ ನೀಡಿದ್ದೆವು.

ಈ ಸಂದರ್ಭದಲ್ಲಿ ಪ್ರತಿಷ್ಠಾನದಲ್ಲಿರುವ ನನ್ನ ಗೆಳೆಯರು ಕೊಟ್ಟ ಆತಿಥ್ಯವನ್ನು ಸ್ವೀಕರಿಸಿ, ವಸ್ತು ಸಂಗ್ರಾಲಯ ವೀಕ್ಷಿಸಿ, ಪುಸ್ತಕ ಭಂಡಾರದ ಮೇಲೆ ಕಣ್ಣಾಡಿಸಿ, ಅವರ ಕ್ಯಾಮರಾದ ಕಣ್ಣಿಗೆ ಎದುರಾಗಿ, ಬಿಸಿಬಿಸಿಯಾದ ಗುಣಮಟ್ಟದ ರುಚಿಕರ ಕಾಫಿ ಮತ್ತು ವಡೆ ಸೇವಿಸಿ, ತೇಜಸ್ವಿಯವರ ಬದುಕು~ಬರಹ ಮತ್ತು ಅವರ ಸಾಹಿತ್ಯಕ್ಕೆ ಪರಸ್ಪರ ಒಂದಷ್ಟು ಮುಖಾಮುಖಿಯಾಗಿ, ತೇಜಸ್ವಿಯವರು ಬದುಕಿದ ಒಂದು ಅದ್ಭುತ ಕಲೆಯನ್ನು ಮೆಲುಕು ಹಾಕಿ, ಕೊನೆಗೆ ಪುಸ್ತಕಗಳನ್ನು ಕೊಂಡು ಕೈಯಲ್ಲಿ ಹಿಡಿದು ಹಿಂದಿರುಗಿದೆವು.
•••••••••••••••✒️
ಡಿ.ಎಂ.ಮಂಜುನಾಥಸ್ವಾಮಿ

About Author

Leave a Reply

Your email address will not be published. Required fields are marked *

You may have missed