ಜಿಲ್ಲೆಯಲ್ಲಿ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ರಾಣಿಅಬ್ಬಕ್ಕ ರಥಯಾತ್ರೆ……
1 min read
ಜಿಲ್ಲೆಯಲ್ಲಿ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ
ರಾಣಿಅಬ್ಬಕ್ಕ ರಥಯಾತ್ರೆ
ಚಿಕ್ಕಮಗಳೂರು: ಭಾರತದ ಮೊದಲ
ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ರಾಣಿ ಅಬ್ಬಕ್ಕರವರ 500 ಜಯಂತ್ಯೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹ ಭಾಗಿತ್ವದಲ್ಲಿ ಗುರುವಾರ ಜಿಲ್ಲೆಗಾಗಮಿಸಿದ ರಥ-‘ಯಾತ್ರೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಥಯಾತ್ರೆಯನ್ನು ಸ್ವಾಗತಿಸಲು ನೂರಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಎಬಿವಿಪಿ ಧ್ವಜವನ್ನಿಡಿದು ನಗರದ ಓಂಕಾರೇಶ್ವರ ದೇವಾಲಯದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ವೀರರಾಣಿ ಅಬ್ಬಕ್ಕರವರ ಜಾಥಾಕ್ಕೆ ಇನ್ನಷ್ಟು ಮೆರಗು ತಂದರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ ಭವ್ಯ ಭಾರತದ ಮೇಲೆ ಪರಕೀಯರ ಆಕ್ರಮಣವಾದಾಗ ಧೈರ್ಯದಿಂದ ಎದುರಿಸಿದ ಪ್ರತಿಯೊಬ್ಬರು ಸ್ವಾತಂತ್ರ್ಯದ ಹೋರಾಟಗಾರರು. ಮೊಘಲರನ್ನು ಮತ್ತು ಬ್ರಿಟೀಷರ ವಿರುದ್ದ ಮಾತ್ರವಲ್ಲದೇ, ಪ್ರತಿ ಸಂದರ್ಭದಲ್ಲೂ ಭಾರತದ ಮೇಲೆ ಪರಕೀಯರ ದಾಳಿಯಾದಾಗ ದಿಟ್ಟತನದಿಂದ ಹೋರಾಡಿದ ಪ್ರತಿಯೊಬ್ಬರು ಸ್ವಾತಂತ್ರ ಹೋರಾಟಗಾರರೇ ಎಂದರು.
ಅಂತಹ ಸಾಲಿನಲ್ಲಿ ವೀರರಾಣಿ ಅಬ್ಬಕ್ಕನವರು ಪೋರ್ಚುಗೀಸರನ್ನು ಎದುರಿಸಿ, ಯಶೋಗಾಧೆಯನ್ನು ದಾಖಲಿಸಿ ಐತಿಹಾಸಿಕವಾಗಿ ನಮ್ಮೆಲ್ಲರಿಗೂ ಸ್ಫೂರ್ತಿ ನೀಡಿದವರನ್ನು ಐದು ಶತಮಾನದ ನಂತರವು ಆ ಮ ಹಾತಾಯಿ ಅಬ್ಬಕ್ಕರವರ ನೆನಪಿಸಿಕೊಂಡು ನಮಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ಎಬಿವಿಪಿ ಪ್ರಮುಖ್ ಕುಮಾರೇಗೌಡ ಮಾತನಾಡಿ ದಾವಣಗೆರೆ ಜಿಲ್ಲೆಯಿಂದ ಆರಂಭಗೊಂಡ ರಾಣಿ ಅಬ್ಬಕ್ಕನವರ ರಥಯಾತ್ರೆಯು ಚಿತ್ರದುರ್ಗ, ತುಮಕೂರು, ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಆಗಮಿಸಿದೆ. ಇಂದು ಜಿಲ್ಲೆಯ ಬಾಳೆಹೊನ್ನೂರಿನಿಂದ ಶೃಂಗೇರಿಗೆ ತಲುಪಿ ವ್ಯಾಸ್ತವ್ಯ ಹೂಡುವ ಮೂಲಕ ನಾಳೆ ಶಿವಮೊಗ್ಗ ಜಿಲ್ಲೆಗೆ ಪಾದಾರ್ಪಣೆ ಮಾಡಲಿದೆ ಎಂದು ತಿಳಿಸಿದರು.
ರಾಣಿ ಅಬ್ಬಕ್ಕನವರ ಸ್ವಾತಂತ್ರ ಸಂಗ್ರಾಮ ಹೋರಾಟವು ಪ್ರತಿಯೊಂದು ಮಹಿಳೆಯರಿಗೆ ಸ್ಫೂರ್ತಿದಾ ಯಕವಾಗಿದೆ. ಐನೂರು ವರ್ಷಗಳ ನಂತರವು ಅಬ್ಬಕ್ಕನವರ ನೆನಪನ್ನು ಮೆಲುಕು ಹಾಕಲು ದೇಶಕ್ಕೆ ನೀಡಿರುವ ಕೊಡುಗೆಗಳೇ ಕಾರಣ. ಹೀಗಾಗಿ ಇದೇ ತಿಂಗಳು ಸೆ.17 ರಂದು ಅಬ್ಬಕ್ಕನವರ ಹುಟ್ಟೂರು ಮಂಗಳೂರಿನ ಉಲ್ಲಾಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ, ಸಂಚಾಲಕ ಧನುಶ್, ರಾಜ್ಯಕಾರ್ಯಕಾರಿಣಿ ಸದಸ್ಯ ದೀಪಕ್, ವಿಭಾಗ ಎಸ್ಎಫ್ಡಿ ಸಂಚಾಲಕ ರಾಕೇಶ್, ರಾಜ್ಯ ಸಹ ಕಾರ್ಯ ದರ್ಶಿ ಗುರುಪ್ರಸಾದ್, ಪ್ರಾಂತ ವಿದ್ಯಾರ್ಥಿ ಪ್ರಮುಖ್ ಸುಧಾ, ನಗರಾಧ್ಯಕ್ಷ ಶ್ರೀಕಾಂತ್, ಮುಖಂಡರು ಗಳಾದ ಪ್ರೇಮ್ ಕುಮಾರ್, ಗಿರಿಜಾಶಂಕರ್, ಹಿರೇಮಗಳೂರು ಪುಟ್ಟಸ್ವಾಮಿ, ಮಲ್ಲಿಕಾರ್ಜುನ್ರಾವ್, ಸೀತ ರಾಮಭರಣ್ಯ, ಜಸಂತಾ ಅನಿಲ್ಕುಮಾರ್, ಪ್ರದೀಪ್, ಕೆ.ಪಿ.ವೆಂಕಟೇಶ್, ಹೆಚ್. ಕೆ.ಕೇಶವಮೂರ್ತಿ ಇದ್ದರು.
ವರದಿ……
ಭಾರಥಿಉಮೇಶರಾಜಅರಸು.
ಚಿಕ್ಕಮಗಳೂರು..

