ರಂಗಭೂಮಿ ಗುರಿಯಲ್ಲ ಅದು ಮಾರ್ಗ….
1 min read
ಅವಿನ್ ಟಿವಿ ಸುದ್ದಿಜಾಲ ✒️: ರಂಗಭೂಮಿ ಗುರಿಯಲ್ಲ ಅದು ಮಾರ್ಗ….
ಹಾಗಾಗಿ ಅದು ನಮ್ಮನ್ನು ಗೈಡ್ ಮತ್ತು ಡ್ರೈವ್ ಮಾಡಿ ಒಂದು ರೈಟ್ ಪ್ಲೇಸನಲ್ಲಿ ಪಾರ್ಕಿಂಗ್ ಮಾಡುತ್ತದೆ.
ಯೋಚನೆಯಲ್ಲಿ ಸಂಸ್ಕಾರದಲ್ಲಿ ಭಾರತೀಯ ಸಮಾಜ ಮುಂದಿದೆ ಎಂದು ಹೇಳುತ್ತಾರೆ,ಆದರೆ, ಅದನ್ನು ಇದ್ದಂತೆ ಇಡಿಯಾಗಿ ಸ್ವೀಕರಿಸಿ, ನುಡಿದಂತೆ ನಡೆಯಲಾಗದೆ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಕಾರಣ, ಇಂದು ಭಾರತ ಎಂಬುದು ಮಾತು ಸೋತ ಭಾರತವಾಗಿ ಸಾಗುತ್ತಿದೆ.
ಮಾತು ಸೋತ ಭಾರತವನ್ನು ಭವ್ಯ ಭಾರತವನ್ನಾಗಿ ಮಾಡಿ, ವಿಶ್ವಗುರುವಿನ ಸ್ಥಾನಕ್ಕೆ ಎತ್ತಿ ನಿಲ್ಲಿಸಬೇಕಾದರೆ, ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮಾನವೀಯ ಸಂಬಂಧಗಳಂತಹ ವಿಚಾರಧಾರೆಯನ್ನು ಪ್ರತಿಪಾದಿಸುವ ರಂಗಭೂಮಿ ಶಿಕ್ಷಣದತ್ತ ಮುಖ ಮಾಡಬೇಕಿದೆ.
ರಂಗಭೂಮಿಯ ಮೂಲಕ ಒಂದು ಎತ್ತರದ ನಿಲುವಿನೊಂದಿಗೆ ದೊಡ್ಡ ದೊಡ್ಡ ಬದುಕನ್ನು ಅನೇಕರು ಬೌದ್ಧಿಕವಾಗಿ ದಕ್ಕಿಸಿಕೊಂಡು, ಜೀವನವನ್ನು ಸರಳಿಕರಣ ಗೊಳಿಸಿಕೊಂಡಿದ್ದಾರೆ, ಹಾಗೆ ಸಾಮಾನ್ಯ ಶಿಕ್ಷಣಕ್ಕೂ ರಂಗ ಶಿಕ್ಷಣಕ್ಕೂ ಒಂದು ವ್ಯತ್ಯಾಸದ ಗೆರೆ ಇದೆ, ಇದು ಹೆಚ್ಚೇನು ಅಂತರವಿಲ್ಲ, ಒಂದು ಕೂದಲೆಯಷ್ಟೇ ಅಂತರ ಮಾತ್ರ,ಈ ಕೂದಲೆಳೆಯುಸ್ಟೇ ಅಂತರದಲ್ಲಿ ಬದುಕಿನ ಬಹುದೊಡ್ಡ ವಿಸ್ತಾರವಿದೆ.
ಇಂತಹ ಬದುಕಿನ ದೊಡ್ಡ ದೊಡ್ಡ ವಿಸ್ತಾರ ದೊಂದಿಗೆ, ಭವಿಷ್ಯದಲ್ಲಿ ಭಾರತವನ್ನು ಮತ್ತಷ್ಟು ಬಹುತ್ವದ ಅಡಿಗಲ್ಲಿನೊಂದಿಗೆ ಸದೃಢವಾಗಿ ಕಟ್ಟಲೇಬೇಕಾಗಿರುವುದು ಈ ಕಾಲಘಟ್ಟದ ಒಂದು ಸೂಕ್ಷ್ಮತೆಯಾಗಿದೆ.
ಕಾರಣ,
ಮರೆಯಾಗುತ್ತಿರುವ ಮನುಷ್ಯ ಸಂಬಂಧಗಳ ಪುನರ್ ಕಟ್ಟುವಿಕೆ ಮಾತ್ರವಲ್ಲದೆ, ವೈಜ್ಞಾನಿಕ ಮನೋಭೂಮಿಕೆಯ ತಾಯಿ ಬೇರುಗಳನ್ನು ಚಿಂತನ ರೂಪದಲ್ಲಿ ಮನದೊಳಗೆ ಇಳಿಸುವ ಸಂಬಂಧ ರಂಗ ಶಿಕ್ಷಣ ಪ್ರತಿಯೊಬ್ಬರ ಬದುಕಿನ ನೈಜ ಶಿಕ್ಷಣವಾಗಬೇಕಾಗಿರುವುದರಿಂದ ಇದರ ಆಯ್ಕೆ ಸಾರ್ವತ್ರಿಕರಣ ಗೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ರಂಗ ಶಿಕ್ಷಣದ ಮೌಲ್ಯ ಮತ್ತು ಮಹತ್ವವನ್ನು, ಬಹು ಮುಖ್ಯವಾಗಿ ವಿದ್ಯಾರ್ಥಿ ಮತ್ತು ಯುವ ಜನರಲ್ಲಿ ಪಸರಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಶಿಕ್ಷಣದಲ್ಲಿ ಸಾಹಿತ್ಯ ಕುರಿತು, ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು , ಶ್ರಾವಣ ಸಂಜೆ ಪ್ರಯುಕ್ತ ಪಟ್ಟಣದ ಸದ್ವಿದ್ಯಾ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಇತ್ತೀಚಿಗೆ ವಿದ್ಯಾರ್ಥಿ ಮತ್ತು ಯುವಜನರೊಂದಿಗೆ ಹಮ್ಮಿಕೊಂಡಿತ್ತು.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

